
ವಿಜಯಪುರ: ನಗರದಲ್ಲಿ ಹನುಮ ಜಯಂತಿ ಉತ್ಸವ ಅಂಗವಾಗಿ ಬೃಹತ್ ಆಂಜನೇಯ ಮೂರ್ತಿಯ ಮೆರವಣಿಗೆ ನಡೆಯಿತು. ವಿಜಯಪುರ ನಗರದ ಬೋವಿ ಸಮಾಜದ ವತಿಯಿಂದ ಹನುಮ ಯುವಕ ಸಂಘಟನೆ ಹಮ್ಮಿಕೊಂಡ ಬೃಹತ್ ಮೆರವಣಿಗೆಯಲ್ಲಿ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಿದ್ದರು.
ಹನುಮ ಜಯಂತಿ ಉತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 15 ಅಡಿ ಎತ್ತರದ ಶ್ರೀ ಆಂಜನೇಯನ ಮೂರ್ತಿಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿ, ಮಾತನಾಡಿದರು. ಇದಕ್ಕೂ ಮೊದಲು ದೇಶದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರು, ಗಣ್ಯರು, ಹಿಂದೂ ಕಾರ್ಯಕರ್ತರು, ದೇಶಾಭಿಮಾನಿಗಳು, ಹನುಮಾನ್ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಇದೇ ವೇಳೆ ಡಿಜೆ ಶಬ್ದಕ್ಕೆ ಯುವಕರು ಸಖತ್ ಸ್ಟೆಪ್ ಹಾಕಿದರು.