
ಹುಬ್ಬಳ್ಳಿ: ಮಹಿಳೆಯರ ಮುಂದೆ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರುತ್ತಿದ್ದ ಯುವಕನನ್ನು ಸಾರ್ವಜನಿಕರೇ ಹಿಡಿದು ಬಿಸಿ ಬಿಸಿ ಕಜ್ಜಾಯ ನೀಡಿ, ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಹಂತ ಕಾಲೋನಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಆರ್ ಜೆ ಎಸ್ ನಲ್ಲಿ ವಾಸವಿರುವ ಸುಧಾಕರ್ ಎಂಬಾತ ಕಳೆದ ಹಲವು ದಿನಗಳಿಂದ ಇಲ್ಲಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ಅಸಭ್ಯ ವರ್ತನೆ ತೋರುತ್ತಿದನಂತೆ. ಜತೆಗೆ ಒಬ್ಬಂಟಿ ಮಹಿಳೆಯರ ನೋಡಿದ ತಕ್ಷಣ ಪ್ಯಾಂಟ್ ಬಿಚ್ಚಿ ದುರವರ್ತನೆ ತೋರುತ್ತಿರುವುದರ ಜತೆಗೆ ಮನೆ ಮುಂದೆ ಇರುವ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಅದನ್ನು ಮಾರಿ ಅದೇ ದುಡ್ಡಿನಲ್ಲಿ ಕುಡಿದು ಅಸಭ್ಯವಾಗಿ ನಡೆದುಕೊಳ್ಳುತ್ತಲೇ ಬಂದಿದ್ದನಂತೆ. ಇಂದು ಕೂಡ ಅರಿಹಂತ ಕಾಲೋನಿಯಲ್ಲಿ ನಿರ್ಮಾಣ ಹಂತದ ಮನೆಯ ಕಟ್ಟಡದ ಸಾಮಗ್ರಿಗಳನ್ನು ಕಳ್ಳತನ ಮಾಡಿ, ಅಲ್ಲಿ ಹೋಗುತ್ತಿದ್ದ ಮಹಿಳೆಗೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರುತ್ತಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾಮುಕ ಸುಧಾಕರ್ ನನ್ನು ಹಿಗ್ಗಾ-ಮುಗ್ಗ ಧರ್ಮದೇಡು ನೀಡಿ ಕೇಶ್ವಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸುಧಾಕರ ಈ ಹಿಂದೆ ಕೂಡಾ ಸಾಕಷ್ಟು ಬಾರಿ NDPS ಕಾಯ್ದೆಯಡಿಯಲ್ಲಿ ಜೈಲೂಟ ಮಾಡಿ ಬಂದಿದ್ರು ಕೂಡಾ ಬುದ್ದಿ ಕಲಿಯದೇ ಮತ್ತದೇ ಚಾಳಿಯನ್ನು ಮುಂದುವರೆಸಿರುವ ಆರೋಪ ಕೇಳಿ ಬಂದಿದ್ದು, ಇತನಿಗೆ ಜೈಲಿಂದಾನೆ ಹೊರ ಬಾರದಂತೆ ಮಾಡಬೇಕು ಎಂದು ಇತನ ವರ್ತನೆಯಿಂದ ರೋಷಿ ಹೋದ ಮಹಿಳೆಯರ ಒತ್ತಾಯವಾಗಿದೆ.