
ಕಣಬರ್ಗಿ ಗ್ರಾಮದ ಚನ್ನಮ್ಮ ಮೂರ್ತಿ ತೆರವಿಗೆ ಮುಂದಾದ ಪೋಲೀಸರು ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು,ಅದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು…..
ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ರಾಣಿ ಚೆನ್ನಮ್ಮ ಮೂರ್ತಿ ತೆರವು ವಿಚಾರ
ರಾಣಿ ಚೆನ್ನಮ್ಮ ಮೂರ್ತಿ ತೆರವು ಮಾಡದೇ ವಾಪಸ್ ತೆರಳಿದ ಪೊಲೀಸರು, ಪಾಲಿಕೆ ಅಧಿಕಾರಿಗಳು
ಬೆಳಿಗ್ಗೆ 4.30ರವರೆಗೂ ಕಣಬರ್ಗಿ ಗ್ರಾಮಸ್ಥರು ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ, ಬಳಿಕ ವಾಪಸ್ ತೆರಳಿದ ಪೊಲೀಸರು, ಅಧಿಕಾರಿಗಳು
ಬೆಳಗಾವಿ ತಾಲೂಕಿನ ಕಣಬರಗಿ ವೃತ್ತದಲ್ಲಿ ಪ್ರತಿಷ್ಟಾಪಿಸಿದ್ದ ರಾಣಿ ಚೆನ್ನಮ್ಮನ ಮೂರ್ತಿ
ಅನುಮತಿ ಇಲ್ದೆ ಕೂರಿಸಿದ್ದ ಚೆನ್ನಮ್ಮ ಮೂರ್ತಿ ತೆರವಿಗೆ ಬಂದಿದ್ದ ಪೊಲೀಸರಿಗೆ ವಿರೋಧ ವ್ಯಕ್ತಪಡಿಸಿದ್ದ ಜನ
ಯಾವುದೇ ಕಾರಣಕ್ಕೂ ಮೂರ್ತಿ ತೆರವಿಗೆ ಅವಕಾಶ ಕೊಡಲ್ಲ
ಅನುಮತಿ ಪಡೆಯಲು ಎರಡು ದಿನ ಕಾಲಾವಕಾಶ ಕೇಳಿದ್ದ ಗ್ರಾಮಸ್ಥರು
ಕೊನೆಗೆ ಗ್ರಾಮಸ್ಥರ ಮತ್ತು ಪೊಲೀಸರು ಹೈಡ್ರಾಮಾ ಬಳಿಕ ಸದ್ಯಕ್ಕೆ ಮೂರ್ತಿ ತೆರವು ಕೈಬಿಟ್ಟ ವಾಪಸ್ ಹೋದ ಪೊಲೀಸರು
ಇಂದು ಗ್ರಾಮಸ್ಥರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಮೂರ್ತಿ ತೆರವು ಮಾಡಲು ಪೊಲೀಸರ ಸಿದ್ಧತೆ
ಮತ್ತೊಂದೆಡೆ ಎರಡು ದಿನಗಳ ಕಾಲ ಅನುಮತಿ ಪಡೆಯೊದಕ್ಕೆ ಕಾಲಾವಕಾಶ ಕೇಳಿರುವ ಕಣಬರಗಿ ಗ್ರಾಮಸ್ಥರು
ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ