ಕಲಬುರ್ಗಿ
-
ಒಳ ಮೀಸಲಾತಿ ಜಾತಿ ಗಣತಿಯಲ್ಲಿ ಮಹಾ ಎಡವಟ್ಟು.
ಮೊಬೈಲ್ ಆಪ್ ನಲ್ಲಿ ನಾವೊಂದು ಜಾತಿಯ ಹೆಸರು ಬರೆಸಿದರೆ ಅದೊಂದು ಜಾತಿಯ ಹೆಸರು ತೋರಿಸುತ್ತಿದೆಒಂದು ಮನೆಯ ಸದಸ್ಯರ ಜಾತಿಗಣತಿ ಮಾಡೋದಕ್ಕೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಮೊಬೈಲ್ ಆಪ್ ಸರ್ವರ್ ತೊಂದರೆ.ಜಾತಿ ಗಣತಿ ಸಮೀಕ್ಷೆಯಲ್ಲಿ ಲೋಪದೋಷ ಸಮೀಕ್ಷೆ ಅವಧಿ ವಿಸ್ತರಣೆಗೆ ಆಗ್ರಹಿಸಿದ ಕೊರಟಗೆರೆಯ ಚಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಹನುಮ ಮೂರ್ತಿ ತಿಳಿಸಿದರು.. ಚಲವಾದಿ ಮಹಾಸಭಾ ವತಿಯಿಂದ ತುಮಕೂರು ಜಿಲ್ಲೆಯ ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು…ಈಗಾಗಲೇ ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಪೂರ್ವಭಾವಿ ಸಿದ್ಧತೆಗಳಲ್ಲದೆ ಮಾಡಿರುವುದು ಶಿಕ್ಷಕರಿಗೆ ಕೊಟ್ಟಿರುವ ಮೊಬೈಲ್ ಆಪ್…
Read More » -
ಹುದ್ದೆ ಕೊಡಿಸುತ್ತೇನೆ ಅಂತ ನಂಬಿಸಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದವರ ಬಂಧನ.
ಕಲಬುರಗಿ: ಅಮಾಯಕ ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ಸರ್ಕಾರದ ವಿವಿಧ ಇಲಾಖೆಯಲ್ಲಿನ ಡಿ ಗ್ರೂಪ್ ಹುದ್ದೆಯಿಂದ ಹಿಡಿದು ಗ್ರೇಡ್- 2 ತಹಶಿಲ್ದಾರ್ವರೆಗಿನ ಹುದ್ದೆ ಕೊಡಿಸುತ್ತೇನೆ ಅಂತ ನಂಬಿಸಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದವರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಮೇಳಕುಂದಾ ಗ್ರಾಮದ ನಿವಾಸಿ ನಾಗೇಶ್, ಬೆಳಗಾವಿ ಜಿಲ್ಲೆಯ ಅಭಿಷೇಕ ಬಂಧಿತ ಆರೋಪಿಗಳು. ಆರೋಪಿಗಳು ಅಮಾಯಕ ನಿರುದ್ಯೋಗಿ ಯುವಕರನ್ನ ಗುರಿಯಾಗಿಸಿಕೊಂಡು ಅವರಿಗೆ ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರಿ ಕೊಡಿಸುತ್ತೇನೆ ಅಂತ ಆಮಿಷ ಒಡ್ಡಿ ಅವರಿಂದ ಲಕ್ಷಾಂತರ ರೂಪಾಯಿ ದುಡ್ಡು ವಸೂಲಿ ಮಾಡಿ ನಕಲಿ…
Read More » -
ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆ.
ಕಲಬುರ್ಗಿ: ಸಾಲಬಾಧೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಳಿಗೇರಾ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಪ್ರಕಾಶ ರಟಕಲ್ ಬ್ಯಾಂಕಿನಿಂದ ಕೃಷಿ ಚಟುವಟಿಕೆಗಾಗಿ 80 ಸಾವಿರ ರೂ. ಮತ್ತು ಖಾಸಗಿಯಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇನ್ನೂ ಕೈಕೊಟ್ಟ ಬೆಳೆ, ಸಾಲ ತೀರಿಸಲು ಆಗದೇ ತನ್ನದೇ ಜಮೀನಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಳಿಗೇರಾ ಗ್ರಾಮದ ನಿವಾಸಿ ಪ್ರಕಾಶ ರವೀಂದ್ರ ಜಮದಾರ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಕಾಶ ಗುರುವಾರ ರಾತ್ರಿ…
Read More » -
ಭಾಗ್ಯವಂತಿ ದೇವಿಯ ಹುಂಡಿಯಲ್ಲಿತ್ತು ವಿಚಿತ್ರ ಹರಕೆಯ ನೋಟ್…!
ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿ ಎಣಿಕೆ ಮಾಡುವ ವೇಳೆ ವಿಚಿತ್ರ ಹರಕೆಯ ನೋಟ್ ಪತ್ತೆಯಾಗಿದೆ. ಅತ್ತೆ ಸಾಯಬೇಕೆಂದು ಬರೆದಿರುವ 20 ರೂ. ಮುಖಬೆಲೆಯ ನೋಟ್ ಪತ್ತೆಯಾಗಿದೆ. “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು” ಅಂತ 20 ರೂ. ಮುಖಬೆಲೆಯ ನೋಟ್ ಮೇಲೆ ಬರೆದು ಹುಂಡಿಯಲ್ಲಿ ಹಾಕಲಾಗಿದೆ.ಹುಂಡಿ ಎಣಿಕೆ ಕಾರ್ಯ ವೇಳೆ ನೋಟ್ ಪತ್ತೆಯಾಗಿದೆ. ನೋಟ್ನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅತ್ತೆ ಸಾಯಲೆಂದು ಸೊಸೆ ಈ ರೀತಿಯಾಗಿ ಬರೆದು…
Read More »