
ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ನೇಮಕಾತಿ ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂಬುದು ನನ್ನ ಭಾವನೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಹೊಸದಾಗಿ ನೇಮಕವಾದ ಎರಡು ಸಾವಿರಕ್ಕೂ ಹೆಚ್ಚು ನಿರ್ವಾಹಕರಿಗೆ ನೇಮಕಾತಿ ಆದೇಶ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಸ್ ಅಪಘಾತಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅಪಘಾತಗಳಿಗೆ ಕಾರಣರಾದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದುಅವರು ವಿವರಿಸಿದರು.
ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ಸುಗಳ ಅಪಘಾತಗಳು ಅಧಿಕವಾಗುತ್ತಿವೆ. ಅಪಘಾತಕ್ಕೆ ಯಾರೇ ಕಾರಣವಿರಬಹುದು, ಆದರೆ ಅಪಘಾತದಿಂದ ನಡೆಯುವ ಸಾವು ನೋವುಗಳಿಗೆ ಯಾವುದೇ ಕಾರಣ ಪರಿಹಾರವು ನ್ಯಾಯ ಒದಗಿಸುವುದಿಲ್ಲ. ಅಪಘಾತದಿಂದ ಕಳೆದುಕೊಂಡ ಅಮೂಲ್ಯ ಜೀವಗಳನ್ನು ವಾಪಸ್ಸು ತರಲು ಸಾಧ್ಯವೇ? ಅವರ ಅವಲಂಬಿತರು ಅನುಭವಿಸುವ ನೋವಿಗೆ ಪರ್ಯಾಯವಿದೆಯೇ? ಎಂದು ಅವರು ಬೇಸರ ವ್ಯಕ್ತಪಡಿಸಿದರು.