ಗದಗ
-
ಮೂರು ತಿಂಗಳಾದರೂ ಬಂದಿಲ್ಲ ಗೃಹಲಕ್ಷ್ಮಿ ಹಣ; ಕಾಂಗ್ರೆಸ್ ವಿರುದ್ಧ ಮಹಿಳೆಯರ ಆಕ್ರೋಶ
ಗದಗ, ಮೇ 15: ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಗದಗದಲ್ಲಿ ಗೃಹಲಕ್ಷ್ಮೀಯರು ಗರಂ ಆಗಿದ್ದಾರೆ. ಮೂರು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಉಚಿತ ಯೋಜನೆಗಳ ಭವರಸೆ ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿದು ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನುಡಿದಂತೆ ನಡಯದಿದ್ದರೆ ಮುಂದೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು, ಸಿಎಂ ಸಿದ್ಧರಾಮಯ್ಯನವರು ಪದೇ ಪದೇ, ‘‘ನಮ್ಮದು…
Read More » -
ಅಪರಿಚಿತ ಹೆಣ್ಣು ಮಗಳ ಸವ ಗದಗ ಜಿಲ್ಲೆಯ ಸುರುಣಗಿ ಗ್ರಾಮದ ಹೊರವಲಯದಲ್ಲಿ ಪತ್ತೆ.
ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸುರುಣಗಿ ಗ್ರಾಮದ ಹೊರವಲಯದಲ್ಲಿ ಅಪರಿಚಿತ ಹೆಣ್ಣು ಮಗಳ ಸವ ಪತ್ತೆಯಾಗಿದೆ ಆ ಹೆಣ್ಣು ಮಗಳ ಯಾರೆಂಬುದು ತಿಳಿದು ಬಂದಿಲ್ಲ ಆ ಹೆಣ್ಣು ಮಗಳ ವಯಸ್ಸು ಅಂದಾಜು 35 ಇರಬಹುದು ಎಂದು ಗುರುತಿಸಲಾಗಿದೆ ಆ ಹೆಣ್ಣು ಮಗಳು ಯಾರೆಂಬುದು ಪೊಲೀಸರ ತನಿಕೆಯ ನಂತರ ಇಳಿದು ಬರಬೇಕಾಗಿದೆ.
Read More » -
ಕನಿಷ್ಠ ವೇತನ ಪಾವತಿಸದ ಏಜೆನ್ಸಿ ಪರವಾನಗಿ ರದ್ದುಪಡಿಸಿ : ಸಚಿವ ಸಂತೋಷ ಲಾಡ್ ಸೂಚನೆ
ಗದಗ : ಕಾರ್ಮಿಕರ ಕಲ್ಯಾಣಕ್ಕಾಗಿಯೇ ಕಾರ್ಮಿಕ ಇಲಾಖೆ ಕಾರ‍್ಯನಿರ್ವಹಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಗುತ್ತಿಗೆ ಪಡೆದ ಏಜೆನ್ಸಿಗಳು ಪಾವತಿಸಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ನಿಯಮಾನುಸಾರ ವೇತನ ಪಾವತಿಸದ ಏಜೆನ್ಸಿಗಳ ಪರವಾನಗೆಯನ್ನು ರದ್ದು ಪಡಿಸಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚಿಸಿದರು. ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರಮ ವಹಿಸಿ ದುಡಿಯುವ ವರ್ಗಕ್ಕೆ ಸರ್ಕಾರದಿಂದ ಸರಿಯಾಗಿ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು. ವೇತನ ಹಾಗೂ ಪಿ.ಎಫ್. ಪಾವತಿಸದ ಏಜೆನ್ಸಿಗಳ ಮೇಲೆ…
Read More » -
ನೂತನ ಹೈಟೆಕ್ ಬೈಪಾಸ್ ನವಲಗುಂದಕ್ಕೆ ಬರುತ್ತಿದೆ; ಎನ್. ಹೆಚ್. ಕೋನರೆಡ್ಡಿ
ಧಾರವಾಡ : ರೈತ ಬಂಡಾಯದ ನಾಡು ನವಲಗುಂದ ಪಟ್ಟಣ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಮಾಡಬೇಕು ಎಂಬ ಕೂಗಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬರುವ ಪ್ರಮುಖ ಪ್ರದೇಶ ನವಲಗುಂದ. ಹೀಗಾಗಿ ಈ ಪಟ್ಟಣ ಬೆಳೆದರೂ ಇಲ್ಲಿರುವ ಹೆದ್ದಾರಿ ಪಟ್ಟಣದೊಳಗೆ ಹಾದು ಹೋಗುವಂತಿದೆ. ಹೀಗಾಗಿ, ನವಲಗುಂದ ಪಟ್ಟಣಕ್ಕೆ ಬೈಪಾಸ್ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಅದು ಈಗ ಈಡೇರಲಿದೆ. ಧಾರವಾಡ ಜಿಲ್ಲೆಯ ನವಲಗುಂದ ರೈತ ಬಂಡಾಯದ ಪ್ರಮುಖ ನೆಲೆಯಾಗಿದೆ. ಹೀಗಾಗಿ ಪ್ರತಿಭಟನೆಗಳು ನಡೆಯುವುದು…
Read More » -
ಇಡೀ ದಿನ ಕೂಡಿ ಹಾಕಿ ಕಾಟ; ಮಗ ಮಾಡಿದ ಸಾಲಕ್ಕೆ ಖಾಸಗಿ ಫೈನಾನ್ಸ್ ಕಂಪನಿಯಿಂದ ಬಡ ತಾಯಿಗೆ ಟಾರಚರ್…
ಗದಗ: ಖಾಸಗಿ ಫೈನಾನ್ಸ್ ಕಂಪನಿ (Finance Company) ಕಾಟಕ್ಕೆ ಆ ಬಡ ತಾಯಿ ಅಕ್ಷರಶಃ ಕಂಗಾಲಾಗಿದ್ದಾರೆ. ಮಗ ಮಾಡಿದ ಸಾಲಕ್ಕೆ ಫೈನಾನ್ಸ್ ಸಿಬ್ಬಂದಿಗಳು ಬಡ ತಾಯಿಗೆ ಶಿಕ್ಷೆ ನೀಡಿದ್ದಾರೆ. ಬೆಳಗ್ಗೆ ನಿದ್ದೆಯಿಂದ ಎಬ್ಬಿಸಿ ಫೈನಾನ್ಸ್ ಕಚೇರಿಗೆ ತಂದು ಇಡೀ ದಿನ ಕೂಡಿ ಹಾಕಿ ಕಾಟ ನೀಡಿದ್ದಾರೆ. ನನ್ನ ಬಿಟ್ಟರೆ ಸಾಲ ಮಾಡಿಯಾದರೂ ಹಣ ಕಟ್ಟುತ್ತೇನೆ ಅಂದ್ರೂ ಫೈನಾನ್ಸ್ ಸಿಬ್ಬಂದಿ ತಾಯಿಯನ್ನು ಬಿಡದೇ ಇಡೀ ದಿನ ಕೂಡಿ ಹಾಕಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಫೈನಾನ್ಸ್ಗೆ ನುಗ್ಗಿ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
Read More » -
ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀಯನ್ನೇ.. ಹೊರಹಾಕಿ, “ಬುದ್ಧಂ ಶರಣಂ ಗಚ್ಛಾಮಿ’’ ಮಂತ್ರ ಪಠಿಸಿದ ಕುಟುಂಬ..
ಗದಗ: ಮನೆಯಲ್ಲಿ ಪೂಜೆ ಮಾಡುವ ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ದೇವರುಗಳನ್ನೇ ಆ ಕುಟುಂಬದವರು ಹೊರಗೆ ಹಾಕಿದ್ದಾರೆ. ಬದಲಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರೇ ನಮ್ಮ ಪಾಲಿಗೆ ದೇವರು ಎಂದು ಸ್ಮರಣೆ ಶುರು ಮಾಡಿದ್ದಾರೆ! ಗದಗ ಬೆಟಗೇರಿ ನಗರದ ಅಂಬೇಡ್ಕರ್ ಕಾಲೋನಿ ನಿವಾಸಿ ಹಾಗೂ ಹೋರಾಟಗಾರ ಷರೀಫ್ ಬಿಳಿಯಲಿ ಮನೆಯಲ್ಲಿ ಕುಟುಂಬಸ್ಥರು ‘‘ಬುದ್ಧಂ ಶರಣಂ ಗಚ್ಛಾಮಿ’’ ಮಂತ್ರ ಪಠಣದೊಂದಿಗೆ ಕಠೋರ ನಿರ್ಧಾರ ಮಾಡಿದ್ದಾರೆ. ನಮ್ಮ ತಾಯಿ ದೇವದಾಸಿಯಾಗಿದ್ದರು. ಅನಾರೋಗ್ಯದಲ್ಲಿದ್ದಾಗ ಯಾವ ದೇವರೂ ಬದುಕಿಸಲಿಲ್ಲ. ದೇವರು ಎಲ್ಲಿದ್ದಾನೆ ಎಂದು ಕುಟುಂಸ್ಥರು ಪ್ರಶ್ನೆ ಮಾಡಿದ್ದಾರೆ. ಈ ಕುಟುಂಬದವರು ಹಲವು…
Read More »