ಬೆಳಗಾವಿಹುಕ್ಕೇರಿ

ಹುಕ್ಕೇರಿ – ವೈಶಿಷ್ಟ್ಯಪೂರ್ಣವಾಗಿ ಜರುಗಿದ ಹುಕ್ಕೇರಿ ಹಿರೇಮಠದ ಗುರು ಶಾಂತೇಶ್ವರ ರಥೋತ್ಸವ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಶ್ರೀ ಗುರು ಶಾಂತೇಶ್ವರ ಮಹಾಸ್ವಾಮಿಗಳ ರಥೋತ್ಸವವು ಇಂದು ವೈಶಿಷ್ಟ್ಯ ಪೂರ್ಣವಾಗಿ ಜರುಗಿತು . ಹಿರೇಮಠದಲ್ಲಿ ಬೆಳಗಿನ ಜಾವ ವಿಶೇಷ ರುದ್ರಾಭಿಷೇಕ , ವಟುಗಳಿಗೆ ಅಯ್ಯಾಚಾರ , ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ತೋಟ್ಟಿಲೊತ್ಸವ ಜರುಗಿತು, ಸಾಯಂಕಾಲ ಹಿರೇಮಠದಿಂದ ಶ್ರೀ ಗುರು ಶಾಂತೇಶ್ವರ ರಥೋತ್ಸವ ಆರಂಭವಾಯಿತು.

ರಥೋತ್ಸವಕ್ಕೆ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಹಾಗೂ ಯರನಾಳ ಕಾಳಿಕಾದೇವಿ ಮಠದ ಬ್ರಹ್ಮಾನಂದ ಅಜ್ಜನವರು ಚಾಲನೆ ನೀಡಿದರು. ರಥೋತ್ಸವದಲ್ಲಿ ನಗರದ ದೇವತೆಗಳ ಪಲ್ಲಕ್ಕಿ ಹಾಗೂ ನಂದಿಕೊಲುಗಳು ಭಾಗಿಯಾಗಿದ್ದು ವಿಶೇಷ ವಾಗಿತ್ತು.
ಕರಡಿಮಜಲು.ಡೊಳ್ಳು ಹಾಗೂ ಮಾರಿಗುಡಿ ಉತ್ಸವ ಆನೆ ರಥೋತ್ಸವಕ್ಕೆ ರಂಗು ನಿಡಿತು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಳೆದ ಹತ್ತು ದಿನಗಳಿಂದ ಗುರುಶಾಂತೇಶ್ವರ ಸಂಸ್ಥಾನದಲ್ಲಿ ದಿನನಿತ್ಯ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದ್ದವು ಇವತ್ತು ಗುರುವಿನ ರಥವನ್ನು ಶಿಷ್ಯರು ಎಳೆದಿದ್ದು ಮನಸ್ಸಿಗೆ ಖುಷಿ ಉಂಟುಮಾಡಿದೆ ಎಂದರು.

ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯ ಮಹಾಂತೇಶ ಆರಾದ್ರಿಮಠ ಅವರು ಮಾತನಾಡಿದ ಹುಕ್ಕೇರಿ ಹಿರೇಮಠದ ಗುರು ಶಾಂತೇಶ್ವರ ಜಾತ್ರೆ ವರ್ಷದಿಂದ ವರ್ಷಕ್ಕೆ ಅತಿ ವೈಶಿಷ್ಟ್ಯ ಪಡೆಯುತ್ತಿದೆ ಇವತ್ತು ಶ್ರೀ ಗುರು ಶಾಂತೇಶ್ವರ ರಥೋತ್ಸವದಲ್ಲಿ ಊರಿನ ಎಲ್ಲಾ ದೇವತೆಗಳ ಪಲ್ಲಕ್ಕಿ ಹಾಗೂ ನಂದಿಕೊಲುಗಳು ಭಾಗಿಯಾಗಿದ್ದು ವಿಶೇಷವಾಗಿದೆ.ದೇಶದಲ್ಲಿ ನೆಮ್ಮದಿ ಲಭಿಸಲು ಗುರುವಿನ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ ಎಂದರು.

ರಥೋತ್ಸವದಲ್ಲಿ ಗೋಕಾಕಿನ ಬ್ರಹ್ಮಾನಂದ ಸ್ವಾಮಿಜಿ . ವಿರುಪಾಕ್ಷಲಿಂಗ ಶಿವಾಚಾರ್ಯ ವೈದಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ವಿದ್ವಾನ್ ಸಂಪತ್ತು ಕುಮಾರ್ ಶಾಸ್ತ್ರೀಗಳು.ನಿಶಾಂತ ಸ್ವಾಮಿ.ಉದಯ ಕೋರಿಮಠ . ಮಹಾಂತೇಶ ಹಿರೇಮಠ ಸೇರಿದಂತೆ ಶ್ರೀ ಮಠದ ವೇದ ವಟುಗಳು ಭಕ್ತರು ಭಾಗವಹಿಸಿದ್ದರು.

 

Related Articles

Leave a Reply

Your email address will not be published. Required fields are marked *

Back to top button