ರಾಜ್ಯ
-
ಲಕ್ಕಣ್ ಅಣ್ಣ ಜಾರಕಿಹೊಳಿ ಬೆಳಗಾವಿ ವಿಧಾನ ಪರಿಷತ್ ಸದಸ್ಯರು ಇವರಿಗೆ ಕೂಡಲಸಂಗಮದ 39ನೇ ಶರಣ ಮೇಳದ ಕಾರ್ಯಕ್ರಮಕ್ಕೆ ಆಹ್ವಾನ
ಸನ್ಮಾನ್ಯ ಶ್ರೀ ಲಕ್ಕಣ್ ಅಣ್ಣ ಜಾರಕಿಹೊಳಿ ಬೆಳಗಾವಿ ವಿಧಾನ ಪರಿಷತ್ ಸದಸ್ಯರು ಇವರಿಗೆ ಕೂಡಲಸಂಗಮದ 39ನೇ ಶರಣ ಮೇಳದ ಕಾರ್ಯಕ್ರಮಕ್ಕೆ ಆಹ್ವಾನಿಸಲು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರ ನೇತೃತ್ವದಲ್ಲಿ ಆಮಂತ್ರಣ ಪತ್ರಿಕೆ ನೀಡಿ ಗೌರವ ಪೂರ್ವಕವಾಗಿ ಆಮಂತ್ರಿಸಲಾಯಿತು ಅಧ್ಯಕ್ಷರು ರಾಷ್ಟ್ರೀಯ ಬಸವದಳ ಬಸವ ಮಂಟಪ ಪ್ರತಿಷ್ಠಾನ ವಿದ್ಯಾನಗರ ಗೋಕಾಕ
Read More » -
ನಕಲಿ ಮುಟೇಷನ್ ದಾಖಲೆ ಸೃಷ್ಟಿಸಿ ವಂಚನೆ ಆರೋಪ: ಡಿಸಿಸಿ ಬ್ಯಾಂಕ್ ನಿರ್ದೇಶಕ ಸೇರಿ ಮೂವರ ವಿರುದ್ಧ ದೂರು
ಯಾದಗಿರಿ: ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಕಲಿ ಮುಟೇಶನ್ (Mutation) ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸೀಲ್ ಹಾಗೂ ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರೊಬ್ಬರು ಸೇರಿದಂತೆ ಮೂವರ ವಿರುದ್ಧ ಜಿಲ್ಲೆಯ ಸುರಪುರ (ಶೋರಾಪೂರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರಪುರ ತಾಲೂಕಿನ ತಿಮ್ಮಾಪುರ ಕಾಲೋನಿಯ ನಿವಾಸಿ ಅಶೋಕ ಸಜ್ಜನ್ (58) ಅವರು ನೀಡಿದ ದೂರಿನ ಮೇರೆಗೆ, ಬಸವರಾಜ ಸಜ್ಜನ್, ಸುರೇಶ ಸಜ್ಜನ್ ಹಾಗೂ ಪ್ರಕಾಶ ಸಜ್ಜನ್ ಎಂಬವರ ವಿರುದ್ಧ ಐಪಿಸಿ ಕಲಂಗಳು 464, 465, 468, 471 ಮತ್ತು 420…
Read More » -
ಮನರೇಗಾ ರದ್ದು: ಕೇಂದ್ರದ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ತೀರ್ಮಾನ
ಬೆಂಗಳೂರು: ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ರದ್ದುಗೊಳಿಸಿ ಜಿ ರಾಮ್ ಜಿ ಎಂದು ಪುನರ್‌ನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕಾನೂನು ಹೋರಾಟ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್, “ಸಂಪುಟ ಸಭೆಯಲ್ಲಿ ಮನರೇಗಾ ರದ್ದು ಬಗ್ಗೆ ಚರ್ಚೆ ಆಗಿದೆ. ನರೇಗಾ ರದ್ದು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ ಮಾಡಲಾಗಿದೆ. ಈ ವಿಚಾರವನ್ನು ಹೋರಾಟದ ಮೂಲಕ ಜನರ ಬಳಿಯೂ ಕೊಂಡೊಯ್ಯಲಿದ್ದೇವೆ.…
Read More » -
ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ವಿಜಯಪುರದಲ್ಲಿ ಉದ್ಘಾಟಿಸಲಿದ್ದಾರೆ. ಸಿದ್ದರಾಮಯ್ಯನವರು
ವಿಜಯಪುರ :ಸಿಎಂರಿಂದ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ; ಸಚಿವ ಎಂ.ಬಿ.ಪಾಟೀಲರಿಂದ ಅಂತಿಮ ಹಂತದ ಸಿದ್ಧತೆಗಳ ಪರಿವೀಕ್ಷಣೆ* ಆ್ಯಂಕರ್: ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಹವ್ಯಾಸಿ ಸೈಕ್ಲಿಸ್ಟ್ ಗಳು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇಲ್ಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿ, ಚಿನ್ನದ ಪದಕಗಳನ್ನು ಗೆದ್ದುತಂದು ವಿಜಯಪುರದ ಕೀರ್ತಿಯನ್ನು ಎಲ್ಲೆಡೆ ಬೆಳಗಿದ್ದಾರೆ. ವಿಜಯಪುರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಸ್ಟ್ ಗಳು ತಯಾರಾಗುತ್ತಿದ್ದಾರೆ. ಇವರಿಗೆ ಅಭ್ಯಾಸ ಮಾಡಲು ಸೌಲಭ್ಯಗಳ ಕೊರತೆ ಇತ್ತು. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಗುಣಮಟ್ಟದ ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ನಮ್ಮ ವಿಜಯಪುರದಲ್ಲಿ ನಿರ್ಮಿಸಿದ್ದು …
Read More » -
ಮರುಸಿಂಚನ ತರಬೇತಿ ಕಾರ್ಯಗಾರಕ್ಕೆ ಸಂದರ್ಶನ ನೀಡಿದ ಬೆಳಗಾವಿ ಡಯಟ್ ಪ್ರಾಚಾರ್ಯರು
ಮರುಸಿಂಚನ ತರಬೇತಿ ಕಾರ್ಯಗಾರಕ್ಕೆ ಸಂದರ್ಶನ ನೀಡಿದ ಬೆಳಗಾವಿ ಡಯಟ್ ಪ್ರಾಚಾರ್ಯರು ಇವತ್ತು ದಿನಾಂಕ 07/01/2026 ರಂದು ಬಿ ಆರ್ ಸಿ ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಮರು ಸಿಂಚನ, ಜ್ಞಾನ ಸೇತು ಮತ್ತು ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರಕ್ಕೆ ಇವತ್ತು ಬೆಳಗಾವಿ ಡಯಟ್ ಪ್ರಾಚಾರ್ಯರಾದ ಶ್ರೀಯುತ ಅಶೋಕ್ ಸಿಂದಗಿ ಸಾಹೇಬರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಡಯಟ್ ನ ಉಪನ್ಯಾಶಕರಾದ ಶ್ರೀಯುತ ಸುನಧೋಳಿ ಸರ್ ಮತ್ತು ಶ್ರೀಮತಿ ರಾಶಿ ನಾಯಕ್ ಮೇಡಂ ಮತ್ತು ಶಿಕ್ಷಕ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಜಯಕುಮಾರ್ ಹೆಬಳಿ ರವರು…
Read More » -
ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಳವಳ
ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಳವಳ ಮಕ್ಕಳ ಆನ್ ಲೈನ್ ಸುರಕ್ಷತೆ ಕುರಿತು ಅಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿದ ಸಚಿವರು ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಗ್ಗೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಸೂಕ್ತವಾಗಿ ಅರಿವು ಮೂಡಿಸಬೇಕು. ಆಗಷ್ಟೇ ಮಕ್ಕಳಿಗೆ ಆನ್‌ಲೈನ್ ಸುರಕ್ಷತೆ ಸೂಕ್ತವಾಗಿ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಚೈಲ್ಡ್ ಫಂಡ್…
Read More » -
ತಾಳಿಕೋಟಿ AIನಲ್ಲಿ ಕ್ರಿಯೇಟ್ ಮಾಡಿರುವ ಚಿರತೆ ಮತ್ತು ಸಿಂಹ ಫೋಟೋ ವೈರಲ್
ತಾಳಿಕೋಟಿ AIನಲ್ಲಿ ಕ್ರಿಯೇಟ್ ಮಾಡಿರುವ ಚಿರತೆ ಮತ್ತು ಸಿಂಹ ಫೋಟೋ ವೈರಲ್ ತಾಳಿಕೋಟಿ ಪಟ್ಟಣದಲ್ಲಿ ಈ ದಿನ ಬೆಳಗ್ಗೆ 4.30 ಗಂಟೆಗೆ ಚಿರತೆ ಹಾಗೂ ಸಿಂಹದ AI ನಲ್ಲಿ ಕ್ರಿಯೇಟ್ ಮಾಡಿ ಫೋಟೋ ಒಂದು ಹರಿದಾಡಿ ಸ್ಥಳಿಯರಲ್ಲಿ ಆತಂಕ ಮೂಡಿದೆ ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಇದೊಂದು AI ಕ್ರಿಯೇಟ್ ಮಾಡಿರುವ ಫೋಟೋ ಆಗಿದ್ದು ಎರಡು ಮೂರು ಫೇಕ್ ಫೋಟೋಗಳು ಹರಿದಾಡುತ್ತಿವೆ ತಾಳಿಕೋಟಿಯ ಗಡಿ ಸೋಮನಾಳ ರಸ್ತೆಯಲ್ಲಿರುವ ಕುಲಕರ್ಣಿ ಲೇಔಟಿನ ಗೇಟ್ ಮುಂದಿನ ಬದಿಯಲ್ಲಿ ಸಿಂಹ ಹಾಗೂ ಚಿರತೆ ಮತ್ತು ಹುಲಿ ಫೋಟೋವನ್ನು…
Read More » -
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ಮಾಜಿ ಸಚಿವ ಕೆ.ಎನ್.ರಾಜಣ್ಣ
ತುಮಕೂರು: 2028ರ ವಿಧಾನಸಭಾ ಚುನಾವಣೆಗೆ ನಾನು ಸ್ವರ್ಧೆ ಮಾಡಲ್ಲ. ವಿಪಕ್ಷದವರಿಗೆ ವಿರೋಧ ಮಾಡುವುದಕ್ಕೆ ಬೇರೆ ವಿಚಾರ ಇಲ್ಲ. ವಾಚ್ ಬಗ್ಗೆ, ಯಾರಾದರೂ ಊಟಕ್ಕೆ ಹೋದರೂ ಆರೋಪ ಮಾಡುತ್ತಾರೆ. ಅದರ ಬದಲು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಅಂತ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನನ್ನ ಪರವಾಗಿ ಹೋರಾಟ ಮಾಡುವವರಿಗೆ ನಾನು ಚಿರಋಣಿ. ನನಗೆ ಅಧಿಕಾರದ ದಾಹ ಇಲ್ಲ. ನಾನು ಮೊದಲೇ ಹೇಳಿದ್ದೇನೆ, ಡಿ.ಕೆ.ಶಿವಕುಮಾರ್ ಸಿಎಂ…
Read More » -
ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದರೆ ಒಂದು ನಿಮಿಷವೂ ಸಭಾಪತಿ ಸ್ಥಾನದಲ್ಲಿರಲ್ಲ: ಹೊರಟ್ಟಿ
ಬೆಂಗಳೂರು/ಬೆಳಗಾವಿ: ಭ್ರಷ್ಟಾಚಾರ ಆಗಿದೆ ಅಂತ ಸಾಬೀತು ಮಾಡಿದರೆ ಒಂದು ನಿಮಿಷವೂ ಸಭಾಪತಿ ಸ್ಥಾನದಲ್ಲಿ ಇರುವುದಿಲ್ಲ. ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಸುವರ್ಣಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮಾತನಾಡಿದ ವ್ಯಕ್ತಿ ಸಾಕ್ಷಿ ಕೊಟ್ಟಿಲ್ಲ ಅಂದರೆ ಅವನು ಹೇಡಿ ಅಂತಾಗುತ್ತದೆ. ಸದಸ್ಯನಾದವ ಸದನದ ಬಗ್ಗೆ ಮಾತನಾಡಲು ಬರುವುದಿಲ್ಲ. ಆದರೆ, ಅವರೇಕೆ ಆರೋಪ ಮಾಡಿದ್ದಾರೆ ಅಂತ ಗೊತ್ತಿಲ್ಲ. ಹೊರಟ್ಟಿ ಪಕ್ಷಪಾತ ಮಾಡಿದ್ದಾರೆಂದು ಯಾರಾದರು…
Read More » -
ಜ್ವಲಂತ ಸಮಸ್ಯೆಗಳು ಸದನದಲ್ಲಿ ಚರ್ಚೆಯಾಗಬೇಕು
ಬೆಳಗಾವಿ: ಇಂದಿನಿಂದ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಾಗಿದೆ, ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮತ್ತೊಂದೆಡೆ ಮೆಕ್ಕೆಜೋಳ ಬೆಳೆದ ರೈತರ ಗೋಳು ಕೇಳುವವರಿಲ್ಲ. ಈ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ದಲ್ಲಾಳಿಗಳಿಗೆ ರೈತರು ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹತ್ತಿ, ತೊಗರಿ ಸೇರಿದಂತೆ ಹಲವು ಬೆಳೆಗಳ ದರ ಕುಸಿತಕ್ಕೆ ಒಳಗಾಗಿದೆ. ಆದರೂ ಈ ಸರ್ಕಾರ ರೈತರ ಏಳಿಗೆಗಾಗಿ ಶ್ರಮಿಸುತ್ತಿಲ್ಲ ಎಂದು ಹರಿಹಾಯ್ದರು.ಆಡಳಿತ ಯಂತ್ರ ಸಂಪೂರ್ಣ…
Read More »