Uncategorized
ಹೋಟೆಲ್ ಊಟದ ತಟ್ಟೆಯಲ್ಲಿ ಹಲ್ಲಿ ಪತ್ತೆ; ಆರೋಗ್ಯ ಇಲಾಖೆಯಿಂದ ನೋಟಿಸ್ ಜಾರಿ
ರಾಯಬಾಗ: ಹೋಟೆಲ್ ಊಟದ ತಟ್ಟೆಯಲ್ಲಿ ಹಲ್ಲಿ ಪತ್ತೆ; ಆರೋಗ್ಯ ಇಲಾಖೆಯಿಂದ ನೋಟಿಸ್ ಜಾರಿ
ಪಟ್ಟಣದ ಚಿಂಚಲಿ ರಸ್ತೆಯಲ್ಲಿ ಇರುವ ‘ಸಹಾರಾ ರೆಸ್ಟೋರೆಂಟ್’ (Hotel Sahara) ನಲ್ಲಿ ಗ್ರಾಹಕರೊಬ್ಬರಿಗೆ ನೀಡಿದ್ದ ಊಟದ ತಟ್ಟೆಯಲ್ಲಿ ಹಲ್ಲಿ ಬಿದ್ದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ತಾಲೂಕು ಆರೋಗ್ಯ ಇಲಾಖೆ ತೀವ್ರ ಎಚ್ಚೆತ್ತುಕೊಂಡಿದೆ.
ಘಟನೆಯ ಗಾಂಭೀರ್ಯತೆಯನ್ನು ಅರಿತು ತಾಲೂಕು ಆರೋಗ್ಯ
ಅಧಿಕಾರಿಗಳ ನೇತೃತ್ವದ ತಂಡ ತಕ್ಷಣವೇ ಹೋಟೆಲ್‌ಗೆ ಭೇಟಿ ನೀಡಿ ಕಡಕ್ ಪರಿಶೀಲನೆ ನಡೆಸಿದೆ.
ನೇತೃತ್ವ: ತಾಲೂಕು ಆರೋಗ್ಯ ಅಧಿಕಾರಿಗಳಾದ ಶ್ರೀ ಎಸ್.ಎಂ. ಪಾಟೀಲ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹೋಟೆಲ್‌ಗೆ ಭೇಟಿ ನೀಡಿತು.



