ಅಭಿವೃದ್ಧಿ ಇಲ್ಲದೇ ಬೋಗಸ್ ಬಿಲ್; ಪಂಚಾಯತಿ ಕಚೇರಿಗೆ ಬೀಗ ಜಡಿದ ಗ್ರಾಮಸ್ಥರು.

ವಿಜಯಪುರ : ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲಾ, ಗ್ರಾಮ ಪಂಚಾಯತಿ ಸದಸ್ಯರು ಬೋಗಸ್ ಬಿಲ್ ಎತ್ತುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ* ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮ ಪಂಚಾಯಿತಿಗೆ ಬೀಗ ಜಡೆದು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹೂವಿನ ಹಿಪ್ಪರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಗಸಬಾಳ ಗ್ರಾಮದಲ್ಲಿ ಯಾವುದೇ ರೀತಿ ಅಭಿವೃದ್ಧಿಯಾಗಿಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಗಸಬಾಳ ಗ್ರಾಮದ ಮೂರು ಜನ ಗ್ರಾಮ ಪಂಚಾಯತಿ ಸದಸ್ಯರು ಬೊಕಸ್ ಬಿಲ್ ಎತ್ತಿದ್ದಾರೆ ಎಂದು ಆಗಸಬಾಳ ಗ್ರಾಮಸ್ಥರು ಮತ್ತು ಹೂವಿನ ಹಿಪ್ಪರಗಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲಾ, ಗ್ರಾಮದಲ್ಲಿ ಸಿಸಿ ರಸ್ತೆ ಇಲ್ಲಾ, ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಾ, ಗ್ರಾಮದ ಬೀದಿ ದೀಪಗಳಲ್ಲಿ ಬಲ್ಬ್ ಅಳವಡಿಸಿಲ್ಲಾ, ರಸ್ತೆಗಳನ್ನು ಒತ್ತುವರಿ ಮಾಡಿ ವಾಹನಗಳು ಹೋಗೋದುಕ್ಕೆ ಸಾಧ್ಯ ಆಗ್ತಾ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ಇದೇ ಸಂದರ್ಭದಲ್ಲಿ ಉಮೇಶ್ ನಡುವಿನಮನಿ, ಶಿವರಾಯ ಎತ್ತಿನಮನಿ. ಈರಣ್ಣ ಬ್ಯಾಕೋಡ, ಮಾದೇವ ಸಣ್ಣತಂಗಿ. ಅಬ್ಬಾಸಲಿ ಮುಜಾವರ, ಮಂಜು ಬಣಗಾರ. ಕುಮಾರ್ ಅಂಗಡಿಗೆರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.