Uncategorized

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪ

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಇದಕ್ಕೆ ಮೈಸೂರ ಘಟನೆ ದೊಡ್ಡ ಉದಾಹರಣೆ. ಮೈಸೂರ ಗಲಭೆ ಪೂರ್ವ ತಯಾರಿ ಇರದೆ ಆಗಲು ಸಾಧ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದಕ್ಕೆ ಇಷ್ಟು ದೊಡ್ಡ ಗಲಾಟೆ ಅಂದ್ರೆ ಹೇಗೆ. ನನಗೆ ಈ ವಿಷಯದ ಸಂಪೂರ್ಣವಾಗಿ ಮಾಹಿತಿ ಇಲ್ಲ. ಆದ್ರೆ ಗಲಭೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದು ಸ್ಪಷ್ಟವಾಗಿದೆ ಎಂದರು.ಹುಬ್ಬಳ್ಳಿ, PFI ಗಲಭೆ ಕೇಸ್ ವಾಪಸ್ ಪಡೆದಿರೋದು ಕುಮ್ಮಕ್ಕು ಸಿಕ್ಕಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರೋ ಹಾಗೆ ವರ್ತನೆ ಮಾಡಿದ್ದಾರೆ. ಮತಾಂಧ ಶಕ್ತಿಗಳು, ಕಾಂಗ್ರೆಸ್‌ ಕುಮ್ಮಕ್ಕಿನ ಮೇರೆಗೆ ವರ್ತನೆ ಮಾಡ್ತೀದಾರೆ. ಹೀಗೆ ಆದರೆ ಇಲ್ಲಿಂದ ನಿಮ್ಮನ್ನು ಕಿತ್ತು ಎಸೆಯುತ್ತಾರೆ. ಕಾಂಗ್ರೆಸ್‌ಗೆ ಮುಸ್ಲಿಂ ಅಷ್ಟೇ ಬೇಕಾ. ಈ ಬಗ್ಗೆ ಉಳಿದ ಸಮಾಜ ಕಾಂಗ್ರೆಸ್‌ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು ಎಂದು ಅವರು ಹೇಳಿದರು.

ತಪ್ಪು ಮಾಡಿದ್ರೆ ಕಾನೂನು ಇದೆ. ಅರೆಸ್ಟ್ ಮಾಡಿದ್ರೆ ಕಾಂಗ್ರೆಸ್ ಅವರ ವಕಾಲತ್ತು ವಹಿಸತ್ತದೆ. ಕಾಂಗ್ರೆಸ್‌ನವರೇ ಕುಂಭಮೇಳದ ಬಗ್ಗೆ ಅಪಮಾನ ಮಾಡಿದರು. ಪ್ರಾಥಮಿಕ ವರದಿಯಲ್ಲಿ ಪೊಲೀಸರ ಹೆಣಗಳು ಬೀಳತಿದ್ದು ಅನ್ನೋದು ಉಲ್ಲೇಖ ಆಗಿದೆ. ಕಾಂಗ್ರೆಸ್ ಇದನ್ನು ತುಷ್ಟಿಕರಣ ಮಾಡ್ತಿರೋದು ದುರ್ದೈವ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ದಲಿತ ಸಿಎಂ ಮಾಡಿದರೇ ಬಹಳ ಸಂತೋಷ ದಲಿತ ಸಿಎಮ್ ಮಾಡಿದ್ರೆ ಬಹಳ ಸಂತೋಷ. ಇದನ್ನು ಹಾದಿ ಬೀದಿ ರಂಪ ಮಾಡಬಾರದು. ಕಾಂಗ್ರೆಸ್ ನಲ್ಲಿ ಬಹಳ ಗೊಂದಲ ಇದೆ .ಇದೊಂದು ರಾಜ್ಯ ಹೋಗತ್ತೆ ಅನ್ನೋದಕ್ಕೆ ಮ್ಯಾನೇಜ್ ಮಾಡತೀದಾರೆ ಎಂದ ಅವರು,ದಲಿತ ಸಿಎಮ್ ಆಗಲಿ ಎಂದು ಹೇಳಿದರು.

ಕೆಲವರು ಅಧಿಕಾರ ಹಂಚಿಕೆ ಬಗ್ಗೆಯೂ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲ. ಕಾಂಗ್ರೆಸ್ ಪ್ರತಿಭಟನೆ ಮಾಡೋದು ನಂತರ ವಿದೇಶಕ್ಕೆ ಹೋಗ್ತಾರೆ. ಅದಾನಿ ಅಂಬಾನಿ ವಿಷಯ ಮಾತಾಡ್ತಾ ಎಷ್ಟು ವರ್ಷ ಆಯ್ತು. ಅದಕ್ಕೆ ಅರ್ಥ ಬೇಕಲ್ವಾ ಎಂದ ಜೋಶಿ ಕಿಡಿಕಾರಿದರು.

Related Articles

Leave a Reply

Your email address will not be published. Required fields are marked *

Back to top button