ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಲಿ: ಸಚಿವ ಸತೀಶ್ ಜಾರಕಿಹೊಳಿ
ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಲಿ: ಸಚಿವ ಸತೀಶ್ ಜಾರಕಿಹೊಳಿ

ಗಂಗಾವತಿ: ಪ್ರತಿಭ್ವಾನಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸನ್ಮಾನಿಸುವುದು ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ತರ ಘಟನೆಯಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸ್ಥಳೀಯ ಜಿ.ಕೆ. ಬಂಡಿ ಗಾರ್ಡನಲ್ಲಿ ಎಚ್.ಎಸ್.ಸೋಂಪುರ ಜನ್ಮ ದಿನಾಚರಣೆ ನಿಮಿತ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ಸೋಮವಾರ ನಡೆದ ಸರ್ವ ಜನಾಂಗದ ಶಾಂತಿಯ ತೋಟ ಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮ, ಬಡಾವಣೆ ಹಾಗೂ ಗಲ್ಲಿಗಳಲ್ಲಿನ ಪ್ರತಿಭಾನ್ವಿತರನ್ನು ಗುರುತಿಸಿ ೧೧೦ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯಕ್ರಮವಾಗಿದ್ದು, ಸನ್ಮಾನ, ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಬದುಕಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ. ಇಂದಿನ ವಿದ್ಯಾರ್ಥಿಗಳು ನಮ್ಮ ದೇಶದ ಮುಂದಿನ ಆಸ್ತಿಯಾಗಿದ್ದಾರೆ. ಅವರನ್ನು ಪ್ರೋತ್ಸಾಹಿಸಲು ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದು ಅನಿಕರಣೀಯ ಎಂದ ಅವರು, ಬುದ್ದ, ಬಸವ, ಅಂಬೇಡ್ಕರ ಹಾಗೂ ರಾಯಣ್ಣ ಸೇರಿ ಅನೇಕ ಮಾಹನ್ ನಾಯಕರ ಆಶಯಗಳನ್ನು ಎತ್ತಿ ಹಿಡಿಯವ ಕೆಲಸವಾಗಬೇಕಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಗೂ ಪ್ರಸ್ತುತ ಡಿ.ಕೆಶಿವಕುಮಾರ ಸರ್ಕಾರವು ಅಭಿವೃದ್ಧಿ ಜತೆಗೆ ಸರ್ವರ ಹಿತಕಾಯಲು ಬದ್ಧವಾಗಿದೆ ಎಂದರು.
ಶಾಸಕ ಜಿ.ಎಸ್.ಪಾಟೀಲ್, ನೆನೆಗುದಿಗೆ ಬಿದ್ದಿದ್ದ ಬೈಪಾಸ್ ರಸ್ತೆಗೆ ಸಚಿವ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡುವುದರ ಜತೆಗೆ ಪಟ್ಟಣದ ನ್ಯಾಯಾಲಯ ಕಟ್ಟಡ ಪೂರ್ಣಗೊಳಿಸಲು ಸಹಕಾರ ನೀಡುವ ಭರವಸೆ ಹೊಂದಿದ್ದೇವೆ ಎಂದ ಅವರು, ರಾಜ್ಯದ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಾ ಬೆಳೆದ ಯುವಕ ಎಚ್.ಎಸ್.ಸೋಂಪುರ ಜನ್ಮ ದಿನಾಚರಣೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ಮುಂಚೂಣಿಯಲ್ಲಿರುತ್ತವೆ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ, ಎಚ್.ಎಸ್.ಸೋಂಪುರ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮತ್ತು ರಾಯಣ್ಣ ಚೆನ್ನಮ ಅವರ ವಿಚಾರ ಧಾರೆಗಳೊಂದಿವೆ ರಾಜ್ಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅಹಿಂದ ವರ್ಗದ ಮುಂದಿನ ಶಕ್ತಿ ಸತೀಶ ಜಾರಕಿಹೋಳಿ ಅವರೊಂದಿಗೆ ಕೆಲಸ ಮಾಡಲು ಸಿದ್ದ ಎಂದರು.
ಈ ವೇಳೆ ಇತರ ಗಣ್ಯರು ಇದ್ದರು..



