
ದೇಶದಲ್ಲಿ ಕಾಂಗ್ರೆಸ್ ನಾಯಕರು ನಿಸ್ಸಾಹಕರಾಗಿ ಉಡಾಫೆ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಬಡೆದಾಡುತ್ತಿದ್ದಾರೆ. ನಮ್ಮೊಂದಿಗಿದ್ದ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನರೇದ್ರ ಮೋದಿ ಅವರು ಪ್ರಧಾನಿಯಾದ ನಂತರ ಅಮೂಲಾಗ್ರ ಬದಲಾವಣೆ ಆಗಿದೆ. ಇದನ್ನು ಒಳ್ಳೆಯ ಕಣ್ಣಿನಿಂದ ನೋಡುವ ಕೆಲಸ ಕಾಂಗ್ರೆಸ್ ನವರಿಂದ ಆಗುತ್ತಿಲ್ಲ. ಹೀಗಾಗಿ ರಾಜಕೀಯವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎತ್ತು ಕೋಣದ ಪರಿಸ್ಥಿತಿಯಾಗಿದೆ ಎಂದು ಲೇವಡಿ ಮಾಡಿದರು.
ಹುಬ್ಬಳ್ಳಿ- ಅಂಕೋಲ ಯೋಜನೆಗೆ ರೈಲ್ವೆ ಇಲಾಖೆಯಿಂದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಈ ಯೋಜನೆಗಿರುವ ವಿರೋಧಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಎರಡ್ಮೂರು ತಿಂಗಳಲ್ಲಿ ಸ್ಪಷ್ಟರೂಪ ಕೊಡುವ ಕೆಲಸ ಮಾಡುತ್ತೇವೆ. ನಮ್ಮ ಅವಧಿಯಲ್ಲಿಯೇ ಇದನ್ನು ಕಾರ್ಯಗತಗೊಳಿಸುತ್ತೇವೆ.
ಇದರ ಜೊತೆಗೆ ಧಾರವಾಡ ಬೆಳಗಾವಿ ರೈಲು ಯೋಜನೆಯನ್ನು ಕೂಡ ನಾವು ಗಂಭೀರವಾಗಿ ತಗೆದುಕೊಂಡಿದ್ದೇವೆ. ಹೀಗಾಗಲೇ ಭೂ ಸ್ಬಾಧಿನಪ್ರಕ್ರಿಯೇ ನಡೆದಿದೆ. ಅಲ್ಲಲ್ಲಿ ಕೆಲ ಗೊಂದಲಗಳಿದ್ದು ಸರಿಪಡಿಸಲಾಗುವದು ಎಂದರು.
ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ನಮ್ಮ ಪಕ್ಷವೇ ಒಂದು ರೂಪ ನೀಡಿದೆ. ಈಗಾಗಲೇ ಅರಣ್ಯ ಇಲಾಖೆ ಪರವಾನಿಗೆ ಒಂದು ಹಂತಕ್ಕೆ ಬಂದಿದೆ. ವನ್ಯಜೀವಿ ಮಂಡಳಿಯಿಂದ ಪರವಾನಿಗೆ ದೊರೆಯುವುದು ಬಾಕಿಯಿದೆ. ಪ್ರಧಾನಿ ನರೆಂದ್ರ ಮೋದಿ ಅವರು ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಮುಂದಿನ ೧೫-೨೦ ದಿನಗಳಲ್ಲಿ ಹೊಸ ಬದಲಾವಣೆ ಆಗಲಿದ್ದು, ಕಾದು ನೋಡಿ ಎಂದರು.