
ಉಗ್ರರ ದಾಳಿ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆ ವಿಚಾರ;
ತಿಮ್ಮಾಪುರ ಅವರು ಬಾಗಲಕೋಟೆಯಲ್ಲಿ ಕುಳಿತು ಈ ರೀತಿ ಮಾತನಾಡುವುದು ಸರಿಯಲ್ಲ. ದಾಳಿ ನಡೆದ ಸ್ಥಳದಲ್ಲಿ ತಿಮ್ಮಾಪುರ ಅವರು ಹೋಗಬೇಕಿತ್ತು ಆಗ ಗೊತ್ತಾಗ್ತಿತ್ತು. ಅವರು ಇಂತಹ ಸರ್ಕಾರದಲ್ಲಿ ಸಚಿವರಾಗಿರೋದು ಅದಕ್ಕೆ ದೇವರೇ ಗತಿ ಜನರ ಮನಸ್ಸನನ್ನ ವಿಷಯಾಂತರ ಮಾಡುವ ಉದ್ದೇಶದಿಂದಲೇ ಇದೀಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಜವಾಹರಲಾಲ್ ನೆಹರೂ ಮಾಡಿದ ತಪ್ಪಿನಿಂದಾಗಿ ಇಂದು ದೇಶ ಅನುಭವಿಸುತ್ತಿದೆ ಎಂದು ಆರೋಪ ಮಾಡಿದ ಅವರು ಸಿಂಧೂ ನದಿ ವಿಚಾರವಾಗಿ ನೆಹರೂ ಮಾಡಿದ ತಪ್ಪನ್ನ ಇಂದು ಮೋದಿ ಸರಿ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದರು.