ಬೈಲ್ ಹೊಂಗಲ್
-
ನೂತನವಾಗಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪಥಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಬೈಲಹೊಂಗಲ: ನೂತನವಾಗಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪಥಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಬೈಲಹೊಂಗಲ: ಪಟ್ಟಣದ ಹೊರವಲಯದ ದೇವಲಾಪುರ ರಸ್ತೆಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ರೂ.5.50 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪಥವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತೇಶ ಶಾಸ್ತ್ರೀ ಆರಾದ್ರಿ ಮಠ, ಪುರಸಭೆ ಅಧ್ಯಕ್ಷ ವಿಜಯ ಬೋಳ ನ್ನವರ, ಅಪರ…
Read More » -
ಏರ್ ಇಂಡಿಯಾ ವಿಮಾನ ದುರಂತ ಮೊದಲೇ ಭವಿಷ್ಯ ನುಡಿ ದಿದ್ದ ಅಭಿನವ ಸಿದ್ದಲಿಂಗ ಸ್ವಾಮೀಜಿ.
ಬೈಲಹೊಂಗಲ : ಗುಜರಾತಿನ ಅಹಮದಾಬಾದ್ ವಿಮಾನ ದುರಂತದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸ್ವಾಮೀಜಿಯೊಬ್ಬರು ದುರಂತದ ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಮಠದಲ್ಲಿ ಕಳೆದ ಏಪ್ರಿಲ್ 20 ರಂದು ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಕಾಲಜ್ಞಾನ ನುಡಿದಿದ್ದರು. ಈ ವೇಳೆ ಲೋಹದ ಹಕ್ಕಿಯ ದುರಂತದ ಕುರಿತು ಎಚ್ಚರಿಕೆ ನೀಡಿದ್ದರು. ಸಧ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ವಾಮೀಜಿ ನುಡಿದಿದ್ದ ಕಾಲಜ್ಞಾನದಲ್ಲಿ ಉಕ್ಕಿನ ಹಕ್ಕಿಗೆ ಪೆಟ್ಟು ಹತ್ತಿತ್ತು…
Read More » -
ಬೈಲಹೊಂಗಲ ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಟ್ರೈಲರ್ ಕಳ್ಳತನ…. ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು..
ಬೈಲಹೊಂಗಲ : ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು…. ಬೈಲಹೊಂಗಲ ತಾಲೂಕಿನಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಕಳ್ಳರನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಗೋಕಾಕ ತಾಲೂಕಿನ ನೆಲಗಂಟಿ ಗ್ರಾಮದ ಬಸಪ್ಪ ಸತ್ಯಪ್ಪ ತಳವಾರ 27 ಅಡಿವಪ್ಪ ಲಕ್ಷ್ಮಣ್ ಸಿಂತಮನಿ 28 ರಾಜು ಶೆಟ್ಟಿಪ್ಪ ನಾಯ್ಕ 26 ಸಿದ್ದಪ್ಪ ಶಿವಪ್ಪ ಚಿಕ್ಕೊಪ್ಪದವರ 20 ಪರಪ್ಪ ಬಸಪ್ಪ ಕಡ್ಲಿ 21 ಬಂಧಿತ ಆರೋಪಿಗಳು ಬಂದಿತ ಆರೋಪಿಗಳಿಂದ ಅಂದಾಜು 14 ಲಕ್ಷ ಮೌಲ್ಯದ 5 ಟ್ಯಾಕ್ಟರ್ ಟ್ರೈಲರ್ ಒಂದು ಟ್ಯಾಕ್ಟರ್ ಇಂಜಿನ್ ಒಂದು ರೂಟರ್…
Read More » -
ಸಿಡಿಲು ಬಡಿದು ಮೃತಪಟ್ಟಿದ್ದ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ವಿತರಣೆ
ಬೈಲಹೊಂಗಲ: ಸಿಡಿಲು ಬಡಿದು ಮೃತಪಟ್ಟಿದ್ದ ಕುಟುಂಬಕ್ಕೆ 5 ರೂಪಾಯಿ ಚೆಕ್ ವಿತರಣೆ ಕಿತ್ತೂರು ಮತಕ್ಷೇತ್ರದ ಮೆಕಲಮರಡಿ ಗ್ರಾಮದ ಶಾನೂರ್ ಹುಸೇನಸಾಬ ಶಾಬಾಹಿ ಎಂಬ ವ್ಯಕ್ತಿ ಹಲಕಿ ಕ್ರಾಸ್ ಬಳಿ ಸಿಡಿಲು ಬಡಿದು ಮೃತಪಟ್ಟಿದ್ದ ವ್ಯಕ್ತಿ ಕುಟುಂಬಕ್ಕೆ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಮತ್ತು ಬೈಲಹೊಂಗಲ ತಹಶೀಲ್ದಾರ H ಶಿರಹಟ್ಟಿ ನೇಸರ್ಗಿ ಭಾಗದ ಕಂದಾಯ ಇಲಾಖೆ ಸರ್ಕಲ್ ಜಗದೀಶ ಚೂರಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಎಲ್ಲರೂ ಸೇರಿ 5 ಲಕ್ಷ ರೂಪಾಯಿ ಚೆಕ್ ಮುಖಾಂತರ ಸಹಾಯ ಧನವನ್ನು ನೀಡಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ…
Read More » -
ಧಾರಾಕಾರ ಮಳೆ ಹಿನ್ನೆಲೆ ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿದ ನೀರು.
ಬೈಲಹೊಂಗಲ : ಧಾರಾಕಾರ ಮಳೆ ಹಿನ್ನೆಲೆ ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿದ ನೀರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತ್ತಗಟ್ಟಿ ಪಂಚಾಯತ್ ಕಚೇರಿ ಜಲಾವೃತ ಪಂಚಾಯತ್ ಕಿಟಕಿಯಿಂದ ರಭಸವಾಗಿ ಹೊರಬರ್ತಿರೋ ನೀರು, ನಿರಂತರ ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಕೆರೆಯಂತಾದ ರಸ್ತೆ ಇಕ್ಕೆಲಗಳು
Read More » -
ಎರಡು ಕಾರುಗಳು ನಡುವೆ ಮುಖಾಮುಖಿ ಡಿಕ್ಕಿ ಒಂದೇ ಕುಟುಂಬದ ಮೂವರು ದಾರುಣ ಸಾವು
ಬೈಲಹೊಂಗಲ: ಎರಡು ಕಾರುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಬೈಲಹೊಂಗಲ ಬೆಳಗಾವಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಬೈಲಹೊಂಗಲದಿಂದ ಹಿರೇಬಾಗೇವಾಡಿಗೆ ಬರ್ತಿದ್ದ ಅಲ್ಟೋ ಕಾರು ಹಾಗೂ ಬೆಳಗಾವಿಯಿಂದ ಬೈಲಹೊಂಗಲ ಹೋಗುತ್ತಿದ್ದ ಕೀಯಾ ಕಾರು ಡಿಕ್ಕಿ ಸಂಭವಿಸಿದೆ. ಓವರ್ ಟೆಕ್ ಮಾಡಲು ಹೋಗಿ ಎದುರಿನಿಂದ ಬರ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿಯಾಗಿದ್ದು, ಅಲ್ಟೋ ಕಾರಿನಲ್ಲಿದ್ದ ಪತಿ ಅಯುಮ್, ಪತ್ನಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ ಮತ್ತೊಂದು…
Read More » -
ನಿವೃತ್ತ ಶಿಕ್ಷಕ ನೇಣಿಗೆ ಶರಣು.
ಬೈಲಹೊಂಗಲ :ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರು ಮಾನಸಿಕ ನೊಂದು ಮರಕ್ಕೆ ನೇಣು ಹಾಕಿಕೊಂಡು . ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ಬೆಳಗಾವಿ ರಸ್ತೆಯ ಬೈಲವಾಡ ಹದ್ದಿಯ ಜಮೀನಿನಲ್ಲಿ ನಡೆದಿದೆ. ನಾಗನೂರ ಗ್ರಾಮದ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ, ಹಾಲಿ ಉಳವಿ ಚನ್ನಬಸವೇಶ್ವರ ನಗರದ ನಿವಾಸಿ ಬಸವರಾಜ ಕರಬಸಪ್ಪ ತಲ್ಲೂರ (66) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More » -
2008 -2009 ನೇ ಸಾಲಿನ ಹಳೆ ವಿದ್ಯಾರ್ಥಿಗಳಿಗೆ ಸಿಹಿ ಬೋಜನ ಏರ್ಪಡಿಸಲಾಗಿತ್ತು.
ಬೈಲಹೊಂಗಲ : ದಿನಾಂಕ 24/4/25ರಂದು ಬೈಲಹೊಂಗಲ ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮೇಳನ ನೆರವೇರಿಸಲಾಗಿತ್ತು. ಪ್ರಾಚಾರ್ಯರಾದ ಸಿ. ವಿ. ಗನಾಚಾರಿ 26.4.2025 ರಂದು ಭೋಜನಕೋಟಕ್ಕೆ ಎಲ್ಲ ಹಳೆಯ 2008-2009 ನೇ ಸಾಲಿನ ವಿದ್ಯಾರ್ಥಿಗಳನ್ನು ಎಲ್ಲ ಉಪನ್ಯಾಸಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲರೂ ಸಹಬಾಳ್ವೆ ಪ್ರೀತಿ ವಿಶ್ವಾಸದಿಂದ ಮುಂದಿನ ಜೀವನ ನಡೆಸಿ ಎಂದು ಸಿಬಿ ಗಣಾಚಾರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು. ಹಾಗೆ ಹಳೆ ಉಪನ್ಯಾಸಕರು ಮತ್ತು ಪ್ರಸ್ತುತ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಭೋಜನಕೂಟ ವ್ಯವಸ್ಥೆಯನ್ನು ಮಾಡಿದ್ದರು…
Read More » -
ದೊಡ್ಡವಾಡ ಗ್ರಾಮದಲ್ಲಿ ಮತ್ತೆ ಬಣವಿಗಳಿಗೆ ಬೆಂಕಿ .
ಬೈಲಹೊಂಗಲ: ತಾಲೂಕಿನ ದೊಡ್ಡವಾಡ ಗ್ರಾಮದ ಕರಿಕಟ್ಟಿ ರಸ್ತೆ ಪಕ್ಕದ ಹೊಲದಲ್ಲಿ ರೈತರು ಒಟ್ಟಿರುವ ಒಂದು ಹೊಟ್ಟಿನ ಮತ್ತು ಇನ್ನೊಂದು ಕಣಕಿ ಬಣವಿಗೆ ಶುಕ್ರವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿವೆ. ಬೈಲಹೊಂಗಲ ಅಗ್ನಿಶಾಮಕ ದಳದವರಿಗೆ ರೈತರು ಕರೆ ಮಾಡಿ ಮಾಹಿತಿ ನೀಡಿದ್ದು ಅಗ್ನಿಶಾಮಕ ಸಿಬ್ಬಂದಿ ವಾಹದೊಂದಿಗೆ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ ಗ್ರಾಮದ ರೈತ ಮಹದೇವಪ್ಪ ಮಲ್ಲೇಶಪ್ಪ ಹಾಲಣ್ಣವರ ಅವತ್ತಿಗೆ ಸೇರಿದ ಬಣವೆಗಳು ಇವಾಗಿವೆ. ಹೊತ್ತಿ ಉರಿಯುತ್ತಿರುವ ಬನಣವೆಗಳ ಬಳಿ ಮತ್ತೊಂದು ದೊಡ್ಡ ಹೊಟ್ಟಿನ ಬಣವೇ ಇದ್ದು ಅದಕ್ಕೂ ಬೆಂಕಿ ತಗುಕುವ ಸಾಧ್ಯತೆಯಿಂದ ರೈತರು ಅದಕ್ಕೆ…
Read More » -
ವಕ್ಕುಂದ ಗ್ರಾಮದಲ್ಲಿ ಹೆಣ್ಣು ಕರುಗಳ ಪ್ರದರ್ಶನ ಗಮನ ಸೆಳೆಯಿತು.
ಬೈಲಹೊಂಗಲ್ : ಆಕಳು ಹಾಗೂ ಎಮ್ಮೆ ಕರುಗಳ ಸಾಕಾಣಿಕೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಬೈಲಹೊಂಗಲ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾದ ಕರುಗಳ ಪ್ರದರ್ಶನ ಗಮನ ಸೆಳೆಯಿತು. ಜಿಲ್ಲಾ ಪಂಚಾಯತಿ,ಬೆಳಗಾವಿ ತಾಲೂಕು ಪಂಚಾಯತ್ ಬೈಲಹೊಂಗಲ್ ಗ್ರಾಮ ಪಂಚಾಯತ್ ಒಕ್ಕುಂದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೈಲಹೊಂಗಲ,ಪಶು ಚಿಕಿತ್ಸಾಲಯ ಆನಿಗೋಳ, ಹಾಲು ಉತ್ಪಾದಕರ ಸಹಕಾರ ಸಂಘಗಳು ಒಕ್ಕುಂದ ಸಂಯುಕ್ತ ಆಶ್ರಯದಲ್ಲಿ ಹೆಣ್ಣು ಕರುಗಳ ಪ್ರದರ್ಶನ ಜರುಗಿತು ಬೈಲಹೊಂಗಲ ಮತಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಯ ಅಧ್ಯಕ್ಷರಾದ…
Read More »