ಸಂಪುಟ ವಿಸ್ತರಣೆ ತಡ ಆಗಬಹುದು ಎಂದು ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಇವತ್ತು ರಾತ್ರಿ ಸಭೆ ಇತ್ತು. ಅದು ರದ್ದಾಗಿದೆ. ಸಂಪುಟ ವಿಸ್ತರಣೆ ತಡ ಆಗಬಹುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಪ್ರಮಾಣವಚನ ಕೊಡಬೇಕು ಅಂತಾ ತೀರ್ಮಾನ ಮಾಡಿದ್ದೆ. ರಾಜ್ಯಪಾಲರಿಗೂ ಮಾಹಿತಿ ನೀಡಿದ್ದೆ. ಮಧ್ಯಾಹ್ನ 12 ಕ್ಕೆ ಸಭೆ ಆಗಬೇಕಿತ್ತು. ಈಗ ಮುಂದಕ್ಕೆ ಹೋಗಬಹುದು. ನಮ್ಮ ನಾಯಕರು ಬಂಧನಕ್ಕೊಳಗಾಗಿದ್ದಾರೆ. ಸಂಪುಟ ವಿಸ್ತರಣೆ ತಡ ಆಗಬಹುದು ಎಂದರು.
ಪ್ರತಿಭಟನಾ ಸ್ಥಳಕ್ಕೆ ಕೇಂದ್ರದ ಮಂತ್ರಿಗಳು ಬಂದಿದ್ದರು. ನಾವು ಚರ್ಚೆಗೆ ಅವಕಾಶ ಮತ್ತು ರಾಜೀನಾಮೆ ಕೇಳಿದ್ದೆವು. ಅವರು ನಿರ್ಧಾರ ತೆಗೆದುಕೊಳ್ಳಲಿಲ್ಲ. ರಾಹುಲ್ ಗಾಂಧಿಯನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಂಡರು. ಸಂಸದರನ್ನು ಒಳಗೆ ಬಿಡಲಿಲ್ಲ. ಪೊಲೀಸರು ಅಸಭ್ಯವಾಗಿ ನಡೆದುಕೊಂಡರು. ಮಹಿಳಾ ನಾಯಕಿಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ರಾಹುಲ್ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ್ದಾರೆ. ರಾಹುಲ್ ಗಾಂಧಿ ಮಕ್ಕಳಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾನು ಸಂಪುಟ ವಿಸ್ತರಣೆಗೆ ರೆಡಿ ಇದ್ದೀನಿ. ಮುಂದೆ ಹಾಕಲು ಇಷ್ಟ ಇಲ್ಲ. ಪರಿಸ್ಥಿತಿ ಸರಿ ಇಲ್ಲ. ನಿನ್ನೆ ದೆಹಲಿಗೆ ಬರಬೇಕಿತ್ತು. ನಿನ್ನೆ ಆಗಲಿಲ್ಲ ಹಾಸನಕ್ಕೆ ಹೋಗಬೇಕಿತ್ತು. ರಾತ್ರಿ ಸಭೆ ಇತ್ತು ಅದು ರದ್ದಾಗಿದೆ ಎಂದು ತಿಳಿಸಿದರು.
ನಾನು ಪೊಲೀಸ್ ಸ್ಟೇಷನ್‌ಗೆ ಹೊಗ್ತಿದ್ದೀನಿ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ನಮ್ಮ ಅಭಿಪ್ರಾಯ ನಾವು ಹೇಳ್ತೀವಿ. ಜಿಲ್ಲಾವಾರು ಸಮುದಾಯ ವಾರು. ಅಂತಿಮವಾಗಿ ಹೈಕಮಾಂಡ್ ಹೇಳಿದಂತೆ ಕೇಳ್ತೇವೆ. ನಾನು ಮೊದಲ ಬಾರಿಗೆ ಶಾಸಕನಾದಾಗ ಮಂತ್ರಿ ಆದೆ. ಯುವಕರನ್ನು ಬೆಳೆಸುವುದು ನನ್ನ ಆಸೆ. ಹೈಕಮಾಂಡ್ ಹೇಳಿದಂತೆ ಕೇಳಬೇಕು ಎಂದು ಮಾತನಾಡಿದರು.
ನಾನು ಎಲ್ಲ ಸ್ಥಾನ ತುಂಬಬೇಕು ಅನ್ನೋದು ಆಸೆ. ಇದರ ಜೊತೆಗೆ ಇನ್ನೂ ಹಲವು ಹುದ್ದೆ ತುಂಬಬೇಕು. ಹತ್ತು ದಿನ ಅಧಿವೇಶನ ಮಾಡಬೇಕು. ಅದರೊಳಗೆ ಎಲ್ಲ ಮಾಡಬೇಕು. ಹೈಕಮಾಂಡ್ ಹೇಳಿದ ತಕ್ಷಣ ಮಾಡುತ್ತೇನೆ. 136 ಶಾಸಕರು ಸಮರ್ಥರು. ಪಕ್ಷಕ್ಕೆ ಒಳ್ಳೆಯದಾಗೊದಾದರೆ ಹೊಸ ಪ್ರಯೋಗ ಮಾಡೋಣ ಎಂದು ತಿಳಿಸಿದರು



