ಚಿಕ್ಕೋಡಿಬೆಳಗಾವಿ

ತೋರಣಹಳ್ಳಿ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 30 ಲಕ್ಷ ಅನುದಾನ:ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದ ಸುಕ್ಷೇತ್ರ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾದ 30 ಲಕ್ಷಗಳ ರೂಪಾಯಿಗಳ ಆದೇಶ ಪತ್ರವನ್ನು ಶಾಸಕ ಗಣೇಶ ಹುಕ್ಕೇರಿ ದೇವಸ್ಥಾನ ಕಮಿಟಿಯ ಸದಸ್ಯರಿಗೆ ಹಸ್ತಾಂತರಿಸಿದರು.

ತೋರಣಹಳ್ಳಿ ಗ್ರಾಮದಲ್ಲಿ ಹನುಮಾನ ದೇವಸ್ಥಾನದಲ್ಲಿ ಮಂಜೂರು ಪತ್ರವನ್ನು ನೀಡಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ತೋರಣಳ್ಳಿ ಹನುಮಾನ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಕರ್ನಾಟಕ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ಈ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಮ್ಮ ನಾಯಕರಾದ ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ನಾನು 30 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಿದ್ದೇವೆ.

ಈ ಮಂದಿರದ ಆವರಣದಲ್ಲಿ ಶನಿ ಮಂದಿರ ನಿರ್ಮಾಣದ ಕಾರ್ಯ ಕೈಗೊಂಡಿದ್ದೇವೆ. ಮಂದಿರದ ಅಭಿವೃದ್ಧಿಗಾಗಿ ಮಹಾರಾಷ್ಟ್ರದ ಸಚಿವ ಹಸನ ಮುಶ್ರೀಫ ಅವರು 50 ಲಕ್ಷ ರೂಪಾಯಿ ನೀಡಿದ್ದಾರೆ. ಈ ಮಂದಿರದ ಅಭಿವೃದ್ಧಿಗಾಗಿ ಯಾವಾಗಲೂ ನಮ್ಮ ಸಹಕಾರ ಇರುತ್ತೆ ಎಂದರು.

ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮೀಜಿಗಳು ಮಾತನಾಡಿ ದೇವಸ್ಥಾನಗಳು ನೆಮ್ಮದಿ, ಸಮಾಧಾನದ ಪವಿತ್ರದ ಸ್ಥಾನವಾಗಿವೆ. ತೋರಣಹಳ್ಳಿ ಚಿಕ್ಕ ಗ್ರಾಮವಾಗಿದೆ. ಹನುಮಾನ ದೇವಸ್ಥಾನ ದೊಡ್ಡ ಧಾರ್ಮಿಕ ಭಕ್ತಿ ಕೇಂದ್ರವಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರು ಮಾಡುವ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಎಸ್.ಕೆ.ಎಂಟಹತ್ತಿನವರ,ರಾಮಾ ಮಾನೆ,ಸುಧಾಮ ಖಾಡಾ,ಬಸವರಾಜ ಮಾಳಗೆ,ಮಾರುತಿ ಸನಲಚಾಪಗೋಳ,ರಮೇಶ ಪಾಟೀಲ, ಅಜೀತ ಪಾಟೀಲ, ಅಭಯ ಪಾಟೀಲ,ಪರಶುರಾಮ ಕಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button