Uncategorized

ವಿವಾದದ ಹೇಳಿಕೆ ಬೆನ್ನಲ್ಲೇ ‘ಕನ್ನಡಿಗರು ತುಂಬಾನೇ ಒಳ್ಳೆಯವರು’ ಎಂದ ಸೋನು ನಿಗಮ್;

ಸೋನು ನಿಗಮ್ ಅವರು ಬೆಂಗಳೂರಿನ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ.. ಕನ್ನಡ’ ಎಂದು ಪ್ರೀತಿಯಿಂದ ಕರೆಯುವುದಕ್ಕೂ ‘ಕನ್ನಡ.. ಕನ್ನಡ’ ಎಂದು ಧಮ್ಕಿ ಹಾಕುವುದಕ್ಕೂ ವ್ಯತ್ಯಾಸ ಇದೆ ಎಂದು ಮಾತು ಆರಂಭಿಸಿದ್ದಾರೆ ಸೋನು ನಿಗಮ್. ಆ ಬಳಿಕ ಅಂದು ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ‘ವೇದಿಕೆ ಕೆಳಗೆ ನಾಲ್ಕೈದು ಜನರು ಗುಂಡಾಗಳು ಇದ್ದರು, ಕೂಗಾಡುತ್ತಿದ್ದರು. ಅವರು ತುಂಬಾನೇ ತೊಂದರೆ ಮಾಡುತ್ತಿದ್ದರು. ಪಹಲ್ಗಾಮ್​ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಹೇಳೋದು ಅನಿವಾರ್ಯವಾಗಿತ್ತು’ ಎಂದಿದ್ದಾರೆ ಸೋನು ನಿಗಮ್.

ಅವರು ಇತ್ತೀಚೆಗೆ ಬೆಂಗಳೂರಿನ ಶೋ ಒಂದರಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ‘ಕನ್ನಡ.. ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್​ನಲ್ಲಿ ದಾಳಿ ಆಯಿತು’ ಎಂಬರ್ಥ ಬರುವಂತೆ ಅವರು ಮಾತನಾಡಿದ್ದರು. ಈ ಹೇಳಿಕೆ ಬೆನ್ನಲ್ಲೇ  ಅವರನ್ನು ಸ್ಯಾಂಡಲ್​ವುಡ್​ನಿಂದ ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂತು. ಈ ಘಟನೆ ಬಗ್ಗೆ ಕೊನೆಗೂ ಅವರು ಮೌನ ಮುರಿದಿದ್ದಾರೆ. ಅಂದು ನಡೆದಿದ್ದು ಏನು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶೋಗಳನ್ನು ಆಯೋಜನೆ ಮಾಡಿದಾಗ ಕೆಲವರು ವೇದಿಕೆ ಮುಂಭಾಕ್ಕೆ ಬಂದು ಗಾಯಕರಿಗೆ ತೊಂದರೆ ಕೊಡುತ್ತಾರೆ. ತಮ್ಮಿಷ್ಟದ ಹಾಡನ್ನು ಹೇಳುವಂತೆ ಧಮ್ಕಿ ಹಾಕುತ್ತಾರೆ. ಸೋನು ನಿಗಮ್ ಅವರಿಗೆ ಅಂದು ಆಗಿದ್ದು ಕೂಡ ಅದೇ. ‘ಕನ್ನಡದಲ್ಲಿ ಹಾಡಿ’ ಎಂದು ಅವರು ಪ್ರಿತಿಯಿಂದ ಕೋರಿಲ್ಲ, ಬದಲಿಗೆ ಜಬರ್ದಸ್ತಿ ಮಾಡುತ್ತಿದ್ದರು ಎಂದು ಸೋನು ನಿಗಮ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button