Uncategorized

ಜೀವನಕ್ಕೆ  ಕಾಲಿಡಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಪಾವನಾ ಜೊತೆ ಚಿಕ್ಕಣ್ಣ ಅವರ ಮದುವೆ ನಿಶ್ಚಯ

ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ  ಕಾಲಿಡಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಪಾವನಾ ಜೊತೆ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದ್ದು, ಮದುವೆ ದಿನಾಂಕವೂ ನಿಗದಿಯಾಗಿದೆ.

ಆಗಸ್ಟ್ 29 ಮತ್ತು 30 ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಈ ಮದುವೆ ಮಹೋತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರು, ತಂತ್ರಜ್ಞರು ಹಾಗೂ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಸದ್ಯ ಚಿಕ್ಕಣ್ಣ ಅವರ ಕೈಹಿಡಿಯಲಿರುವ ವಧು. ಇಂಜಿನಿಯರಿಂಗ್ ಪದವಿ ಪಡೆದಿರುವ ಪಾವನಾ ಅವರೊಂದಿಗೆ ಚಿಕ್ಕಣ್ಣ ಹೊಸ ಜೀವನ ಆರಂಭಿಸಲಿದ್ದು ಆಗಸ್ಟ್‌ 2025 ರಲ್ಲಿ ಮದುವೆ ನಿಶ್ಚಯವಾಗಿತ್ತು.

ಮೈಸೂರಿನ ಬಲ್ಲಹಳ್ಳಿಯಲ್ಲಿ ಜನಿಸಿದ ಚಿಕ್ಕಣ್ಣ ಅವರ ಜೀವನ ಪಯಣ ಅತ್ಯಂತ ಸ್ಪೂರ್ತಿದಾಯಕ. ಎಸ್‌ಎಸ್‌ಎಲ್‌ಸಿ ಶಿಕ್ಷಣದ ನಂತರ ಜೀವನೋಪಾಯಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಅವರಿಗೆ, ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ನಟಿಸುವ ಹವ್ಯಾಸವಿತ್ತು.

ಆರ್ಕೆಸ್ಟ್ರಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಕಿರುತೆರೆಗೆ ಪ್ರವೇಶಿಸಿದ ಇವರು, ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಟ ಯಶ್ ಅಭಿನಯದ ‘ಕಿರಾತಕ’ ಸಿನಿಮಾ ಚಿಕ್ಕಣ್ಣ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಅಲ್ಲಿಂದ ಹಿಂತಿರುಗಿ ನೋಡದ ಚಿಕ್ಕಣ್ಣ, ಕನ್ನಡದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದಾರೆ. ಇದೀಗ ಅವರು ನಾಯಕ ನಟನಾಗಿಯೂ ಸಡ್ಡು ಹೊಡೆಯುತ್ತಿದ್ದು, ಹೊಸ ಬಾಳಿಗೆ ಕಾಲಿಡುತ್ತಿರುವುದಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button