ಹಾವೇರಿ
-
ವಿವಿಧ ಬೇಡಿಕೆ ಇಡೆರಿಸುವಂತೆ ಪೌರ ಕಾರ್ಮಿಕರ ಪ್ರತಿಭಟನೆ.
ಹಾವೇರಿ :ವಿವಿಧ ಬೇಡಿಕೆ ಇಡೆರಿಸುವಂತೆ ಪೌರ ಕಾರ್ಮಿಕರ ಪ್ರತಿಭಟನೆ. ಸವಣೂರು ಪಟ್ಟಣದ ಪುರಸಭೆ ಮುಂದೆ ಪ್ರತಿಭಟನೆ,ಬೇಡಿಕೆ ಈಡೇರಿಸದೆ ಹೋದರೆ ಅ ನಿರ್ದಿಷ್ಟ ಅವಧಿ ಧರಣಿ ಮಾಡುವುದಾಗಿ ಎಚ್ಚರಿಕೆ.. ಹಲವು ಪೌರಕಾರ್ಮಿಕರು ಹತ್ತಾರು ವರ್ಷದಿಂದ ಸೇವೆ ಸಲ್ಲಿಸಿದರು ಇನ್ನು ಕಾಯಂ ಮಾಡಿಲ್ಲ, 20 ವರ್ಷದಿಂದ ದುಡಿಯುತ್ತಿರುವ ಪೌರಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಬೇಕು ಎಂದು ಒತ್ತಾಯ, ಬೇಡಿಕೆ ಈಡೇರಿಸದೆ ಹೋದರೆ ಕುಡಿಯುವ ನೀರಿನ ಸರಬರಾಜು ನಿಲ್ಲಿಸಲಾಗುವುದು. ಕಸ ವಿಲೇವಾರಿ ಸ್ಥಗೀತ ಗೊಳಿಸಲಾಗುವುದು ಎಂದು ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದರುಇಂದೇ ಬೇಡಿಕೆ ಈಡೇರಿಸಿದ ಹೋದರೆ ಇಂದಿನಿಂದ ಅ ನಿರ್ದಿಷ್ಟ ಅವಧಿ…
Read More » -
ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಏಳುಕೋಟಿ ಮೈಲಾರಲಿಂಗೇಶ್ವರನ ಭಕ್ತ.
ಹಾವೇರಿ: ಏಳುಕೋಟಿ ಮೈಲಾರಲಿಂಗೇಶ್ವರ ಭಕ್ತರೊಬ್ಬರು ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾದರಿ ರೈತನ ಹಾವೇರಿ ತಾಲೂಕು ಬಸಾಪುರದಲ್ಲಿದ್ದಾರೆ. ಹೌದು, ಬಸಾಪುರದ ನಾಗಪ್ಪ ಮುದ್ದಿ ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾವು ಬೆಳೆಗಾರ. ವರ್ಷದಿಂದ ವರ್ಷಕ್ಕೆ ಇವರ ತೋಟದಲ್ಲಿ ಅತ್ಯಧಿಕ ಪ್ರಮಾಣದ ಮಾವಿನ ಇಳುವರಿ ಸಿಗುತ್ತಿದೆ. ಸಂಪೂರ್ಣ ಸಾವಯವವಾಗಿ ಮಾವು ಬೆಳೆಯುವ ನಾಗಪ್ಪ ಮುದ್ದಿ ಅವರಿಗೆ ಮಾವಿನ ತೋಟಕ್ಕೆ ವರ್ತಕರು ವರ್ಷದ ಗುತ್ತಿಗೆ ಪಡೆಯಲು ಮುಗಿಬೀಳುತ್ತಾರೆ. ಸಂಪೂರ್ಣವಾಗಿ ಸಾವಯವವಾಗಿರುವ ಮಾವಿನ ತೋಟಕ್ಕೆ ವರ್ಷದಿಂದ ವರ್ಷಕ್ಕೆ ಅತ್ಯಧಿಕ ಪ್ರಮಾಣದ ಹಣ ಸಿಗುತ್ತಿದೆ. 12 ಎಕರೆ ವಿಸ್ತೀರ್ಣದ ತೋಟವನ್ನು ಪ್ರಸ್ತುತ ವರ್ಷ ವ್ಯಾಪಾರಿಗಳು…
Read More » -
ಬೆಲೆ ಏರಿಕೆ ಮೂಲಕ ಜನರ ಜೀವನವನ್ನು ದುಸ್ಥಿತಿಗೆ ತಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ”
ಹಾವೇರಿ : ಹಾವೇರಿಯಲ್ಲಿಂದು ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಲಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಂದೇ ಒಂದು ಹೊಸ ಯೋಜನೆ ಜಾರಿಗೆ ತರಲಿಲ್ಲ, ಒಂದೇ ಒಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿಲ್ಲ, ಶೋಷಿತರ ಹಣ ಅನ್ಯ ಕಾರ್ಯಗಳಿಗೆ ಬಳಸಿಕೊಂಡು, ಅಲ್ಪಸಂಖ್ಯಾತರ ಹೆಸರಿನಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ಕೇವಲ ಮುಸಲ್ಮಾನರಿಗೆ ಮಾತ್ರ ಮೀಸಲಾತಿ ಕಲ್ಪಿಸಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊಳಗಿದ ಜನಾಕ್ರೋಶ ಅಕ್ಷರಶಃ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದಂತಿತ್ತು. ಈ ಸಂದರ್ಭದಲ್ಲಿ ವಿಧಾನ ಪರಿಷತ್…
Read More » -
84 ವರ್ಷ ವಯಸ್ಸಿನ ವೃದ್ಧೆಯ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿ
ಹಾವೇರಿ: 84 ವರ್ಷ ವಯಸ್ಸಿನ ವೃದ್ಧೆಯ ಮೈಮೇಲಿನ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು 25 ವರ್ಷದ ಸಂತೋಷ ತುಳಜಪ್ಪ ಸಿಂಧೆ ಮತ್ತು 49 ವರ್ಷದ ದ್ಯಾಮಣ್ಣ ಪಾಂಡಪ್ಪ ನವರಸಣ್ಣನವರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಹಾವೇರಿ ಜಿಲ್ಲೆ ರಾಣೆಬೆನ್ನೂರ ಪಟ್ಟಣದವರು. ಇದೇ 6 ರಂದು ರಾಣೆಬೆನ್ನೂರಿನ 84 ರ್ಷದ ಸುಧಾಬಾಯಿ ಕುಲಕರ್ಣಿ ಎಂಬುವರು ದೇವಸ್ಥಾನದಿಂದ ಮನೆಗೆ ಬರುವಾಗ ಕೊರಳಲ್ಲಿರುವ ಚಿನ್ನದ ಸರಳ್ಳತನ ಮಾಡಿದ್ದರು. ಧಾಬಾಯಿ ಮೈಮೇಲಿದ್ದ ಸುಮಾರು 20 ಗ್ರಾಂ ಬಂಗಾರದ ಸರವನ್ನು ಆರೋಪಿಗಳು ಕಳ್ಳತನ ಮಾಡಿದ್ದರು.…
Read More » -
ಏಪ್ರಿಲ್‌ನೊಳಗೆ 3,000 ಲೈನ್‌ಮನ್‌ಗಳ ನೇಮಕ: ಸಚಿವ ಕೆ.ಜೆ.ಜಾರ್ಜ್
ಹಾವೇರಿ : ರಾಜ್ಯದಲ್ಲಿ ಖಾಲಿ ಇರುವ 3,000 ಸಾವಿರ ಲೈನ್‌ಮನ್ ಹುದ್ದೆಗಳ ನೇಮಕಾರತಿ ಪ್ರಕ್ರಿಯೆ ಏಪಿಲ್ ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ದೊಳಗೆ ಲೈನ್‌ಮನ್‌ಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಳಿಕ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಳೆದ ವರ್ಷತೀವ್ರ ಬರಗಾಲವಿದ್ದುದರಿಂದ ವಿದ್ಯುತ್ ಕೊರತೆಯಿದ್ದರೂ ಕೇವಲ ಒಂದು ತಿಂಗಳು ಮಾತ್ರ ಸಮಸ್ಯೆಯಾಗಿತ್ತು. ಉಳಿದ 11 ತಿಂಗಳಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗಿದೆ.…
Read More » -
ರೈತ ಸಂಪರ್ಕ ಕೇಂದ್ರಕ್ಕೆ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳ ಭೇಟಿ
ಹಾವೇರಿ: ನಗರದ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಕರ್ನಾಟಕ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಭೇಟಿ ನೀಡಿ, ರೈತರ ಯೋಜನೆಗಳ ಕುರಿತು ಅಧಿಕಾರಿ ಬಸನಗೌಡ ಪಾಟೀಲ್ ಇವರಿಂದ ಮಾಹಿತಿ ಪಡೆದುಕೊಂಡರು. ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ, ಬೇಸಿಗೆಯಲ್ಲಿ ರಿಯಾಯತಿದರದಲ್ಲಿ ಕೃಷಿ ಉತ್ಪನ್ನಗಳ ಉಪಕರಣ ನೀಡುವುದು, ಹನಿ ನೀರಾವರಿ ಉಪಕರಣ ಒದಗಿಸುವುದು, ಟ್ರ್ಯಾಕ್ಟರ್ ಉಪಕರಣ ವಿತರಣೆ, ರಸ ಗೊಬ್ಬರಗಳ ವಿತರಣೆ ಮಾಡಲಾಗುತ್ತದೆ ಎಂದು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ಈಗ ಸದ್ಯಕ್ಕೆ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ…
Read More » -
ಪಾರ್ವತಿದೇವಿ ರಥೋತ್ಸವದಲ್ಲಿ ಮಹಿಳೆಯರು ರಥ ಎಳೆಯುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸೈ.
ಹಾವೇರಿ: ಇಂದು ಮಹಿಳೆ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನ ಸಾಧನೆ ತೋರುತ್ತಿದ್ದಾಳೆ. ಪುರುಷರಿಗೇ ಮೀಸಲಾಗಿರುವ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಸೈ ಎನಿಸಿಕೊಂಡಿದ್ದಾರೆ. ಇದಕ್ಕೊಂದು ಹೊಸ ನಿದರ್ಶನ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಂತ್ರೋಡಿ ಕ್ಷೇತ್ರ.ಶತಮಾನದ ಹಿಂದೆ ಪುರುಷರಿಗೆ ನೀಡಿದಷ್ಟೇ ಪ್ರಾಧಾನ್ಯತೆಯನ್ನು ಮಹಿಳೆಯರಿಗೆ ಅಂದಿನ ರೇವಣಸಿದ್ದೇಶ್ವರ ಶ್ರೀಗಳು ನೀಡಿದ್ದಾರೆ. ಮಠದಲ್ಲಿ ಪ್ರತೀವರ್ಷ ಅಮವಾಸ್ಯೆ ದಿನ ಶಿವನ ರಥೋತ್ಸವ ನಡೆದರೆ ಮರುದಿನ ಪಾರ್ವತಿಯ ರಥೋತ್ಸವ ನಡೆಯುತ್ತದೆ. ಮೊದಲ ದಿನ ನಡೆಯುವ ರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವದಲ್ಲಿ ಪುರುಷರು ರಥ ಎಳೆದು ಸಂಭ್ರಮಿಸುತ್ತಾರೆ. ಮರುದಿನ ನಡೆಯುವ ಪಾರ್ವತಿದೇವಿ ರಥೋತ್ಸವದಲ್ಲಿ ಮಹಿಳೆಯರು…
Read More » -
ಸಾಲದಿಂದ ನೊಂದು ಕಿರಾಣಿ ಅಂಗಡಿಯ ಮಾಲೀಕ ಆತ್ಮಹತ್ಯೆ.
ಹಾವೇರಿ: ಸಾಲದಿಂದ ನೊಂದು ಕಿರಾಣಿ ಅಂಗಡಿಯ ಮಾಲೀಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 36 ವರ್ಷದ ನಾಗಪ್ಪ ಗುಂಜಾಳ ಎಂದು ಗುರುತಿಸಲಾಗಿದೆ. “ಕಿರಾಣಿ ಅಂಗಡಿ ನಡೆಸಲು ನಾಗಪ್ಪ ವಿವಿಧ ಪೈನಾನ್ಸ್ಗಳಿಂದ ಸುಮಾರು 15 ಲಕ್ಷ ಸಾಲ ಮಾಡಿಕೊಂಡಿದ್ದರು. ಮೈಕ್ರೋ ಫೈನಾನ್ಸ್ನವರು ಮನೆಯ ಮುಂದೆ ಹಾಗೂ ಅಂಗಡಿಯ ಮುಂದೆ ಬಂದು ನಿಂತು ಕಿರುಕುಳ ನೀಡುತ್ತಿದ್ದರು. ಅವರ ಕಿರುಕುಳ ತಾಳಲಾರದೇ ರಾತ್ರಿ ಮನೆಗೆ ಬಂದು ಊಟ ಮಾಡಿ ಹೋಗಿ ಬೇರೆ ಕಡೆ ಇರುತ್ತಿದ್ದರು. ಎರಡೂವರೆ ವರ್ಷದ…
Read More » -
ಮೈಕ್ರೋ ಫೈನಾನ್ಸ್ನಿಂದ ಮಾಂಗಲ್ಯಕ್ಕೆ ಕುತ್ತು ; ನನ್ನ ಮಾಂಗಲ್ಯ ಸರವನ್ನು ಉಳಿಸಿ ಎಂದ ಮಹಿಳೆ
ಹಾವೇರಿ: ರಾಜ್ಯದ ವಿವಿಧೆಡೆ ಮೈಕ್ರೋ ಫೈನಾನ್ಸ್ಗಳ ಸಾಲ ವಸೂಲಾತಿ ಕಾಟಕ್ಕೆ ಜನರು ಬೇಸತ್ತಿದ್ದು, ಕೆಲವು ಕಡೆ ಗ್ರಾಮವನ್ನೇ ತೊರೆದು ಬೇರೆಡೆ ದುಡಿಯಲು ಹೋಗಿದ್ದಾರೆ. ರಾಣೆಬೆನ್ನೂರಿನ ಮಹಿಳೆಯರು ಮೈಕ್ರೋ ಫೈನಾನ್ಸ್ ವಿರುದ್ಧ ವಿಭಿನ್ನ ರೀತಿಯ ಅಭಿಯಾನಕ್ಕೆ ಮುಂದಾಗಿದ್ದಾರೆ. ಹೌದು.. ಮೈಕ್ರೋ ಫೈನಾನ್ಸ್ನಿಂದ ತಮ್ಮ ಮಾಂಗಲ್ಯಕ್ಕೆ ಕುತ್ತು ಬಂದಿದ್ದು, ಮಾಂಗಲ್ಯ ಸರವನ್ನು ಉಳಿಸಿ ಎಂದು ಮಹಿಳೆಯರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಅಂಚೆ ಮೂಲಕ ಮಾಂಗಲ್ಯ ಮತ್ತು ಪತ್ರವನ್ನು ಸಿಎಂ ಸಿದ್ದರಾಮಯ್ಯರಿಗೆ ಪೋಸ್ಟ್ ಮಾಡಿ, ನಮ್ಮ ಮಾಂಗಲ್ಯವನ್ನು ಕಾಪಾಡುವಂತೆ ಮನವಿ…
Read More » -
ರಾಶಿ ಹಾವುಗಳನ್ನು ಕೊಂದು ಹಾಕಿ ಕಾನೂನು ಉಲಂಘನೆ.
ಹಾಸನ: ಜಿಲ್ಲೆಯ ಹೊಳೆನರಸೀಪುರದಲ್ಲಿ ಹಾವುಗಳ ಕಳೇಬರಗಳು ಸಿಕ್ಕಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಹೊಳೆನರಸೀಪುರ ಪಟ್ಟಣದ ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ ಹಾಸನ – ಮೈಸೂರು ಹೆದ್ದಾರಿಯ ದರ್ಜಿ ಬೀದಿ ಒಳ ಚರಂಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಹಾವುಗಳ ಕಳೇಬರಗಳು ಪತ್ತೆಯಾಗಿವೆ. ಹತ್ತಾರು ಹಾವುಗಳನ್ನು ಕೊಂದು ಅವುಗಳ ಚರ್ಮ ಹಾಗೂ ದೇಹದೊಳಗಿನ ನಿರುಪಯುಕ್ತ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಾತ್ರಿ ಚರಂಡಿಯಲ್ಲಿ ಎಸೆದು ಹೋಗಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಪುರಸಭೆಯ ತ್ಯಾಜ್ಯ ನಿರ್ವಹಣೆ ಮಾಡುವ ಸಿಬ್ಬಂದಿ ತ್ಯಾಜ್ಯವನ್ನು ಚರಂಡಿಯಿಂದ ಹೊರತೆಗೆಯುವ ವೇಳೆ ರಕ್ತಸಿಕ್ತ ಪ್ಲಾಸ್ಟಿಕ್ ಚೀಲ ಕಂಡು ಗಾಬರಿಯಾಗಿದ್ದಾರೆ.…
Read More »