Uncategorized

ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಗದ್ದಲದ ಮಧ್ಯೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆಧ್ವನಿ ಮತದ ಮೂಲಕ ಅಂಗೀಕಾರಕೊಂಡಿದೆ.

ನವದೆಹಲಿ: ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಗದ್ದಲದ ಮಧ್ಯೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆಧ್ವನಿ ಮತದ ಮೂಲಕ ಅಂಗೀಕಾರಕೊಂಡಿದೆ.

ರಾಹುಲ್‌ ಗಾಂಧಿ  ಭಾಷಣಕ್ಕೆ ಸರ್ಕಾರದ ಪರವಾಗಿ ಸಚಿವ ಜಿತೇಂದ್ರ ಸಿಂಗ್‌ ಉತ್ತರ ನೀಡಲು ಮುಂದಾದಾಗ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಭಾಷಣದ ಆರಂಭದಿಂದ ಮಸೂದೆ ಅಂಗೀಕಾರ ಆಗುವವರೆಗೂ ಮೋದಿ ಸರ್ಕಾರ ಚೋರ್‌ ಸರ್ಕಾರ ಎಂದು ಸದಸ್ಯರು ಘೋಷಣೆ ಕೂಗುತ್ತಿದ್ದರು.

ವಿಪಕ್ಷಗಳ ಗದ್ದಲ ಮಧ್ಯೆಯೂ ಜಿತೇಂದ್ರ ಸಿಂಗ್‌, ವಿರೋಧ ಪಕ್ಷಗಳು ತೀವ್ರ ರಾಜಕಾರಣ ಮಾಡುತ್ತಿವೆ ಹಾಗೂ ವಿಪಕ್ಷ ನಾಯಕರು ಅಸಂವಿಧಾನಿಕ ಪದಗಳನ್ನು ಬಳಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೀವ್ರ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಅವರಿಗೆ ಸದನದ ಕನಿಷ್ಠ ನಿಯಮಾವಳಿಗಳೂ ಗೊತ್ತಿಲ್ಲ. ಗೃಹ ಸಚಿವರು ಗುಂಡು ಹಾರಿಸಲು ಆದೇಶ ನೀಡುತ್ತಾರೆ ಎಂದು ಆರೋಪಿಸಲಾಗಿದೆ. ಆದರೆ ಗುಂಡು ಹಾರಿಸಲು ಗೃಹ ಸಚಿವರು ಎಂದಿಗೂ ಆದೇಶ ನೀಡುವುದಿಲ್ಲ, ಅದನ್ನು ಮ್ಯಾಜಿಸ್ಟ್ರೇಟ್‌ಗಳು ನೀಡುತ್ತಾರೆ. ಅಷ್ಟಕ್ಕೂ ಅಲ್ಲಿ ಗುಂಡು ಹಾರಿಸಿಯೇ ಇಲ್ಲ ಎಂದಮೇಲೆ ಆದೇಶದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಜೊತೆಗೆ ಗೃಹ ಸಚಿವರಿಗೆ 30 ಬೆಂಗಾವಲು ವಾಹನಗಳಿವೆ ಎಂಬ ಆರೋಪವೂ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಲೋಕ ಕಲ್ಯಾಣ ಮಾರ್ಗದಲ್ಲಿ ರಾಹುಲ್ ಗಾಂಧಿ ನಡೆಸಿದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಜಿತೇಂದ್ರ ಸಿಂಗ್, ತಮಗೆ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯಿಂದ ರಾಹುಲ್ ಗಾಂಧಿ ಪ್ರಧಾನಿ ನಿವಾಸದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.

ಪ್ರಿಯಾಂಕಾ ಗಾಂಧಿ ಅವರು 152 ಬಾರಿ ಪೇಪರ್ ಲೀಕ್ ಆಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಲೆಕ್ಕ ಅವರಿಗೆ ಎಲ್ಲಿಂದ ಸಿಕ್ಕಿತು ಎಂಬುದು ನಮಗಂತೂ ಅರ್ಥವಾಗುತ್ತಿಲ್ಲ. ಇನ್ನು ನೀಟ್ (NEET) ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button