Uncategorized

ಶಿವಮೊಗ್ಗ ಬಾಲಕಿ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್‌: ವರ್ಷದ ಬಳಿಕ ಸೂಟ್‌ಕೇಸ್‌ನಲ್ಲಿ ಸಿಕ್ತು ಕೊಳೆತ ಶ*ವ!

ಶಿವಮೊಗ್ಗ ಬಾಲಕಿ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್‌: ವರ್ಷದ ಬಳಿಕ ಸೂಟ್‌ಕೇಸ್‌ನಲ್ಲಿ ಸಿಕ್ತು ಕೊಳೆತ ಶ*ವ!
ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ#ಶಿಕಾರಿಪುರದ ಬಾಲಕಿ ಸಂಗೀತಾ ಪ್ರಕರಣ ಇದೀಗ ಭೀಕರ ತಿರುವು ಪಡೆದುಕೊಂಡಿದೆ.ನಾಪತ್ತೆಯಾಗಿದ್ದ ಬಾಲಕಿ ಶ*ವವಾಗಿ ಪತ್ತೆಯಾಗಿದ್ದು, ಆಕೆಯನ್ನು ಕೊ*ಲೆ ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿ ಸಾಗಿಸಿರುವ ಆಘಾತಕಾರಿ ಸತ್ಯ ಬಯಲಾಗಿದೆ.
ಘಟನೆ ಹಿನ್ನೆಲೆ ಏನು?
#ಶಿಕಾರಿಪುರ ತಾಲೂಕಿನ ತರಲಘಟ್ಟದ ಬಾಲಕಿ ಸಂಗೀತಾ, ಶಿಕಾರಿಪುರದ ಖಾಸಗಿ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದಳು. ಆದರೆ ಕಳೆದ ವರ್ಷ (ಮೇ 18, 2025) ಆಕೆ ಪಿಜಿಯಿಂದ ದಿಢೀರ್ ನಾಪತ್ತೆಯಾಗಿದ್ದಳು. ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಪಿಜಿ ಸಿಬ್ಬಂದಿಯ ಕೃತ್ಯ!
ಬಾಲಕಿ ನಾಪತ್ತೆ ಪ್ರಕರಣವನ್ನು ಬೆನ್ನತ್ತಿದ #ಶಿಕಾರಿಪುರ_ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಅಸಲಿ ಕರಾಳ ಮುಖ ಅನಾವರಣಗೊಂಡಿದೆ. ಪಿಜಿ ಸಿಬ್ಬಂದಿ ಬಾಲಕಿ ಸಂಗೀತಾ ಮೇಲೆ ಹ*ಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕಿ ಮೇ 18, 2025 ರಂದೇ ಪಿಜಿಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಳು.
ಸಿನಿಮೀಯ ಮಾದರಿಯಲ್ಲಿ ಶ*ವ ವಿಲೇವಾರಿ!
ವಿಷಯ ಹೊರಬಂದರೆ ತಮಗೆ ಸಂಕಷ್ಟ ಎದುರಾಗಬಹುದು ಎಂದು ಹೆದರಿದ ಪಿಜಿ ಸಿಬ್ಬಂದಿ, ಬಾಲಕಿಯ ಶ*ವವನ್ನು ಯಾರಿಗೂ ತಿಳಿಯದಂತೆ ಗೌಪ್ಯವಾಗಿ ವಿಲೇವಾರಿ ಮಾಡಲು ಸ್ಕೆಚ್ ಹಾಕಿದ್ದರು.ಆರೋಪಿಗಳು ಬಾಲಕಿಯ ಶ*ವವನ್ನು ಒಂದು ಸೂಟ್‌ಕೇಸ್ ಒಳಗೆ ತುರುಕಿದ್ದಾರೆ. ಬಳಿಕ ಯಾರೂ ಇಲ್ಲದ ವೇಳೆ ಅತ್ಯಂತ ಗೌಪ್ಯವಾಗಿ ಕಾರಿನಲ್ಲಿ ಸಾಗಿಸಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಮಾವಿನಗುಂಡಿ ಕಂದಕಕ್ಕೆ ಎಸೆದು ಏನೂ ತಿಳಿಯದವರಂತೆ ನಾಟಕವಾಡಿದ್ದಾರೆ.
ನಾಲ್ವರ ಬಂಧನ, ಎಫ್‌ಎಸ್‌ಎಲ್‌ಗೆ ಅವಶೇಷ!
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮಾವಿನಗುಂಡಿ ಕಣಿವೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕಿಯ ಕೊಳೆತ ಶವದ ಅವಶೇಷಗಳು ಪತ್ತೆಯಾಗಿವೆ.ಸದ್ಯ ಬಾಲಕಿಯ ದೇಹದ ಅವಶೇಷಗಳನ್ನು ಡಿಎನ್‌ಎ ಮತ್ತು ಹೆಚ್ಚಿನ ತಪಾಸಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸದ್ಯ ಸೌಭಾಗ್ಯ, ರಂಜಿತಾ, ಪೀರಾ ನಾಯ್ಕ್ ಮತ್ತು ಗಂಗಾ ನಾಯ್ಕ್ ಎಂಬ ನಾಲ್ವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಾಧ ಮಾಡಿದವರು ಯಾವುದಾದರೂ ಒಂದು ಕಡೆ ಲಾಕ್ ಆಗೇ ಆಗ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

Related Articles

Leave a Reply

Your email address will not be published. Required fields are marked *

Back to top button