ಮಳೆ ನೀರಿನ ರಭಸಕ್ಕೆ ಎತ್ತಿನ ಬಂಡಿ ಎಳೆದು ಹೋಗಿ ಇಬ್ಬರು ಮಕ್ಕಳ ಸಾವು… ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ವಿತರಿಸಿದ ಶಾಸಕ ಕಾಗೆ

ಕಾಗವಾಡ ಮತಕ್ಷೇತ್ರದ ನಾಗನೂರ ಪಿಎ ಗ್ರಾಮದ ದಲಿತ ಕುಟುಂಬದ ರೈತನ ಎರಡು ಮಕ್ಕಳು ಹಾಗೂ ಎತ್ತು ಹಳ್ಳದ ನೀರಿನ ರಭಸಕ್ಕೆ ಹರಿದು ಹೋಗಿ ದುರ್ಮರಣ ಹೊಂದಿರುವ ಘಟನೆ ಮಂಗಳವಾರ ೨೭ರಂದು ಸಂಜೆ ೪ ಗೆ ಸಂಭವಿಸಿತ್ತು. ತಕ್ಷಣ ಕಂದಾಯ ಇಲಾಖೆಯ ಸಿಬ್ಬಂದಿಗಳು, ತಹಶೀಲ್ದಾರರು ಭೇಟಿ ನೀಡಿ ಶನಿವಾರ ೩೧ ರಂದು ಶಾಸಕ ರಾಜು ಕಾಗೆ ಇವರಿಂದ ಎರಡು ಮಕ್ಕಳ ನಿಧನಕ್ಕೆ ತಲಾ ಐದು ಲಕ್ಷದಂತೆ, ೧೦ ಲಕ್ಷದ ಅನುದಾನ ಮಂಜೂರು ಪತ್ರ ಶಾಸಕರು ನೀಡಿ ಕುಟುಂಬಕ್ಕೆ ಸಾಂತವನ್ನು ಹೇಳಿದರು.
ಮಂಗಳವಾರ ದಿನಾಂಕ ೨೭ರಂದು ಸಂಜೆ ೪ ಗಂಟೆಗೆ ನಾಗನೂರ ಪಿ ಎ ಗ್ರಾಮದ ರೈತ ತನ್ನ ಎತ್ತಿನಗಾಡಿ ತೆಗೆದುಕೊಂಡು ಸಾಂಬರ್ಗಿ ಗ್ರಾಮದಲ್ಲಿ ಕೆಲಸ ಮುಗಿಸಿ ಮರಳಿ ನಾಗನೂರು ಪಿಎ ಗ್ರಾಮಕ್ಕೆ ಬರುವಾಗ ಕಾಟಕರ ತೋಟದ ಬಳಿ ಇರುವ ಅಗ್ರನಿ ಹಳ್ಳ ದಾಟುವಾಗ ಆಕಸ್ಮಿಕವಾಗಿ ಮಳೆ ಬಂದು ಹಳ್ಳಿನ ನೀರಿನ ರಭಸಕ್ಕೆ ಎತ್ತಿನ ಗಾಡಿ ಸಮೇತ ಮಕ್ಕಳಾದ ದೀಪಕ ವಯಸ್ಸು ೯, ಗಣೇಶ ವಯಸ್ಸು ೭ ಇಬ್ಬರು ಮಕ್ಕಳು ಎತ್ತಿನಗಾಡಿ ಯೊಂದಿಗೆ ನೀರಿನಲ್ಲಿ ಹರಿದು ಹೋಗಿ ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿದ್ದರು. ಈ ಕುಟುಂಬದ ಮನೆಗೆ ಶಾಸಕ ರಾಜು ಕಾಗೆ ಇವರು ಭೇಟಿ ನೀಡಿ ಪರಿಹಾರ ವಿತರಿಸಿ ಸಾಂತ್ವನ ಹೇಳಿದರು.
ಶನಿವಾರ ರಂದು ಅಥಣಿ ತಹಶಿಲ್ದಾರ ಸಿದ್ದರಾಯ ಬೋಸಗೆ, ಉಪ ತಹಶೀಲ್ದಾರ್ ಅಮಿತಕುಮಾರ ಧವಳೇಶ್ವರ ಇವರ ಮುಖ್ಯ ಉಪಸ್ಥಿತಿಯಲ್ಲಿ ಶಾಸಕ ರಾಜು ಕಾಗೆ ಇವರು ಸಂಜಯ ಕಾಂಬಳೆ ಇವರ ಮನೆಗೆ ಭೇಟಿ ನೀಡಿ, ಆಕಸ್ಮಿಕವಾಗಿ ನಡೆದ ಘಟನೆ ಬಗ್ಗೆ ದುಃಖ ವ್ಯಕ್ತು ಮಾಡಿ ಸಾಂತ್ವನ ಹೇಳಿ ಅವರಿಗೆ ಪ್ರಕೃತಿ ವಿಕೋಪದ ಮುಖ್ಯಮಂತ್ರಿ ಪರಿಹಾರ ೧೦ ಲಕ್ಷ ರೂಪಾಯಿದ ಸಹಾಯದಣ ಮಂಜೂರಾತಿ ಪತ್ರ ನೀಡಿದರು.
ಶಾಸಕ ರಾಜು ಕಾಗೆ ಮಾತನಾಡಿ, ಪ್ರತಿಯೊಬ್ಬ ರೈತನು ಎಚ್ಚರಿಕೆಯಿಂದ ಇರಬೇಕು ಮಳೆ ಆದಾಗ ಸ್ವಲ್ಪ ಮಾಹಿತಿ ಪಡೆದು ಚರ್ಚೆ ಮಾಡಿ ಇಂತಹ ಹಳ್ಳದಲ್ಲಿ ಸಂಚರಿಬೇಕು ಎಂದು ಹೇಳಿ, ಇಂತಹ ಘಟನೆಗಳ ಇನ್ನೊಮ್ಮೆ ಮರುಕಳಿಸಬಾರದು ಈ ಸೇತುವೆ ಎತ್ತರಿಸುವ ಬಗ್ಗೆ ನಾನು ಪ್ರಯತ್ನಿಸುತ್ತಿದ್ದೇನೆ ಇಲಿಯ ಕೆಲವರಿಂದ ಅಡತಡೆವಾಗಿದೆ. ಶೀಘ್ರದಲ್ಲಿ ಈ ಸೇತುವೆ ಎತ್ತರಿಸುವ ಭರವಸೆ ಶಾಸಕರು ನೀಡಿದರು.
ರಾಜ್ಯ ಸರ್ಕಾರದ ಪ್ರಕೃತಿ ವಿಕೋಪದಿಂದ ನಿಮಗೆ ನೀಡುವ ೧೦ ಲಕ್ಷ ರೂಪಾಯಿ ದಿಂದ ಜೀವ ಕಳೆದುಕೊಂಡ ಹೋಗದ ಮಕ್ಕಳು ಮರಳಿ ಬರುವುದಿಲ್ಲ, ಆದರೂ ನಿಮ್ಮ ಕುಟುಂಬದ ಮುಂದಿನ ಕೆಲಸಕ್ಕೆ ಸಹಾಯವಾಗಲಿ ಈ ನಿಟ್ಟಿನಲ್ಲಿ ಸಹಾಯದಣಾ ಎಂದು ಸರ್ಕಾರ ನೀಡಿದೆ ಎಂದು ಶಾಸಕರು ಹೇಳಿ ಸಾಂತ್ವನ ಹೇಳಿದರು.
ಈ ವೇಳೆ ತಾಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಇರಾನ್ನಾ ವಾಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಿನಾಯಕ್ ಬಾಗಡಿ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಕೋಮರ, ಗ್ರಾಮದ ಹಿರಿಯರಾದ ಶ್ರೀಶೈಲ ಪಾಟೀಲ, ಅಶೋಕ ಮಾಣೆ, ಪಾಂಡುರAಗ ಕಾಂಬಳೆ, ರಮೇಶ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.