ಚಾಮರಾಜ ನಗರ

  • ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯ

    ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ಮಂಗಳವಾರ ಮುಂಜಾನೆ ಲಿಂಗೈಕ್ಯರಾಗಿದ್ದಾರೆ. ಶ್ರೀ ಗುರುಸ್ವಾಮೀಜಿ ಅವರು ಹನೂರು ತಾಲೂಕಿನ ಜಿ.ಕೆ ಹೊಸೂರು (ಗಂಗಾಧರನ ಕಟ್ಟೆ)ಗ್ರಾಮದ ರುದ್ರಪ್ಪ ಮತ್ತು ಪುಟ್ಟ ಮಾದಮ್ಮರ ಜೇಷ್ಠ ಪುತ್ರರಾಗಿ, 1956ರ ಆಗಸ್ಟ್ 2ರಂದು ಜನಿಸಿದ್ದರು. ನಂತರ ಸಾಲೂರು ಬ್ರಹನ್ ಮಠಕ್ಕೆ 17ನೇ ಪೀಠಾಧ್ಯಕ್ಷರಾಗಿ 1995ರ ಜನವರಿ 29 ರಂದು ಅಧಿಕಾರ ವಹಿಸಿಕೊಂಡಿದ್ದರು. ಶ್ರೀ ಪಟ್ಟದ ಗುರುಸ್ವಾಮೀಜಿ ತಮ್ಮ 12ನೇ ವಯಸ್ಸಿನಲ್ಲಿ ಶ್ರೀಮಠಕ್ಕೆ ಬಂದು…

    Read More »
  • ಪೊಲೀಸ್ ಠಾಣೆಯ ಗೇಟ್​​ನ ಬೀಗ ಮುರಿದು ಬೈಕ್ ಕದ್ದೊಯ್ದ ಆರೋಪಿ

    ಚಾಮರಾಜನಗರ: ಪೊಲೀಸ್ ಠಾಣೆಯ ಗೇಟ್​​ನ ಬೀಗ ಮುರಿದು ಒಳ ನುಗ್ಗಿ ಜಪ್ತಿ ಮಾಡಿ ಇಡಲಾಗಿದ್ದ ಬೈಕ್​​ ಕದ್ದಿರುವ ಘಟನೆ ಚಾಮರಾಜನಗರದ ಸಿಇಎನ್ ಠಾಣೆಯಲ್ಲಿ ನಡೆದಿದೆ. ಬೈಕ್ ಕದ್ದೊಯ್ದಿದ್ದ ಚಾಮರಾಜನಗರದ ಅರ್ಫಾಜ್ ಹಾಗೂ ಇಮ್ರಾನ್ ಎಂಬ ಆರೋಪಿಗಳನ್ನು ಪಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ತಡರಾತ್ರಿ ಅರ್ಫಾಜ್ ಮತ್ತು ಇಮ್ರಾನ್ ಕಾಂಪೌಂಡ್ ಹಾರಿ ಠಾಣಾ ಆವರಣಕ್ಕೆ ಬಂದು ಗೇಟಿನ ಬೀಗ ಮುರಿದಿದ್ದಾರೆ‌‌. ಬಳಿಕ, ಎನ್​​ಡಿಪಿಎಸ್ ಕಾಯ್ದೆಯಡಿ ಜಪ್ತಿ ಮಾಡಿದ್ದ ಹೊಂಡಾ ಶೈನ್ ಬೈಕ್​ನ್ನು ಕದ್ದೊಯ್ದಿದ್ದರು. ಬೆಳಗ್ಗೆ ಠಾಣೆಗೆ ಬಂದ ಪೊಲೀಸರು ಗೇಟ್​​ನ ಬೀಗ ಇಲ್ಲದಿರುವುದನ್ನು ಕಂಡು…

    Read More »
  • ಇಂಗ್ಲಿಷ್​​ ಮೇಲಿನ ಅಕ್ಕರೆ, ಕಾನ್ವೆಂಟ್​​​​ ವ್ಯಾಮೋಹ ;ಗಡಿ ಜಿಲ್ಲೆಯಲ್ಲಿ ಮುಚ್ಚಿದ 20 ಸರ್ಕಾರಿ ಶಾಲೆಗಳು ಬಂದ್

    ಚಾಮರಾಜನಗರ: ಇಂಗ್ಲಿಷ್​​ ಮೇಲಿನ ಅಕ್ಕರೆ, ಕಾನ್ವೆಂಟ್​​​​ ವ್ಯಾಮೋಹ ಹಾಗೂ ಸಾರಿಗೆ ತೊಂದರೆಯಿಂದಾಗಿ ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ 20 ಸರ್ಕಾರಿ ಶಾಲೆಗಳು ಬಂದ್​ ಆಗಿವೆ. 2023-24ರಲ್ಲಿ 12 ಮತ್ತು ಈ ಸಾಲಿನಲ್ಲಿ 8 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯಿಂದ ಬಂದ್ ಆಗಿವೆ. ಪ್ರಿ ಕೆಜಿಗಳನ್ನು ಆರಂಭಿಸಿದರೆ, ಇಂಗ್ಲಿಷ್ ಮಾಧ್ಯಮ ಇದ್ದರೆ, ಶಾಲಾ ವಾಹನ ಸೌಲಭ್ಯ ಕಲ್ಪಿಸಿದರೆ ಮಾತ್ರ ಸರ್ಕಾರಿ ಶಾಲೆಗೆ ಸೇರಿಸುವುದಾಗಿ ಪೋಷಕರು ಶಿಕ್ಷಣ ಇಲಾಖೆಗೆ ತಿಳಿಸುತ್ತಿದ್ದಾರೆ. ಯಾವ್ಯಾವ ಶಾಲೆಗಳು ಬಂದ್​?: 2023 ಮತ್ತು 24ನೇ ಸಾಲಿನಲ್ಲಿ ಚಾಮರಾಜನಗರ ತಾಲೂಕಿನ ಸಾಣೇಗಾಲ, ಕಳ್ಳಿಪುರ,…

    Read More »
Back to top button