Uncategorized

ತೀವೃ ಕೂತುಹಲ ಮೂಡಿಸಿದ್ದ ಹುಕ್ಕೇರಿ ನ್ಯಾಯವಾದಿಗಳ ಸಂಘದ ಚುನಾವಣೆಯಲ್ಲಿ ಡಿ.ಕೆ.ಅವರಗೋಳ ಅವರು ಅಧ್ಯಕ್ಷರಾಗಿ ಭರ್ಜರಿ ಜಯಬೇರಿ ಗಳಿಸಿದ್ದಾರೆ.

ಹುಕ್ಕೇರಿ: ತೀವೃ ಕೂತುಹಲ ಮೂಡಿಸಿದ್ದ ಹುಕ್ಕೇರಿ ನ್ಯಾಯವಾದಿಗಳ ಸಂಘದ ಚುನಾವಣೆಯಲ್ಲಿ ಡಿ.ಕೆ.ಅವರಗೋಳ ಅವರು ಅಧ್ಯಕ್ಷರಾಗಿ ಭರ್ಜರಿ ಜಯಬೇರಿ ಗಳಿಸಿದ್ದಾರೆ.

ಇಲ್ಲಿನ ನ್ಯಾಯವಾದಿಗಳ ಇ-ಗ್ರಂಥಾಲಯದಲ್ಲಿ ಗುರುವಾರ ನ್ಯಾಯವಾದಿಗಳ ಸಂಘದ 2026-2028ನೇ ಸಾಲಿಗೆ ಪದಾಧಿಕಾರಿಗಳ ವಿವಿಧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಕೆ.ಅವರಗೋಳ ಅವರು ಪ್ರಚಂಡ ಬಹುಮತ ಗಳಿಸಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಿ.ಕೆ.ಅವರಗೋಳ ಅವರು 108 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದರೆ, ಪ್ರತಿಸ್ಪರ್ಧಿಗಳಾದ ವಿ.ಎಸ್.ಹಳಿಜೋಳ 49, ಎಂ.ಜಿ.ಖರಾಡಿ 08 ಮತ ಪಡೆದು ಹೀನಾಯ ಸೋಲುಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಎಸ್.ಮರಿನಾಯಿಕ 97 ಮತಗಳನ್ನು ಪಡೆದು ಜಯ ಸಾಧಿಸಿದರೆ, ಪ್ರತಿಸ್ಪರ್ಧಿಗಳಾದ ರಾಜೇಂದ್ರ ಮೋಶಿ 54, ಎಸ್.ವೈ.ಏಗನ್ನವರ 13 ಮತ ಪಡೆದು ಸೋಲು ಅನುಭವಿಸಿದರು.

ಇನ್ನು ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಎಸ್.ಮಗದುಮ್ಮ 90 ಮತಗಳನ್ನು ಪಡೆದು ಜಯಶಾಲಿಯಾದರೆ, ಡಿ.ವೈ.ಆಲಗೂರಿ 43, ಪಿ.ಎ.ಪಲ್ಲೇದ 18, ಐ.ಪಿ.ಪಾಟೀಲ 14 ಮತಗಳನ್ನು ಪಡೆದು ಪರಾಜಯಗೊಂಡರು.

ಇನ್ನು ಜಂಟಿ ಕಾರ್ಯದರ್ಶಿಯಾಗಿ ಎಸ್.ಎ.ಮಲ್ಲಾಪುರೆ, ಖಜಾಂಚಿಯಾಗಿ ಎಸ್.ಎಸ್.ಶೀಲಯ್ಯನವರಮಠ, ಮಹಿಳಾ ಪ್ರತಿನಿಧಿಯಾಗಿ ಎಸ್.ಎಂ.ಮಗದುಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು. 

ಚುನಾವಣಾಧಿಕಾರಿಯಾಗಿ ಎಸ್.ಸಿ.ನಾಯಿಕ, ಸಹಾಯಕ ಚುನಾವಣಾಧಿಕಾರಿಯಾಗಿ ಡಿ. ಪಿ. ತಳವಾರ, ಕೆ.ಪಿ.ಶಿರಗಾಂವಕರ ಕಾರ್ಯನಿರ್ವಹಿಸಿದರು. ಒಟ್ಟು 169 ಮತದಾರರ ಪೈಕಿ 165 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ತಮ್ಮ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರು, ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ನ್ಯಾಯವಾದಿಗಳಾದ ರಾಜೀವ ಚೌಗಲಾ, ಕೆ.ಎಲ್.ಜಿನರಾಳಿ, ಅನೀಲ ಕರೋಶಿ, ಅನೀಸ ವಂಟಮೂರಿ, ಬಿ.ಎಂ.ಜಿನರಾಳಿ, ಉಮೇಶ ಪಾಟೀಲ, ಐ.ಕೆ.ಹೂಲಿಕಟ್ಟಿ, ಐ.ಬಿ.ಅಮ್ಮಣಗಿ, ಬಿ.ಕೆ.ಮಗೆಣ್ಣವರ, ಎ.ಎಸ್.ಹುಲ್ಲೋಳಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

ಈ ವೇಳೆ ವಕೀಲರಾದ ಪಿ.ಎಸ್.ಪಾಟೀಲ, ಭೀಮಸೇನ ಬಾಗಿ, ಮಹಾಂತೇಶ ಬೋರಗಲ್ಲಿ, ಸುನೀಲ ಡುಮ್ಮನವರ, ಎ.ಎಸ್.ಚೌಗಲಾ, ಕೆ.ಎಂ.ಭೂಗಡಿಕಟ್ಟಿ, ಅಂಬರೀಶ ಬಾಗೇವಾಡಿ, ವಿನಯ ಪಾಟೀಲ, ರಾಜು ಖಿಚಡಿ, ಅನೀಲ ಕರಡಿ, ಬಿ.ಎಂ.ಪಾಟೀಲ, ಬಿ.ಎ.ಮಂಗಸೂಳಿ, ರಾಜು ಗಸ್ತಿ, ಸೋನು ಕಾಂಬಳೆ, ಪವನ ಮನಗೂಳಿ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button