ಚಿಕ್ಕೋಡಿ

  • ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

    ಚಿಕ್ಕೋಡಿ: ಕಠಿಣವಾದ ಪರಿಶ್ರಮ,ಶ್ರಧ್ದೆಯಿಂದ ಕಾಯಕದಲ್ಲಿ ತೋಡಗಿದರೆ ಯಶಸ್ಸು ನಿಶ್ಚಿತ,ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೇವೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ‌ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ‌ಅತೀ ಹೆಚ್ಚು ಅಂಕ ಪಡೆದ ಚಿಕ್ಕೋಡಿ ‌ಶೈಕ್ಷಣಿಕ ಜಿಲ್ಲಾ ಮಟ್ಟದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದಿಸಿ ಅವರು ಮಾತನಾಡಿದರು.ಮುಂದಿನ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳು ಚರ್ಚೆಸಿ ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು‌.ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಬೇಕು.ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನದ ಯೋಜನೆಗಳು…

    Read More »
  • ಅಪ್ರಾಪ್ತ ಬಾಲಕಿ ‌ಮೇಲೆ ಲೈಂಗಿಕ‌ ದೌರ್ಜನ್ಯ ಎಸಗಿದ್ದ ಲೋಕೇಶ್ವರ ಸ್ವಾಮೀಜಿಯ ಮಠ ಧ್ವಂಸ

    ಚಿಕ್ಕೋಡಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಪಟಿ ಸ್ವಾಮೀಜಿ ಲೋಕೇಶ್ವರ ಜೈಲು ಸೇರುತ್ತಿದ್ದಂತೆ ಆತನ ಮಠ ಸಂಪೂರ್ಣ ಧ್ವಂಸ ಮಾಡಲಾಗಿದೆ. ಆರೋಪಿ ಕಪಟಿ ಸ್ವಾಮೀಜಿ ಲೋಕೇಶ್ವರ ಅನಧಿಕೃತವಾಗಿ ಮಠ ಕಟ್ಟಡ ನಿರ್ಮಾಣ ಮಾಡಿದ್ದರು.ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಸರ್ವೇ ನಂ. 225ರಲ್ಲಿ ಸರಕಾರಿ ಗಾಯರಾಣಾ ಜಮೀನಿನಲ್ಲಿ 8 ಎಕರೆ ಜಾಗವನ್ನ ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಮಠ ನಿರ್ಮಾಣ ಮಾಡಿಕೊಂಡಿದ್ದರು. ಇತ್ತ ದೌರ್ಜನ್ಯ ಕೇಸ್‌ನಲ್ಲಿ ಸ್ವಾಮೀಜಿ ಜೈಲು ಪಾಲಾಗುತ್ತಿದ್ದಂತೆ ಬೆಳ್ಳಂಬೆಳಿಗ್ಗೆ ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ಮೂರು ಜೆಸಿಬಿಗಳ ಮೂಲಕ ತೆರವು…

    Read More »
  • ಮಕ್ಕಳಾಗಲಿಲ್ಲ ಎಂದು ಕಲ್ಲಿನಿಂದ ಜಜ್ಜಿ ಸೊಸೆ ಕೊ*ಲೆ

    ಚಿಕ್ಕೋಡಿ (ಬೆಳಗಾವಿ) : ಸೊಸೆಗೆ ಮಕ್ಕಳಾಗಲಿಲ್ಲ ಎಂದು ಅತ್ತೆಯೇ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ್​ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೇಣುಕಾ ಸಂತೋಷ ಹೊನಕಾಂಡೆ (27) ಕೊಲೆಯಾದ ಮೃತ ದುರ್ದೈವಿ. ಸೊಸೆಗೆ ಮಕ್ಕಳಾಗಲಿಲ್ಲವೆಂದು ಕಳೆದ ಶನಿವಾರದಂದು ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆ ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ ಹೊನಕಾಂಡೆ, ಅತ್ತೆ ಜಯಶ್ರೀ ಹೊನಕಾಂಡೆ ಎಂಬುವರನ್ನು ಅಥಣಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ…

    Read More »
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌; ಪ್ರಿಯಾಂಕ ಜಾರಕಿಹೊಳಿ

    ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಬ್ಬೂರ ಪಟ್ಟಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌ ನೀಡಿ, ವಿವಿಧ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಿದರು. ಈ ವೇಳೆ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ,ಮುಖಂಡರಾದ ಶ್ರೀ‌‌ ಮಹಾವೀರ ಮೊಹಿತೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. ಕಾಮಗಾರಿಗಳ ವಿವರಗಳು. 1. ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಡಿ, ಕಬ್ಬೂರ ಪಟ್ಟಣ ಪಂಚಾಯತಿಯ ಕಛೇರಿ ನಿರ್ಮಾಣ. ವೆಚ್ಚ: 22.50 ಲಕ್ಷ. 2.…

    Read More »
  • ತೋರಣಹಳ್ಳಿ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 30 ಲಕ್ಷ ಅನುದಾನ:ಶಾಸಕ ಗಣೇಶ ಹುಕ್ಕೇರಿ

    ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದ ಸುಕ್ಷೇತ್ರ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾದ 30 ಲಕ್ಷಗಳ ರೂಪಾಯಿಗಳ ಆದೇಶ ಪತ್ರವನ್ನು ಶಾಸಕ ಗಣೇಶ ಹುಕ್ಕೇರಿ ದೇವಸ್ಥಾನ ಕಮಿಟಿಯ ಸದಸ್ಯರಿಗೆ ಹಸ್ತಾಂತರಿಸಿದರು. ತೋರಣಹಳ್ಳಿ ಗ್ರಾಮದಲ್ಲಿ ಹನುಮಾನ ದೇವಸ್ಥಾನದಲ್ಲಿ ಮಂಜೂರು ಪತ್ರವನ್ನು ನೀಡಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ತೋರಣಳ್ಳಿ ಹನುಮಾನ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಕರ್ನಾಟಕ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ಈ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಮ್ಮ ನಾಯಕರಾದ ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ನಾನು 30 ಲಕ್ಷ ರೂಪಾಯಿಗಳ ಅನುದಾನ ಮಂಜೂರು…

    Read More »
  • ಗುಡುಗು ಸಿಡಿಲು ಸಹಿತ ಭಾರಿ ಮಳೆ; ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರಗಳಿಗೆ ಬೆಂಕಿ

    ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನಲ್ಲಿ ವಿವಿಧೆಡೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ರಸ್ತೆಗಳ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಪ್ರಯಾಣಿಕರ ಪರದಾಟ ಅನುಭವಿಸಿದ್ದಾರೆ. .ಭಾರಿ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೂ ಪ್ರತ್ಯೇಕ ಘಟನೆಯಲ್ಲಿ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದು ತೆಂಗಿನ ಮರಗಳು ಬೆಂಕಿ ಹತ್ತಿ ಉರಿದಿವೆ. ಚಿಕ್ಕೋಡಿ ತಾಲೂಕಿನ ಮಾಂಜರಿ ಹಾಗೂ ಕೇರೂರು ಗ್ರಾಮಗಳಲ್ಲಿ ಸಿಡಿಲನ ಹೊಡೆತಕ್ಕೆ ತೆಂಗಿನ ಮರಗಳಿಗೆ ಬೆಂಕಿ ತಗುಲಿದೆ.

    Read More »
  • ಭಾರತೀಯ ಸೈನಿಕರಿಗಾಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ

    ಚಿಕ್ಕೋಡಿ: ಪಾಕಿಸ್ತಾನ ವಿರುಧ್ದ ಯುದ್ಧದ ಗೆಲುವಿಗಾಗಿ ಭಾರತೀಯ ಸೈನಿಕರಗಾಗಿ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ಗರ್ಭಗುಡಿಯ ಮುಂಭಾಗದಲ್ಲಿ ಮಹಾಮೃತ್ಯುಂಜಯ ಹೋಮ ಹಾಗೂ ಜಯಾದಿ ಹೋಮವನ್ನು ಮಾಡಲಾಯಿತು. ಭಾರತ ಹಾಗೂ ಪಾಕಿಸ್ತಾನ ದೇಶಗಳ ಮಧ್ಯೆ ಸಮರ ಪ್ರಾರಂಭವಾಗಿದೆ. ಭಾರತದ ಸೈನಿಕರಿಗೆ ಯಾವುದೇ ರೀತಿಯಾದ ತೊಂದರೆ ಆಗಬಾರದು, ಅವರ ಜೀವಕ್ಕೆ ಆಪತ್ತು ಬರಬಾರದು ಎನ್ನುವ ಉದ್ದೇಶದಿಂದ ಶ್ರೀ ಸಿದ್ದಲಿಂಗೇಶ್ವರ ಗುರುಕುಲ ಪಾಠಶಾಲೆಯ ಮುಖ್ಯೋಪಾಧ್ಯರಾದ ಶ್ರೀಶೈಲ ಶಾಸ್ತ್ರಿಗಳ ನೇತೃತ್ವದಲ್ಲಿ ಪಾಠಶಾಲೆಯ ಮಕ್ಕಳು,ವೇದ ಪಂಡಿತರು ಸೇರಿಕೊಂಡು ಜಯಾಧಿ ಹೋಮ ಹಾಗೂ ಮಹಾಮೃತ್ಯುಂಜಯ ಹೋಮವನ್ನು ಮಾಡಲಾಯಿತು.ಬಳಿಕ ಭಾರತೀಯ ಸೈನ್ಯಕ್ಕೆ ಜಯವಾಗಲಿ ಎಂದು…

    Read More »
  • ಬೆಂಕಿಗೆ ಆಹುತಿಯಾದ ಡ್ರಿಪ್ ಪೈಪ್ ; ಲಕ್ಷಾಂತರ ರೂಪಾಯಿ ‌ಹಾನಿ.

    ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಬೇನಾಡಿ ಹುನ್ನರಗಿ ರಸ್ತೆಯಲ್ಲಿ ಬರುವ ಅಜೀತರಾವ ಆನಂದರಾವ ಪಾಟೀಲ ಇವರ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಿಪ್ ಪೈಪ್ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅಜಿತರಾವ್ ಪಾಟೀಲ ಎಂಬುವವರ ಜಮೀನಿನಲ್ಲಿ ಫಿಲ್ಟರ್ ಹೌಸ್ ನಲ್ಲಿ 14 ಎಕರೆಗೆ ಸಾಕಾಗುವಷ್ಟು ಡ್ರಿಪ್ ಪೈಪ್ ಗಳನ್ನು ತೆಗೆದು ಸಂಗ್ರಹಿಸಿದ್ದರು. ರಾತ್ರಿ 9 ರಿಂದ 9:30 ರ ನಡುವೆ ಟ್ರಿಪ್ ಪೈಪ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಇಡೀ ಪೈಪ್ ಗಳು ಸುಟ್ಟು ಕರಕಲಾಗಿದೆ. ಬೆಂಕಿ ವೇಗವು ತೀವ್ರವಾಗುತ್ತಿದಂತೆ, ಗ್ರಾಮಸ್ಥರು ನಿಪ್ಪಾಣಿ ಅಗ್ನಿಶಾಮಕ ದಳಕ್ಕೆ…

    Read More »
  • ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ.

    ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಪ್ರತಿಭಟನೆ. ಮಜೀದ್ ಎ ಉಮರ್ ದಿಂದ ಬಸವೇಶ್ವರ ಸರ್ಕಲ್ ವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ.ರ್ಯಾಲಿಯಲ್ಲಿ ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಭಾಗಿ. ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ.ವಕ್ಫ್ ತಿದ್ದುಪಡಿ ಕಾನೂನು ವಾಪಸ್ ಪಡೆಯುವಂತೆ ಆಗ್ರಹ.ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ.

    Read More »
  • ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ ಮೇ 6 ರಿಂದ ಜರುಗಲಿದೆ.

    ಚಿಕ್ಕೋಡಿ:ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವು ಮೇ 6 ರಿಂದ 9 ವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾಕಮೀಟಿಯ ಸದಸ್ಯರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಶ್ರೀಆದಿಶಕ್ತಿ,ಜಗನ್ಮಾತೆ,ಮಹಾತಾಯಿ,ಜಾಗೃತದೇವಿ,ಮಹಾಶಕ್ತಿ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ ಮೇ 6 ರಂದು ಪ್ರಾರಂಭವಾಗಲಿದೆ.ಅದೇ ದಿನ ರಾತ್ರಿ 8 ಗಂಟೆಗೆ ದೇವಿಗೆ ಸೀರೆ ಏರಿಸುವುದು,ಉಡಿತುಂಬುವುದು,ನೈವ್ಯದ್ಯ,ಹಾಗೂ ಕರಿಕಟ್ಟುವುದು ಬಳಿಕ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ‌.ಮೇ 7 ರಂದು ಮುಂಜಾನೆ 6 ಗಂಟೆಗೆ ವಿಧಿ ವಿಧಾನ ಪ್ರಕಾರ ಪೂಜೆ,ಮಧ್ಯಾಹ್ನ 12 ಗಂಟೆಗೆ ಶ್ರೀ ಭಾವೇಶ್ವರಿದೇವಿಯ ಪಲ್ಲಕಿ ಮೆರವಣಿಗೆ ,ಶೆಹನಾಯಿ ವಾದ್ಯ ಸೇವೆ ಹಾಗೂ ಮಧ್ಯಾಹ್ನ 1…

    Read More »
Back to top button