
ತಾಳಿಕೋಟಿ AIನಲ್ಲಿ ಕ್ರಿಯೇಟ್ ಮಾಡಿರುವ ಚಿರತೆ ಮತ್ತು ಸಿಂಹ ಫೋಟೋ ವೈರಲ್
ತಾಳಿಕೋಟಿ ಪಟ್ಟಣದಲ್ಲಿ ಈ ದಿನ ಬೆಳಗ್ಗೆ 4.30 ಗಂಟೆಗೆ ಚಿರತೆ ಹಾಗೂ ಸಿಂಹದ AI ನಲ್ಲಿ ಕ್ರಿಯೇಟ್ ಮಾಡಿ ಫೋಟೋ ಒಂದು ಹರಿದಾಡಿ ಸ್ಥಳಿಯರಲ್ಲಿ ಆತಂಕ ಮೂಡಿದೆ

ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಇದೊಂದು AI ಕ್ರಿಯೇಟ್ ಮಾಡಿರುವ ಫೋಟೋ ಆಗಿದ್ದು ಎರಡು ಮೂರು ಫೇಕ್ ಫೋಟೋಗಳು ಹರಿದಾಡುತ್ತಿವೆ ತಾಳಿಕೋಟಿಯ ಗಡಿ ಸೋಮನಾಳ ರಸ್ತೆಯಲ್ಲಿರುವ ಕುಲಕರ್ಣಿ ಲೇಔಟಿನ ಗೇಟ್ ಮುಂದಿನ ಬದಿಯಲ್ಲಿ ಸಿಂಹ ಹಾಗೂ ಚಿರತೆ ಮತ್ತು ಹುಲಿ ಫೋಟೋವನ್ನು AI ಕ್ರಿಯೇಟ್ ಮಾಡಿ ಹರಿದಾಡುತ್ತಿರುವದನ್ನು ಕಂಡು

ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ಅಧಿಕಾರಿ ಬಸವನಗೌಡ ಬಿರಾದಾರ ತಮ್ಮ ಸಿಬ್ಬಂದಿಯವರನ್ನು ಸ್ಥಳ ವೀಕ್ಷಣೆಗೆ ಸಾಯಂಕಾಲ 4 ಗಂಟೆಗೆ ಕಳುಹಿಸಿ ಹೆಜ್ಜೆ ಗುರುತು ಹಾಗೂ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾಗ ಕಿಡಿಗೇಡಿಗಳು AI ನಲ್ಲಿ ಫೇಕ್ ಫೋಟೋ ರಚಿಸಿ ಸ್ಥಳೀಯರಿಗೆ ಭಯ ಉಂಟು ಮಾಡಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ.
ರವಿವಾರ ತಾಳಿಕೋಟಿ ತಾಲೂಕಿನ ಹಿರೂರ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು ಆದರೆ ಮುಂದೆ ಸಿಂದಗಿ ತಾಲೂಕಿನ ಗುಬ್ಬಿವಾಡದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದು ತಾಲೂಕ ಅರಣ್ಯ ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದರು.

