ಪೂಜೆಯ ನೆಪದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಮಹಿಳೆ ಸೇರಿ

ಬೆಂಗಳೂರು: ಪೂಜೆಯ ನೆಪದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಮಹಿಳೆ ಸೇರಿ ಇಬ್ಬರ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬೇಡ್ಕರ್ ನಗರ ನಿವಾಸಿ ಮೋಯಿನ್ ಪಾಷಾ ಎಂಬವರು ನೀಡಿದ ದೂರಿನ ಮೇರೆಗೆ ನವೀದಾ ಬಾನು ಹಾಗೂ ಪರ್ವೇಜ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಖಾಸಗಿ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿರುವ ಮೋಯಿನ್, “ಮೇ 23ರಂದು ಸ್ನೇಹಿತನ ಮನವಿ ಮೇರೆಗೆ ಆರೋಪಿತೆ ನವೀದಾ ಬಾನುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದೆ. ಈ ವೇಳೆ ನನ್ನ ಸಹೋದರನನ್ನು ನೋಡಿ, ಈತನಿಗೆ ಗಂಡಾಂತರವಿದೆ. ಪೂಜೆ ಮಾಡಿಸದಿದ್ದರೆ 10 ದಿನದೊಳಗೆ ಸಾಯುತ್ತಾನೆ ಎಂದು ಬೆದರಿಸಿದ್ದಳು. ಇದರಿಂದ ಭೀತಿಗೊಳಗಾಗಿ ಆಕೆ ಅಣತಿಯಂತೆ ಪೂಜೆ ಮಾಡಿಸಲು ಮುಂದಾದೆ” ಎಂದು ತಿಳಿಸಿದ್ಧಾರೆ.
“ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿ ಸಿದ್ಧಪಡಿಸಿಕೊಂಡು ಮೇ 25ರಂದು ತನ್ನ ಮನೆಗೆ ಆರೋಪಿಗಳನ್ನು ಕರೆಸಿಕೊಂಡಿದ್ದೆ. ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನ ಜಾವದವರೆಗೆ ಪೂಜೆ ಮಾಡಲಾಗಿತ್ತು. ಪೂಜೆ ವೇಳೆ ಆರೋಪಿಗಳ ಸೂಚನೆ ಮೇರೆಗೆ ಮನೆಯಲ್ಲಿದ್ದ 35 ಗ್ರಾಂ ಚಿನ್ನಾಭರಣ ತಂದಿಡಲಾಗಿತ್ತು. ಕಬ್ಬಿಣದ ಪೆಟ್ಟಿಗೆಯೊಂದರಲ್ಲಿ ಬಟ್ಟೆಯಲ್ಲಿ ಚಿನ್ನವಿಟ್ಟು ಗಂಟು ಹಾಕಿ 90 ದಿನಗಳ ಕಾಲ ತೆಗೆಯದಂತೆ ತಾಕೀತು ಮಾಡಿ ರೂಮಿನಲ್ಲಿ ಇಡಲಾಗಿತ್ತು. ಪೂಜೆಯ ಬಳಿಕ ಬೆಳಗಿನ ಜಾವ ಆರೋಪಿಗಳು ತೆರಳಿದ್ದರು. ಪೂಜೆಗಾಗಿ ಸುಮಾರು 30 ಸಾವಿರ ರೂ ಖರ್ಚು ಮಾಡಲಾಗಿತ್ತು” ಎಂದು ದೂರಿನಲ್ಲಿ ತಿಳಿಸಲಾಗಿದೆ.



