ಬೆಳಗಾವಿ
ಹೆಡ್ ಕಾನ್ಸಟೇಬಲ್ ಅಲಿ ಖಾನ್ ಕಾರ್ಯಕ್ಕೆ ಮೆಚ್ಚುಗೆ

ಬೆಳಗಾವಿ :ರಸ್ತೆ ದಾಟಲು ಪರಿತಪಿಸಿದ ವೃದ್ಧೆ
ವೃದ್ಧೆಯನ್ನು ರಸ್ತೆ ದಾಟಿಸಿ ಮಾದರಿಯಾದ ಹೆಡ್ ಕಾನ್ಸಟೇಬಲ್…
ಕೆಳಕರಬಾಗನಿಂದ ಯಂದೇಖೂಟಗೆ ಹೋಗಬೇಕಾಗಿದ್ದ ವೃದ್ಧೆ
ಹೆಡ್ ಕಾನ್ಸಟೇಬಲ್ ಅಲಿ ಖಾನ್ ಕಾರ್ಯಕ್ಕೆ ಮೆಚ್ಚುಗೆ
ಪೊಲೀಸರು ಎಂದರೇ ಸದಾ ಜನರಲ್ಲಿ ಭಯದ ಭಾವನೆಯೇ ಜಾಸ್ತಿ. ಆದರೇ ಇಲ್ಲೊಬ್ಬ ಪೊಲೀಸ್ ಅಧಿಕಾರಿ ವಯೋವೃದ್ಧೆಯೊಬ್ಬರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ ನಗರದ ಕೆಳಕರಬಾಗ ಹತ್ತಿರದಿಂದ ಮುಖ್ಯ ರಸ್ತೆಯನ್ನು ದಾಟಿ ಯಂದೇಖೂಟಿಗೆ ಹೋಗಬೇಕಾಗಿದ್ದ ವೃದ್ಧೆಯೊಬ್ಬಳು. ಬಹಳಷ್ಟು ಸಮಯದಿಂದ ರಸ್ತೆ ದಾಟಲಾರದೇ ಪರಿತಪಿಸುತ್ತಿದ್ದಳು. ಇದನ್ನ ಕಂಡ ದಕ್ಷಿಣ ಸಂಚಾರಿ ಹೆಡ್ ಕಾನ್ಸಟೇಬಲ್ ಅಲಿ ಖಾನ್ ಅವರು ವೃದ್ಧೆಯನ್ನು ರಸ್ತೆ ದಾಟಿಸಿ, ನೋಡುಗರು ಹೆಬ್ಬೆರಿಸುವಂತೆ ಮಾಡಿ ಮಾನವಿಯತೇ ಮೆರೆದಿದ್ದಾರೆ.
ಪೊಲೀಸರು ಕಾನೂನು-ಸುವ್ಯವಸ್ಥೆಗೂ ಸೈ ಜನರ ಸಹಾಯಕ್ಕೂ ಸೈ ಎಂಬುದನ್ನು ಮತ್ತೊಮ್ಮೆ ಹೆಡ್ ಕಾನ್ಸಟೇಬಲ್ ಅಲಿ ಖಾನ್ ಅವರು ಸಾಭೀತು ಮಾಡಿದ್ದಾರೆ.