Uncategorized

ಬೀರೇಶ್ವರ ಸಂಸ್ಥೆಗೆ ಶ್ರೀಶೈಲ ಜಗದ್ಗುರುಗಳ ಭೇಟಿ:

ನಮ್ಮ ಹೆಮ್ಮೆಯ ಬೀರೇಶ್ವರ ಸಂಸ್ಥೆಗೆ ಶ್ರೀಶೈಲ ಜಗದ್ಗುರುಗಳ ಭೇಟಿ: ಭಕ್ತಿಯ ಅವಿಸ್ಮರಣೀಯ ಕ್ಷಣಗಳು!
​ಯಕ್ಸಂಬಾ ಪಟ್ಟಣದ ಪ್ರತಿಷ್ಠಿತ ‘ಜೊಲ್ಲೆ ಗ್ರೂಪ್’ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ಯಕ್ಸಂಬಾ (ಬಹು-ರಾಜ್ಯ) ಸಂಸ್ಥೆಗೆ ಯಡೂರಿನ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಪಾವನ ಭೇಟಿ ನೀಡಿದರು.
​ಈ ಸಂದರ್ಭದಲ್ಲಿ ಪರಮಪೂಜ್ಯರನ್ನು ಶ್ರೀ ಜ್ಯೋತಿಪ್ರಸಾದ ಜೊಲ್ಲೆ ಅವರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಭಕ್ತಿಪೂರ್ವಕವಾಗಿ, ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು.ಬಳಿಕ ಜಗದ್ಗುರುಗಳು ಸಂಸ್ಥೆಯ ಪ್ರಗತಿ ಹಾಗೂ ಕಾರ್ಯವೈಖರಿಯನ್ನು ವೀಕ್ಷಿಸಿದರು.ಈ ವೇಳೆ ಸಂಸ್ಥೆಯ ಪದಾಧಿಕಾರಿಗಳು ಸೊಸೈಟಿಯ ಸಾಧನೆಗಳ ಕುರಿತು ಪೂಜ್ಯರಿಗೆ ಮಾಹಿತಿ ನೀಡಿ,ಭಕ್ತಿಯಿಂದ ಸತ್ಕರಿಸಿ,ಆಶೀರ್ವಾದ ಪಡೆದರು.
​ಜಗದ್ಗುರುಗಳ ಶ್ಲಾಘನೆ:
ಸಂಸ್ಥೆಯ ಪಾರದರ್ಶಕ ಆಡಳಿತ ಮತ್ತು ಜನಪರ ಕಾರ್ಯವೈಖರಿಯನ್ನು ಶ್ಲಾಘಿಸಿದ ಶ್ರೀಗಳು, “ಬೀರೇಶ್ವರ ಸಂಸ್ಥೆಯು ಭವಿಷ್ಯದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ, ಜನಸಾಮಾನ್ಯರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರಲಿ” ಎಂದು ಮಂತ್ರಾಕ್ಷತೆ ನೀಡಿ ಶುಭ ಹಾರೈಸಿದರು.

Related Articles

Leave a Reply

Your email address will not be published. Required fields are marked *

Back to top button