
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ಬುಧುವಾರ ತಡ ರಾತ್ರಿ ಸುರಿದ ಮಳೆಯಿಂದ ಜನಜೀವನ ಅಸ್ವಸ್ಥಗೊಂಡಿದ್ದು. ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಇಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ಪಾಲಿಕೆ ಸದಸ್ಯರ ಭಾವಚಿತ್ರ ಹಿಡದು ಪ್ರತಿಭಟನೆ ಮಾಡಿ ಮಹಿಳೆಯರು ಆಕ್ರೋಶ ಹೊರಹಾಕಿದರು.
ಹೌದು ನಿನ್ನೆ ಸುರಿದ ಮಳೆ ಹುಬ್ಬಳ್ಳಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು. ಹುಬ್ಬಳ್ಳಿಯ ಅನೇಕ ನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹುಬ್ಬಳ್ಳಿ ಧಾರವಾಡ ಮಾಹ ನಗರ ಪಾಲಿಕೆ ಸದಸ್ಯ ಚೇತನ ಹಿರೇಕೇರೂರು ವಾರ್ಡನಲ್ಲಿ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನ ಹೈರಾಣಾಗಿದ್ದಾರೆ. ಈ ಹಿನ್ನೆಯಲ್ಲಿ ಮಳೆ ನೀರು ಮನೆಗಳಿಗೆ ಪದೇ ಪದೇ ನೀರು ನುಗ್ಗುತ್ತಿರುವುದರಿಂದ ಹೈರಾಣದ ಸಾರ್ವಜನಿಕರು ಆರ್.ಎನ್.ಶೆಟ್ಟಿ ರಸ್ತೆ ಬಳಿ ರಸ್ತೆ ತಡೆದು. ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ವಾರ್ಡಿನ ನಿವಾಸಿಗಳು
ಬೀದಿಗೆ ಇಳಿದು ಪಾಲಿಕೆ ಸದಸ್ಯ ಚೇತನ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಇನ್ನೊಂದೆಡೆ ರಸ್ತೆ ಮೇಲೆ ನೀರ್ ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಇಂದು ಧಾರವಾಡ ಜಿಲ್ಲೆಗೆ ಹವಮಾನ ಇಲಾಖೆ ರೆಡ್ ಅಲರ್ಡ್ ಸೂಚನೆ ನೀಡಿದ್ದು, ಸಾರ್ವಜನಿಕರು ಆತಂಕಪಡುವಂತೆ ಮಾಡಿದೆ. ತಗ್ಗು ಪ್ರದೇಶ ನಿವಾಸಿಗಳು ಬುಧವಾರ ಸುರಿದ ಬಾರಿ ಮಳೆಯಿಂದಾಗಿ ಹೈರಾಣಾಗಿದ್ದು, ಇಂದು ರೆಡ್ ಅಲರ್ಟನಲ್ಲಿ ಹೇಗೆ ಜೀವನ ಕೈಳೆಯುವುದು ಎಂಬ ಚಿಂತೆ ತಗ್ಗು ಪ್ರದೇಶ ನಿವಾಸಿಗಳಲ್ಲಿ ಮನೆ ಮಾಡಿದೆ.