ಮಂಗಳೂರು

ಹಿಂದೂ ಕಾರ್ಯಕರ್ತರು ಆತ್ಮರಕ್ಷಣೆಗೆ ಆಯುಧ ಇಟ್ಟುಕೊಳ್ಳಲು ಅವಕಾಶ ಕೊಡಿ: ಯತ್ನಾಳ್‌

ಮಂಗಳೂರು: ಪ್ರಾಣ ಬೆದರಿಕೆ ಇರುವ ಹಿಂದೂ ಕಾರ್ಯಕರ್ತರು ತಮ್ಮ ಹಾಗೂ ತಮ್ಮ ಪರಿವಾರದ ಸದಸ್ಯರ ಆತ್ಮರಕ್ಷಣೆಗೆ ವಾಹನದಲ್ಲಿ ಹಾಗೂ ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಲು ಪೊಲೀಸರು ಅವಕಾಶ ಕಲ್ಪಿಸಿಕೊಡಬೇಕು. ತಾಂತ್ರಿಕ ಕಾರಣವೊಡ್ಡಿ ನಿರಾಕರಿಸಬಾರದು. ಒಂದು ವೇಳೆ ನಿರಾಕರಿಸಿ, ಅದರಿಂದ ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ, ಅದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಹಾದಿಗಳ ಉಪಟಳದಿಂದ ಕರಾವಳಿಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸುಹಾಸ್ ಶೆಟ್ಟಿ ಅವರ ಸಾವು ಸಮಸ್ತ ಹಿಂದೂ ಬಳಗಕ್ಕೆ ಮರೆಯಲಾಗದಂತಹ ನೋವಾಗಿದೆ. ಕಳ್ಳ ಬೆಕ್ಕಿನಂತೆ ಬಂದ ಆಗಂತುಕರು ಸುಹಾಸ್ ಮತ್ತು ಸಹಚರರ ಮೇಲೆ ದಾಳಿ ಮಾಡಿರುವುದು ಇವರು ಎಂತ ಹೇಡಿಗಳು? ಅಂಜುಬುರುಕರು ಎಂದು ತೋರಿಸುತ್ತದೆ. ದ್ವೇಷ, ಭಿನ್ನಾಭಿಪ್ರಾಯ, ವೈಚಾರಿಕವಾಗಿ ಹಾಗೂ ಸೈದ್ಧಾಂತಿಕವಾಗಿರಬೇಕೇ ಹೊರತು ಕೊಲೆ ಮಾಡುವ ಮಟ್ಟಕ್ಕಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಆತ್ಮರಕ್ಷಣೆಗೆ ಸುಹಾಸ್ ಅವರು ತಮ್ಮ ಕಾರಿನಲ್ಲಿ ಇಟ್ಟಿದ್ದ ಆಯುಧಗಳನ್ನು ತೆಗೆಯಬೇಕೆಂದು ಸುಹಾಸ್ ಅವರಿಗೆ ರಶೀದ್ ಆದೇಶ ನೀಡಿದ್ದು ಅಲ್ಲದೆ, ಒಂದು ವೇಳೆ ತೆಗೆಯದಿದ್ದರೆ ಕಳ್ಳತನದ ಕೇಸನ್ನು ಹಾಕುತ್ತೇನೆಂದು ಹೇಳಿರುವ ಬಗ್ಗೆ ತನಿಖೆಯಾಗಲಿ. ರಶೀದ್ ಅವರ ಸಿಡಿಆರ್‌ (ಕಾಲ್ ಡೀಟೇಲ್ ರೆಕಾರ್ಡ್ಸ್) ಅನ್ನು ಕೂಡಲೇ ವಶಪಡಿಸಿಕೊಂಡು ರಶೀದನಿಗೆ ಯಾರು ಕರೆ ಮಾಡಿದ್ದರು? ಮೃತ ಸುಹಾಸ್ ಅವರಿಗೆ ಪದೇ ಪದೇ ಕಿರುಕುಳ ನೀಡಲು ಯಾರು ಕುಮ್ಮಕ್ಕು ನೀಡುತ್ತಿದ್ದರು? ಎಂಬುದನ್ನು ತನಿಖೆಗೆ ಒಳಪಡಿಸಲಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Back to top button