Uncategorized

ಕಾಗವಾಡ ತಾಲೂಕಿನ ಉಗಾರದ ಕುಂಬಾರ ಸಮಾಜದ ವತಿಯಿಂದ ಶಿವಶರಣ ನಿಜಗುಣ ಗುಂಡಯ್ಯ ಇವರ ಜಯಂತಿ ಆಚರಣೆ.

12ನೇ ಶತಮಾನದ ಕಾಯಕಯೋಗಿ ಶಿವಶರಣ ಶ್ರೀ ಕುಂಬಾರ ಗುಂಡಯ್ಯ ಇವರು ಕುಂಬಾರ ಸಮಾಜಕ್ಕಾಗಿ ಕೋಡಿಗೆ ನೀಡಿದ್ದಾರೆ. ಎಲ್ಲ ಕುಂಬಾರ ಸಮಾಜ ಒಂದುಗೂಡಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿರಿ. ನಿಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಿ ಅವರಿಗೆ ದುಷ್ಟ ಚಟುಗಳಿಂದ ದೂರ ಉಳಿಸಿರಿ ಎಂದು ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ ಹೇಳಿದರು.
ಮಂಗಳವಾರ ಬೆಳಗೆ ಉಗಾರದ ಜೈನ ಸಮಾಜ ಭವನದಲ್ಲಿ ಕುಂಬಾರ ಸಮಾಜದ ನಿಜಶರಣ ಗುಂಡಯ್ಯ ಇವರ 15ನೇ ಮಹೋತ್ಸವ ಕಾರ್ಯಕ್ರಮ ನೆರವೇರಿತು. ಸಮಾರಂಭದ ದಿವ್ಯ ಸಾನಿಧ್ಯ ವಿಜಯಪುರ ಜ್ಞಾನ ಯೋಗಶ್ರಮದ ಬಸವಲಿಂಗ ಸ್ವಾಮೀಜಿ ವಹಿಸಿದರು.
ಬೆಳಿಗ್ಗೆ ಕುಂಬಾರ ಸಮಾಜದ ನೂರಾರು ಸುಮಂಗಲೆಯರು ಒಂದುಗೂಡಿ ಮಹಾದೇವ ಮಂದಿರದಿಂದ ಕೃಷ್ಣಾ ನದಿವರಿಗೆ ಹೋಗಿ ಸ್ವಾಮೀಜಿಗಳೇ ಸಾನಿಧ್ಯದಲ್ಲಿ ನದಿಗೆ ಪೂಜಿ ಸಲ್ಲಿಸಿ ಬಾಗಿನ ಅರ್ಪಿಸಿ ಜಲಕಲಿಸಿಗಳನ್ನು ತೆಗೆದುಕೊಂಡು ಮಹದೇವ ಮಂದಿರದಲ್ಲಿ ಆಗಮಿಸಿ ಶಿವಲಿಂಗಕ್ಕೆ ಜಲ ಅಭಿಷೇಕ ಮಾಡಿದರು.
ಜೈನ್ ಸಮಾಜ ಭವನದಲ್ಲಿ ಕುಂಬಾರ ಸಮಾಜದ ಮಾಜಿ ಸೈನಿಕರು, ಸಾಧನೆ ಮಾಡಿದ ಗಣ್ಯರಿಗೆ, ಹಿರಿಯ ಕುಟುಂಬದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿಜಯಪುರ ಜ್ಞಾನ ಯೋಗ ಆಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ ಕುಂಬಾರ ಸಮಾಜ ಕಷ್ಟಕರ ಸಮಾಜ ಇವ್ರೆಲ್ಲ ಒಂದುಗೂಡಿ ಸಮಾಜವನ್ನು ಕಟ್ಟಿಸಲು ಪ್ರಯತ್ನಿಸಿದ್ದಾರೆ ಇಲ್ಲಿಯ ಶುಭಾಶಯಗಳು ಹಾಗೂ ಕೆಲ ಹಿರಿಯರು ಕಳೆದ 14 ವರ್ಷಗಳ ಹಿಂದೆ ಸಂಸ್ತೆ ಸ್ಥಾಪಿಸಿ ಅದರೊಂದಿಗೆ ಸಮಾಜ ಸಂಘಟನೆ ಪ್ರಾರಂಭಿಸಿದರು.
ಸಮಾಜದ ಎಲ್ಲ ಹಿರಿಯರು ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಿರಿ ಎಂದು ಸಂದೇಶ ನೀಡಿದರು.
ಸಮಾರಂಭದ ಸಾನಿಧ್ಯ ವಹಿಸಿದ ಗುಳೇದಗುಡ್ಡ ಮಠದ ಸ್ವಾಮೀಜಿ ಚಿಕ್ಕಲಗುಡ್ಡದ ಶಿವಶರಣ ಸ್ವಾಮೀಜಿ ಕೃಷ್ಣ ಕಿತ್ತೂರಿನ ಬಸವೇಶ್ವರ ಸ್ವಾಮೀಜಿ ರಾಜ ಯೋಗಿ ನಾಗಲಿಂಗ ಸ್ವಾಮೀಜಿ ಸಿದ್ದ ಪ್ರಸಾದ ಸ್ವಾಮೀಜಿ ಬೆಳಗಾವಿಯ ಡಾಕ್ಟರ್ ವೀರೇಶ್ವರ ಸ್ವಾಮೀಜಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಸಮಾಜದ ಹಿರಿಯರಾದ ಹುಚ್ಚೇಶ್ ಕುಂಬಾರ್ ಮೇಘ ಕುಂಬಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಸೌದಿ ಗ್ರಾಮದ ಕುಂಬಾರ ಸಮಾಜದ ವತಿಯಿಂದ ಒಂದು ಎಕರೆ ಶಾಲಾ ಶಿಕ್ಷಣಕ್ಕಾಗಿ ದಾನ ನೀಡಿದ ಮಹಿಳೆಗೆ ಸನ್ಮಾನಿಸಲಾಯಿತು.
ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷ ಡಾಕ್ಟರ್ ಆನಂದ್ ಕುಂಬಾರ್ ಪ್ರಸ್ತಾವನೆ ಮಾಡಿದರು ಕಾರ್ಯಕ್ರಮ ಯಶಸ್ವಿಗೊಳಿಸಲು ಅರುಣ ಕುಂಬಾರ್ ಯೋಗೇಶ್ ಕುಂಬಾರ್ ರಾಹುಲ್ ಕುಮಾರ್ ಅನ್ನ ಸಾಬ್ ಕುಂಬಾರ್ ರಾವ್ ಸಾಬ್ ಕುಂಬಾರ್ ಸದಾಶಿವ್ ಕುಂಬಾರ್ ವಿಶೇಷವಾಗಿ ಸಹಕರಿಸಿದರು.

Related Articles

Leave a Reply

Your email address will not be published. Required fields are marked *

Back to top button