ಬೈಲ್ ಹೊಂಗಲ್
ಏರ್ ಇಂಡಿಯಾ ವಿಮಾನ ದುರಂತ ಮೊದಲೇ ಭವಿಷ್ಯ ನುಡಿ ದಿದ್ದ ಅಭಿನವ ಸಿದ್ದಲಿಂಗ ಸ್ವಾಮೀಜಿ.

ಬೈಲಹೊಂಗಲ : ಗುಜರಾತಿನ ಅಹಮದಾಬಾದ್ ವಿಮಾನ ದುರಂತದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸ್ವಾಮೀಜಿಯೊಬ್ಬರು ದುರಂತದ ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಮಠದಲ್ಲಿ ಕಳೆದ ಏಪ್ರಿಲ್ 20 ರಂದು ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಕಾಲಜ್ಞಾನ ನುಡಿದಿದ್ದರು. ಈ ವೇಳೆ ಲೋಹದ ಹಕ್ಕಿಯ ದುರಂತದ ಕುರಿತು ಎಚ್ಚರಿಕೆ ನೀಡಿದ್ದರು. ಸಧ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸ್ವಾಮೀಜಿ ನುಡಿದಿದ್ದ ಕಾಲಜ್ಞಾನದಲ್ಲಿ ಉಕ್ಕಿನ ಹಕ್ಕಿಗೆ ಪೆಟ್ಟು ಹತ್ತಿತ್ತು ಎಂದು ಹೇಳಿದ್ದರು. ಎರಡು ತಿಂಗಳ ಹಿಂದೆ ಅಭಿನವ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದ ಕಾಲಜ್ಞಾನ ಈಗ ನಿಜವಾಗಿದೆ. ಜೂನ್. 12 ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ವಿಮಾನ ದುರಂತ ಸಂಭವಿಸಿತ್ತು. ಸುಮಾರು 270 ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ.