
ಧಾರವಾಡ: ರಜೆ ಮೇಲೆ ಬೇರೆ ಊರಿಗೆ ತೆರಳಿದ್ದ ಇಬ್ಬರು ಶಿಕ್ಷಕರ ಮನೆಗಳಿಗೆ ಕನ್ನ ಹಾಕಿದ ಚಾಲಾಕಿ ಖದೀಮ ಕಳ್ಳರು, ಮನೆಯಲ್ಲಿದ್ದ ಚಿನ್ನ ಹಾಗೂ ನಗದು ದೋಚಿಕೊಂಡು ಪರಾರಿಯಾದ ಘಟನೆ ಧಾರವಾಡದ ಕ್ಯಾರಕೊಪ್ಪ ಗ್ರಾಮದ ಬಳಿ ನಡೆದಿದೆ.
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಲೋಕನಾಥ್ ಮತ್ತು ಸೋಮನಗೌಡ ಪಾಟೀಲ್ ಎನ್ನುವವರ ಮನೆಯಲ್ಲೇ ಕಳ್ಳತನವಾಗಿದೆ. ಇಬ್ಬರು ವೃತಿಯಲ್ಲಿ ಶಿಕ್ಷಕರಾಗಿದ್ದು, ಕಳೆದ ಎರಡು ದಿನಗಳ ಹಿಂದೆ ರಜೆ ಇರುವ ಕಾರಣ ಊರಿಗೆ ಹೋಗಿದ್ದರು.
ಈ ವೇಳೆ ಶಿಕ್ಷಕರ ಮನೆಯಲ್ಲಿದ್ದ 70 ಗ್ರಾಂ ಚಿನ್ನ ಸೇರಿ 1.20 ಲಕ್ಷ ಹಣ ಕಳ್ಳತನ ಮಾಡಲಾಗಿದೆ. ಸದ್ಯ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.