Uncategorizedಬೈಲ್ ಹೊಂಗಲ್
2008 -2009 ನೇ ಸಾಲಿನ ಹಳೆ ವಿದ್ಯಾರ್ಥಿಗಳಿಗೆ ಸಿಹಿ ಬೋಜನ ಏರ್ಪಡಿಸಲಾಗಿತ್ತು.

ಬೈಲಹೊಂಗಲ : ದಿನಾಂಕ 24/4/25ರಂದು ಬೈಲಹೊಂಗಲ ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮೇಳನ ನೆರವೇರಿಸಲಾಗಿತ್ತು. ಪ್ರಾಚಾರ್ಯರಾದ ಸಿ. ವಿ. ಗನಾಚಾರಿ 26.4.2025 ರಂದು ಭೋಜನಕೋಟಕ್ಕೆ ಎಲ್ಲ ಹಳೆಯ 2008-2009 ನೇ ಸಾಲಿನ ವಿದ್ಯಾರ್ಥಿಗಳನ್ನು ಎಲ್ಲ ಉಪನ್ಯಾಸಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲರೂ ಸಹಬಾಳ್ವೆ ಪ್ರೀತಿ ವಿಶ್ವಾಸದಿಂದ ಮುಂದಿನ ಜೀವನ ನಡೆಸಿ ಎಂದು ಸಿಬಿ ಗಣಾಚಾರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ಹಾಗೆ ಹಳೆ ಉಪನ್ಯಾಸಕರು ಮತ್ತು ಪ್ರಸ್ತುತ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಭೋಜನಕೂಟ ವ್ಯವಸ್ಥೆಯನ್ನು ಮಾಡಿದ್ದರು ಹಳೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಡುಗೊರೆ ನೀಡಿ ಸತ್ಕರಿಸಿದರು.