ಮೈಸೂರ್

  • ಸಿಎಂ ವಿರುದ್ಧ ಅವಾಚ್ಯ ಪದ ಬಳಸಿದ ಕೇಂದ್ರ ಕಾರಾಗೃಹದ ವಾರ್ಡನ್‌ ಮಧುಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮೈಸೂರು ನಗರ ಕೇಂದ್ರ ಕಾರಾಗೃಹದ ವಾರ್ಡನ್‌ ಮಧುಕುಮಾರ್ ಅವರನ್ನು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸರು ಬಂಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕುಡಿದ ಮತ್ತಿನಲ್ಲಿ ಮಧುಕುಮಾರ್ ಅವಾಚ್ಯ ಪದ ಬಳಸಿ ರೆಕಾರ್ಡ್ ಮಾಡಿದ್ದ 5.33 ನಿಮಿಷಗಳ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಗರಂ ಆದ ಘಟನೆ ಉಲ್ಲೇಖಿಸಿ ಏಪ್ರಿಲ್ 28ರಂದು ಮಧುಕುಮಾರ್ ವಿಡಿಯೋ ರೆಕಾರ್ಡ್ ಮಾಡಿ, ಸಿಎಂ ಅವರನ್ನು ನಿಂದಿಸಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ…

    Read More »
  • ಇಂದಿರಾ ಗಾಂಧಿ ಪಾಕಿಸ್ತಾನವನ್ನು ಬಗ್ಗುಬಡಿದಾಗ ಇಡೀ ದೇಶ ವಿರೋಧ ಪಕ್ಷದವರು ಅವರ ಜೊತೆಗಿದ್ದು ಬೆಂಬಲ ಕೊಟ್ಟರು; ಹೆಚ್​ ವಿಶ್ವನಾಥ್

    ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ದೇಶವು ಮೋದಿ, ಸರ್ಕಾರ ಹಾಗೂ ಸೈನಿಕರ ಜೊತೆಗೆ ನಿಲ್ಲಬೇಕು. ನಾವ್ಯಾರು ಇಲ್ಲಿ ಬೇರೆ ಬೇರೆ ರೀತಿ ಮಾತನಾಡಲು ಆಗಲ್ಲ ಎಂದು ಹೇಳಿದರು. ಅಂದು ಇಂದಿರಾ ಗಾಂಧಿಗೆ ಇಡೀ ದೇಶದ ಬೆಂಬಲ ಸಿಕ್ಕಿತ್ತು: 1971ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಬಗ್ಗುಬಡಿದಾಗ ಇಡೀ ದೇಶ ಹಾಗೂ ವಿರೋಧ ಪಕ್ಷದವರು ಅವರ ಜೊತೆಗಿದ್ದು ಬೆಂಬಲ ಕೊಟ್ಟರು ಎಂಬುದನ್ನು ಹೆಚ್​ ವಿಶ್ವನಾಥ್ ಸ್ಮರಿಸಿದರು. ನಮ್ಮ ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಜೈ ಎನ್ನುವರು ದೇಶದ್ರೋಹಿಗಳು. ಅದಕ್ಕಾಗಿ…

    Read More »
  • ಪಾಕಿಸ್ತಾನಕ್ಕೆ ಜೈ ಎಂದವರನ್ನು ಗುಂಡಿಕ್ಕಿ ಕೊಲ್ಲಬೇಕು;ಹೆಚ್. ವಿಶ್ವನಾಥ್‌

    ಮೈಸೂರು : ಪಾಕಿಸ್ತಾನಕ್ಕೆ ಜೈ ಎಂದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್. ವಿಶ್ವನಾಥ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಕಾರ್ಮಿಕ ದಿನಾಚರಣೆ, ಎಲ್ಲಾ ಕಾರ್ಮಿಕರಿಗೂ ಶುಭಾಶಯ ಎಂದರು. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ದೇಶವು ಮೋದಿ, ಸರ್ಕಾರ ಹಾಗೂ ಸೈನಿಕರ ಜೊತೆಗೆ ನಿಲ್ಲಬೇಕು. ನಾವ್ಯಾರು ಇಲ್ಲಿ ಬೇರೆ ಬೇರೆ ರೀತಿ ಮಾತನಾಡಲು ಆಗಲ್ಲ ಎಂದು ಹೇಳಿದರು. ಅಂದು ಇಂದಿರಾ ಗಾಂಧಿಗೆ ಇಡೀ…

    Read More »
  • ಆಶ್ರಯ ಬೇಡಿ ಬಂದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ ಮಹಿಳೆಗೆ 20 ವರ್ಷ ಕಠಿಣ ಶಿಕ್ಷೆ.

    ಮೈಸೂರು: ಆಶ್ರಯ ಬೇಡಿ ಬಂದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಮಹಿಳೆ ಸೇರಿ ಮೂವರಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆನಂದ ಪಿ.ಹೊಗಾಡೆ ತೀರ್ಪು ನೀಡಿದ್ದಾರೆ. ಕೆ.ಆರ್.ಪೇಟೆ ತಾಲೂಕು ಚಿಕ್ಕನಹಳ್ಳಿಪುರ ಗ್ರಾಮದ ರೇಖಾ, ಶ್ರೀರಂಗಪಟ್ಟಣದ ರಾಘವೇಂದ್ರ, ಪುರ ಗ್ರಾಮದ ಉಮೇಶ್‌ ಶಿಕ್ಷೆಗೆ ಗುರಿಯಾದವರು. ಇತರ ಆರೋಪಿಗಳಾದ ಲೀಲಾವತಿ ಮತ್ತು ಲಲಿತಾ ಅವರನ್ನು ಸನ್ನಡತೆ ಕಾಯ್ದುಕೊಂಡು ಹೋಗುವ ಷರತ್ತಿನ ಮೇರೆಗೆ ಪಿಒ ಕಾಯ್ದೆಯಡಿ ಬಿಡುಗಡೆಗೊಳಿಸಲಾಗಿದೆ.…

    Read More »
  • ತಾಯಿ, ಹೆಂಡತಿ,ಮಗನಿಗೆ ವಿಷಕೊಟ್ಟು ಕೊನೆಗೆ ತಾನು ನೇಣಿಗೆ ಶರಣು.

    ಮೈಸೂರ: ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್​​ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕೊಲೆ ಹಾಗೂ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ತಾಯಿ, ಪತ್ನಿ ಹಾಗೂ ಮಗನಿಗೆ ವಿಷವುಣಿಸಿದ ಗಂಡಸು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಕುಶಾಲ್ ​(15), ಚೇತನ್​​ (45), ರೂಪಾಲಿ (43), ಪ್ರಿಯಂವಧಾ (62) ಮೃತ ದುರ್ದೈವಿಗಳು. ಚೇತನ್​​​ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್​ಗೆ ವಿಷವುಣಿಸಿ ಸಾಯಿಸಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್​…

    Read More »
  • ಕೇವಲ 1 ಗಂಟೆ ಅವಧಿಯಲ್ಲಿ ಎರಡು ಖಾತೆಗಳಿಂದ 19.30 ಲಕ್ಷ ಮಂಗಮಾಯ..!

    ಮೈಸೂರು:ಕೇವಲ 1 ಗಂಟೆ ಅವಧಿಯಲ್ಲಿ ಎರಡು ಖಾತೆಗಳಿಂದ ಖದೀಮರು 19.30 ಲಕ್ಷ ಲಪಟಾಯಿಸಿ ವಂಚಿಸಿರುವ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶ್ರೀರಾಂಪುರ ನಿವಾಸಿ ಫಾರ್ಮಾಕ್ಯೂಟಿಕಲ್ಸ್ ಒಂದರಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಮುರುಗೇಶ್ ಎಂಬುವರ ಖಾತೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಐಸಿಐಸಿಐ ಬ್ಯಾಂಕ್ ನಲ್ಲಿ ಹೊಂದಿದ್ದ ಒಂದು ಖಾತೆಯಿಂದ 17 ಲಕ್ಷ ಮತ್ತೊಂದು ಖಾತೆಯಿಂದ 2.30 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದ ಮುರುಗೇಶ್ ರವರ ಖಾತೆ ವಿವರವನ್ನು ಹ್ಯಾಕ್ ಮಾಡಿರಬಹುದೆಂದು ಶಂಕಿಸಲಾಗಿದೆ. ಕೇವಲ ಒಂದೇ ಗಂಟೆ ಅವಧಿಯಲ್ಲಿ…

    Read More »
  • ಕರ್ನಾಟಕವು ಕೂಡ ಪುಣ್ಯ ಜಲಗಳಿರುವ ಭೂಮಿ ಇಲ್ಲಿಯೂ ಕೂಡ ಗಂಗಾ ಆರತಿಯಲ್ಲಿ ಕಾವೇರಿ ಆರತಿ; ಡಿ.ಕೆ.ಶಿವಕುಮಾರ

    ಮೈಸೂರ:ಕರ್ನಾಟಕವು ಕೂಡ ಪುಣ್ಯ ಜಲಗಳಿರುವ ಭೂಮಿಯಾಗಿದ್ದು, ಇಲ್ಲಿಯೂ ಕೂಡ ಗಂಗಾ ಆರತಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ಮೈಸೂರಿನಲ್ಲಿ ಕುಂಭಮೇಳದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾವೇರಿ, ಕಪೀಲಾ ಮತ್ತು ಸ್ಫಟೀಕಾ ಪವಿತ್ರವಾದ ಸಂಗಮ. ತಲಕಾಡಿನ ನಮ್ಮ ಪೂರ್ವಜರ ಪರಂಪರೆಯನ್ನು ಮಠಾಧೀಶರು ಬೆಳೆಸಿಕೊಂಡು ಬಂದಿದ್ದಾರೆ. ಕುಂಭಮೇಳದ ನೀರು ಪವಿತ್ರವಾಗಿದೆ. ಇದನ್ನು ಉಳಿಸಿಬೆಳೆಸಬೇಕು. ನಮ್ಮ ನಾಡಿಯಲ್ಲಿಯೂ ಇಂತಹ ಪವಿತ್ರ ಸ್ಥಳವಿರುವುದು ನಮ್ಮ ಭಾಗ್ಯ. ಈಗಾಗಲೇ ಗಂಗಾ ಆರತಿ ರೀತಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಲಾಗಿದ್ದು, ಇದನ್ನು ಮುಂದುವರೆಸುವ ಅವಶ್ಯಕತೆಯಿದೆ ಎಂದಿದ್ದಾರೆ. ಇನ್ನು…

    Read More »
  • ರಾತ್ರೋರಾತ್ರಿ ಪ್ರತಿಷ್ಠಾಪನೆ ಆಯಿತುನಾಡಪ್ರಭು ಕೆಂಪೇಗೌಡ ಪ್ರತಿಮೆ.

    ಮೈಸೂರು: ಟಿ ನರಸೀಪುರ ರಸ್ತೆಯಲ್ಲಿ ರಾತ್ರೋರಾತ್ರಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಆಗಮಿಸಿ ಅದನ್ನು ತೆರವಿಗೊಳಿಸಬೇಕೆಂದು ಪೊಲೀಸರು ಹೇಳಿದಾಗ ಒಕ್ಕಲಿಗ ಸಂಘದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಪರವಾಗಿ ಮಾತಾಡಿದ ಒಕ್ಕಲಿಗ ಮುಖಂಡರೊಬ್ಬರು ಕಳೆದ ಮೂರು ವರ್ಷಗಳಿಂದ ಸ್ಥಳದಲ್ಲಿ ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪಿಸುವುದಕ್ಕೆ ಪ್ರಯತ್ನಗಳು ನಡೆದಿದ್ದವು. ಶಾಸಕರಾದ ಶ್ರೀವತ್ಸ ಮತ್ತು ಹರೀಶ್ ಸಮಯ ತೆಗೆದುಕೊಂಡಿದ್ದರೂ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ಪಡೆದುಕೊಳ್ಳಲಿಲ್ಲ. ಹಾಗಾಗಿ ಸ್ಥಳೀಯರೇ ನಿನ್ನೆ ರಾತ್ರಿ ಇಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳುತ್ತಾರೆ.

    Read More »
  • ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭ ಫೆ. 10 ರಿಂದ 3 ದಿನಗಳ ಕಾಲ ನಡೆಯಲಿದೆ.

    ಮೈಸೂರು: ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ 144 ವರ್ಷಗಳ ಬಳಿಕ ಪವಿತ್ರ ಕುಂಭಮೇಳ (Kumbh Mela) ನಡೆಯುತ್ತಿದೆ. ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಇದೀಗ ಇತ್ತ ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ಅಂದರೆ ಫೆ. 10 ರಿಂದ 3 ದಿನಗಳ ಕಾಲ ಕುಂಭಮೇಳ ನಡೆಯಲಿದೆ. ಮೂರು ವರ್ಷಕ್ಕೊಮ್ಮೆ ಜಿಲ್ಲೆಯ ಟಿ.ನರಸೀಪುರದ ತಿರುಮಕೂಡಲಿನಲ್ಲಿ ಕುಂಭಮೇಳ ನಡೆಯಲಿದ್ದು, ನಾಳೆ ಸಚಿವ ಡಾ ಹೆಚ್. ಸಿ‌ ಮಹದೇವಪ್ಪ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಆದಿ ಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ…

    Read More »
  • ಆತ್ಮಹತ್ಯೆ ಬೇಡ: ಸರ್ಕಾರ ನಿಮ್ಮ ಜೊತೆಗಿದೆ: ಕಂಪ್ಲೇಂಟ್ ಕೊಡಿ: ಸಿಎಂ‌ ಸಿದ್ದರಾಮಯ್ಯ

    ಮೈಸೂರು : ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಇದನ್ನು ಇಡೀ ಸಮಾಜ ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಮೈಸೂರು ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗದ್ದುಗೆ ದರ್ಶನ ಪಡೆದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಾತ್ಯತೀತ ಸಮಾಜ ನಿರ್ಮಾಣ ಸಂವಿಧಾನದ ಮೂಲ ಉದ್ದೇಶ. ಶರಣಶ್ರೇಷ್ಠರಾದ ಬಸವಾದಿ ಶರಣರ ಆಶಯವೂ ಆಗಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬಸವಣ್ಣನವರ ಆಶಯದಂತೆ ಜಾತಿ, ಧರ್ಮದ ಹೆಸರಿನ ಮನುಷ್ಯ…

    Read More »
Back to top button