Uncategorized

ಬೆಳಗಾವಿಯಿಂದ ಬೆಂಗಳೂರು ವರೆಗೆ ಹೊಸದೊಂದು ವಂದೇ ಭಾರತ ಎಕ್ಸಪ್ರೆಸ್.

ಬೆಳಗಾವಿಯಿಂದ ಬೆಂಗಳೂರು ವರೆಗೆ ಹೊಸದೊಂದು ವಂದೇ ಭಾರತ ಎಕ್ಸಪ್ರೆಸ್
ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರಿಂದ ಅನುಮೋದನೆ
ಸಂಸದ ಜಗದೀಶ್ ಶೆಟ್ಟರ್ ಸಂತಸ
ಸಚಿವರುಗಳಿಗೆ ಕೃತಜ್ಞತೆ ಸಲ್ಲಿಸಿದ ಸಂಸದರು
ಬೆಂಗಳೂರು ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ “ವಂದೇ ಭಾರತ ಎಕ್ಸಪ್ರೆಸ್ ರೈಲು” ಸೇವೆಯನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕುರಿತಾದ ನಮ್ಮ ಬೇಡಿಕೆಯ ಬದಲು, ಬೆಳಗಾವಿಯಿಂದ ಬೆಂಗಳೂರು ವರೆಗೆ ಹೊಸದೊಂದು ವಂದೇ ಭಾರತ ಎಕ್ಸಪ್ರೆಸ್ ರೈಲು ಸೇವೆಯನ್ನು ಆರಂಭಿಸಲು ಅನುಮೋದನೆ ಆದೇಶ ನೀಡಿರುವ ಬಗ್ಗೆ ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಇವರು ತಿಳಿಸಿರುವುದಾಗಿ ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು ಜಗದೀಶ ಶೆಟ್ಟರ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು- ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ ಎಕ್ಸಪ್ರೆಸ್ ರೈಲು ಸೇವೆಯನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕುರಿತು ಕೇಂದ್ರ ರೇಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ರೇಲ್ವೆ ರಾಜ್ಯ ಸಚಿವರು ವಿ. ಸೋಮಣ್ಣ ಇವರೊಂದಿಗೆ ಹಲವು ಬಾರಿ ಸಭೆಯನ್ನು / ಚರ್ಚೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ನಡೆದಿದ್ದು ಮತ್ತು ಒತ್ತಾಯಿಸಿದ್ದು ಇಲ್ಲಿ ಸ್ಮರಣೀಯ.
ಆದರೆ ಪ್ರಸ್ತಾಪಿತ ವಿಷಯವಾಗಿ ಬೆಳಗಾವಿ-ಬೆಂಗಳೂರು ನಡುವೆ ಬೆಳಗಾವಿ ನಗರದಿಂದ ಹೊಸ ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚಾರವನ್ನು ಬೆಳ್ಳಿಗ್ಗೆ ಪ್ರಾರಂಭಿಸಿ ಬೆಂಗಳೂರು ತಲುಪಿ ತದನಂತರ ಮದ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ ಬೆಳಗಾವಿ ತಲುಪುವ ಬಗ್ಗೆ ವಿಷಯ ತಿಳಿದು ಬಂದಿದೆ.
ನೂತನ ವಂದೇ ಭಾರತ ಎಕ್ಸಪ್ರೆಸ್ ರೈಲು ಸೇವೆಯನ್ನು ಬೆಳಗಾವಿಯಿಂದ ಪ್ರಾರಂಭಿಸುವ ವಿಷಯವಾಗಿ ಅಗತ್ಯ ಅನುಮೋದನೆ ನೀಡಿರುವ ಬಗ್ಗೆ ಮೊದಲನೆಯದಾಗಿ ಮಾನ್ಯ ಪ್ರಧಾನ ಮಂತ್ರಿಗಳು ನರೇಂದ್ರ ಮೋದಿ ಅವರಿಗೆ, ಮಾನ್ಯ ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಇವರಿಗೆ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಪ್ರಹ್ಲಾದ್ ಜೋಶಿ ಇವರಿಗೆ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವರು ವಿ. ಸೋಮಣ್ಣ ಇವರಿಗೆ ಅಭಿನಂದನೆಗಳನ್ನು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಇವರು ತಿಳಿಸಿದ್ದಾರೆ.ಅದರಂತೆ ಅದಷ್ಟು ಬೇಗನೆ ಈ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ದಿನಾಂಕ ಒಂದನ್ನು ನಿಗಧಿ ಪಡಿಸಿ ಬೆಳಗಾವಿ ಜಿಲ್ಲಾ ರಹವಾಸಿಗಳಿಗೆ ಅನಕೂಲತೆ ಕಲ್ಪಿ ಕೊಡುವಂತೆ ಕೇಂದ್ರ ರೇಲ್ವೆ ಸಚಿವರಲ್ಲಿ ವಿನಂತಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button