ಖಾನಾಪುರ
ಕಸ ಗೂಡಿಸಿದ ಖಾನಾಪುರ ಎಂಎಲ್ಎ ಹಾಗೂ ಪ.ಪಂ ಅಧ್ಯಕ್ಷೆ.

ಖಾನಾಪೂರ: ಮಲಪ್ರಭಾ ನದಿ ದಂಡೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ಪಟ್ಟಣ ಪಂಚಾಯಿತಿ ಪ್ರತಿನಿಧಿಗಳೊಂದಿಗೆ ಸೇರಿ ಕಸ ಗೂಡಿಸಿ ಸ್ವಚ್ಛಗೊಳಿಸಿದರು.
ಮಲಪ್ರಭಾ ನದಿ ದಂಡೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿದ ತ್ಯಾಜ್ಯ ಹಾಗೂ ಪ್ರವಾಸಿಗರು ಬಿಸಾಡಿದ ನೀರಿನ ಬಾಟಲ್ ಸಹಿತ ರಾಶಿಯಾಗಿ ಬಿದ್ದಿದ್ದ ಕಸವನ್ನು ಶಾಸಕ ವಿಠ್ಠಲ ಹಲಗೆಕರ್ ಅವರು ತಮ್ಮ ಕೈಯಿಂದಲೇ ಬುಟ್ಟಿಗೆ ತುಂಬಿದರು. ಅದರಂತೆಯೇ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷೆ ಮೀನಾಕ್ಷಿ ಪ್ರಕಾಶ್ ಬೈಲೂರಕರ ಅವರು ಬುಟ್ಟಿಯಿಂದ ಕಸ ವಿಲೇವಾರಿ ಮಾಡಿದರು.
ಪಟ್ಟದ ಪಂಚಾಯಿತಿ ಉಪಾಧ್ಯಕ್ಷೆ ಜಯಾ ಭುತಕಿ ಸದಸ್ಯ ಅಪ್ಪಯ್ಯ ಕೊಡೊಳ್ಳಿ ಸೇರಿದಂತೆ ಇನ್ನಿತರ ಸದಸ್ಯರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಸ್ವಚ್ಛತಾ ಕಾರ್ಯದಲ್ಲಿ ಶಾಸಕರಿಗೆ ಸಾಥ್ ನೀಡಿದರು. ಶಾಸಕರ ಹಾಗೂ ಪಟ್ಟಣ ಪಂಚಾಯತಿಯ ಅಧ್ಯಕ್ಷರ ಹಾಗೂ ಸದಸ್ಯರ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.