ಹುಬ್ಬಳ್ಳಿ
-
ತಡ ರಾತ್ರಿ ಸುರಿದ ಬಾರಿ ಮಳೆ, ಜನ ಜೀವನ ಅಸ್ತವ್ಯಸ್ತ; ಸದಸ್ಯನ ಭಾವಚಿತ್ರ ಹಿಡದು ಆಕ್ರೋಶ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ಬುಧುವಾರ ತಡ ರಾತ್ರಿ ಸುರಿದ ಮಳೆಯಿಂದ ಜನಜೀವನ ಅಸ್ವಸ್ಥಗೊಂಡಿದ್ದು. ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಇಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ಪಾಲಿಕೆ ಸದಸ್ಯರ ಭಾವಚಿತ್ರ ಹಿಡದು ಪ್ರತಿಭಟನೆ ಮಾಡಿ ಮಹಿಳೆಯರು ಆಕ್ರೋಶ ಹೊರಹಾಕಿದರು. ಹೌದು ನಿನ್ನೆ ಸುರಿದ ಮಳೆ ಹುಬ್ಬಳ್ಳಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು. ಹುಬ್ಬಳ್ಳಿಯ ಅನೇಕ ನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹುಬ್ಬಳ್ಳಿ ಧಾರವಾಡ ಮಾಹ ನಗರ ಪಾಲಿಕೆ ಸದಸ್ಯ ಚೇತನ ಹಿರೇಕೇರೂರು ವಾರ್ಡನಲ್ಲಿ ಮನೆಗಳಿಗೆ ನೀರು ನುಗ್ಗಿ ಇಡೀ…
Read More » -
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಬಡೆದಾಡುತ್ತಿದ್ದಾರೆ : ವಿ ಸೋಮಣ್ಣ…! ಫಾರ್ಮ್ಯಾಟ್: ಎವಿಬಿ
ದೇಶದಲ್ಲಿ ಕಾಂಗ್ರೆಸ್ ನಾಯಕರು ನಿಸ್ಸಾಹಕರಾಗಿ ಉಡಾಫೆ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಬಡೆದಾಡುತ್ತಿದ್ದಾರೆ. ನಮ್ಮೊಂದಿಗಿದ್ದ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನರೇದ್ರ ಮೋದಿ ಅವರು ಪ್ರಧಾನಿಯಾದ ನಂತರ ಅಮೂಲಾಗ್ರ ಬದಲಾವಣೆ ಆಗಿದೆ. ಇದನ್ನು ಒಳ್ಳೆಯ ಕಣ್ಣಿನಿಂದ ನೋಡುವ ಕೆಲಸ ಕಾಂಗ್ರೆಸ್ ನವರಿಂದ ಆಗುತ್ತಿಲ್ಲ. ಹೀಗಾಗಿ ರಾಜಕೀಯವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎತ್ತು ಕೋಣದ ಪರಿಸ್ಥಿತಿಯಾಗಿದೆ ಎಂದು ಲೇವಡಿ ಮಾಡಿದರು. ಹುಬ್ಬಳ್ಳಿ- ಅಂಕೋಲ…
Read More » -
ಧಾರವಾಡದ ಶಿಕ್ಷಕರ ಮನೆಗೆ ಕನ್ನ…. 70 ಗ್ರಾಂ ಚಿನ್ನಾಭರಣ, ನಗದು ಲೂಟಿ
ಧಾರವಾಡ: ರಜೆ ಮೇಲೆ ಬೇರೆ ಊರಿಗೆ ತೆರಳಿದ್ದ ಇಬ್ಬರು ಶಿಕ್ಷಕರ ಮನೆಗಳಿಗೆ ಕನ್ನ ಹಾಕಿದ ಚಾಲಾಕಿ ಖದೀಮ ಕಳ್ಳರು, ಮನೆಯಲ್ಲಿದ್ದ ಚಿನ್ನ ಹಾಗೂ ನಗದು ದೋಚಿಕೊಂಡು ಪರಾರಿಯಾದ ಘಟನೆ ಧಾರವಾಡದ ಕ್ಯಾರಕೊಪ್ಪ ಗ್ರಾಮದ ಬಳಿ ನಡೆದಿದೆ. ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಲೋಕನಾಥ್ ಮತ್ತು ಸೋಮನಗೌಡ ಪಾಟೀಲ್ ಎನ್ನುವವರ ಮನೆಯಲ್ಲೇ ಕಳ್ಳತನವಾಗಿದೆ. ಇಬ್ಬರು ವೃತಿಯಲ್ಲಿ ಶಿಕ್ಷಕರಾಗಿದ್ದು, ಕಳೆದ ಎರಡು ದಿನಗಳ ಹಿಂದೆ ರಜೆ ಇರುವ ಕಾರಣ ಊರಿಗೆ ಹೋಗಿದ್ದರು. ಈ ವೇಳೆ ಶಿಕ್ಷಕರ ಮನೆಯಲ್ಲಿದ್ದ 70 ಗ್ರಾಂ ಚಿನ್ನ ಸೇರಿ 1.20 ಲಕ್ಷ…
Read More » -
ಧಾರವಾಡದಲ್ಲಿ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
ಧಾರವಾಡದಲ್ಲಿ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ನಗರದ ಧಾರವಾಡ ಉದಯ ಹಾಸ್ಟೆಲ್ ಬಳಿ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ 2023-24ನೇ ಸಾಲಿನ ಠೇವಣಿ ವಂತಿಗೆ ಅಡಿಯಲ್ಲಿ ದೀನ್ ದಯಾಳ ಉಪಾಧ್ಯಾಯ ಅವರ ಹೆಸರಿನಡಿ ಸೌಹಾರ್ಧ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಈ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ವಿಶಾಲವಾದ ಪ್ರದೇಶದಲ್ಲಿ ಒಟ್ಟು ಆರು ಬ್ಲಾಕ್ ಅಡಿ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಒಟ್ಟು 1 ಸಾವಿರ ವಿದ್ಯಾರ್ಥಿಗಳು ವಸತಿ ಮಾಡಬಹುದಾದ ವಸತಿ ನಿಲಯಗಳು…
Read More » -
.ನಿವೃತ್ತಿ ಕಾರ್ಯಕ್ರಮದ ಅಂತಿಮ ಸಿದ್ಧತೆಯಲ್ಲಿದ್ದ ಮುಖ್ಯ ಇಂಜಿನಿಯರ ಮನೆಯ ಮೇಲೆ ದಾಳಿ.
ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ಇಂದು ಧಾರವಾಡ ಪಿಡಬ್ಲುಡಿಯ ಮುಖ್ಯ ಇಂಜಿನಿಯರ್ ಎಚ್ ಸುರೇಶರವರು ತಮ್ಮ ನಿವೃತ್ತಿ ಕಾರ್ಯಕ್ರಮದ ಸಂಭ್ರಮದಲ್ಲಿ ಬ್ಯೂಸಿಯಾಗಬೇಕಿತ್ತು. ಆದರೆ ಆ ಸಂಭ್ರಮಕ್ಕೆ ಲೋಕಾಯುಕ್ತರು ದಾಳಿ ನಡೆಸುವ ಮೂಲಕ ಶಾಕ್ ನೀಡಿ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಹೌದು ಧಾರವಾಡ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಎಚ್ ಸುರೇಶ ಅವರು ಇಂದು ತಮ್ಮ ವೃತಿಯ ಕೊನೆಯದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ನಗರದ ಮಗದುಮ್ಮ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಇಂದು ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಧಾರವಾಡ ಹಾಗೂ ಬೆಳಗಾವಿ ನಿವಾಸದ ಮೇಲೆ…
Read More » -
ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು
ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು ಧಾರವಾಡ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ. ಕಾರಿನಲ್ಲಿದ್ದ ಮದನ್, ಸುರೇಶ್ ಮತ್ತು ಎಲ್.ಎನ್.ವೇಣುಗೋಪಾಲ್ ಎಂಬವರು ಮೃತಪಟ್ಟಿದ್ದಾರೆ. ತೋಟ ನೋಡಿಕೊಂಡು ಮುಂಡರಗಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಮೃತರು ಮೈಸೂರು ಹಾಗೂ ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಅಣ್ಣಿಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕ್ಟರ್ಗೆ ಡಿಕ್ಕಿ, ಬೈಕ್ನಲ್ಲಿದ್ದ ಇಬ್ಬರು ಸಾವು: ಬಳ್ಳಾರಿ ನಗರದ…
Read More » -
ಮಲತ್ಯಾಜ್ಯ ಸಂಸ್ಕರಣಾ ಘಟಕದಿಂದ ರೋಗ ದೂರ : ಶಾಸಕ ಪಾಟೀಲ
ಕುಂದಗೋಳ (ಧಾರವಾಡ ಜಿಲ್ಲೆ) ಪ.ಪಂ ಘನತ್ಯಾಜ್ಯ ಕಸ ವಿಲೇವಾರಿ ಘಟಕದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಶಾಸಕ ಎಂ.ಆರ್.ಪಾಟೀಲ ಚಾಲನೆ ಎನ್. ಜಿ. ಟಿ ಮತ್ತು ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 159 ಲಕ್ಷ ರೂ. ಅನುದಾನ ಕಾಮಗಾರಿ ಆರಂಭ ಪ. ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅನೇಕ ಸದಸ್ಯರು ಮತ್ತು ಸಿಬ್ಬಂದಿ ಸೇರಿದಂತೆ ಪಟ್ಟಣದ ಅನೇಕ ಮುಖಂಡರು ಭಾಗಿ ಕುಂದಗೋಳ (ಧಾರವಾಡ ಜಿಲ್ಲೆ) : ಎನ್. ಜಿ. ಟಿ ಮತ್ತು ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 159 ಲಕ್ಷ ರೂ. ಅನುದಾನದಲ್ಲಿ ಪ.ಪಂ…
Read More » -
ಧಾರವಾಡದಲ್ಲಿ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ ನೀಡಿದ ಸಚಿವ ಲಾಡ್
ಧಾರವಾಡದಲ್ಲಿ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ ನೀಡಿದ ಸಚಿವ ಲಾಡ್… ಉಸ್ತುವಾರಿ ಸಚಿವ ಲಾಡ್, ವಿರೋಧ ಪಕ್ಷದ ಉಪನಾಯಕ ಬೆಲ್ಲದ, ನವಲಗುಂದ ಎಂಎಲ್ಎ ಕೊನರೆಡ್ಡಿ ಭಾಗಿ.. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಒದಗಿಸುವ ಸಂಬಂಧ ಉಚಿತ ಆರೋಗ್ಯ ತಪಾಸಣೆ ಸಂಚಾರಿ ಆರೋಗ್ಯ ವಾಹನಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಮಂಗಳವಾರದಂದು ಚಾಲನೆ ನೀಡಿದರು. ಕಾರ್ಮಿಕ ಇಲಾಖೆಯಿಂದಲೇ ಈ ವಾಹನಗಳನ್ನು ನೀಡಲಾಗಿದೆ. ಧಾರವಾಡ ಜಿಲ್ಲೆಗೆ ಒಟ್ಟು ಮೂರು ವಾಹನಗಳು ಮಂಜೂರಾಗಿವೆ. ಈ ವಾಹನಗಳಲ್ಲಿ ಒಟ್ಟು…
Read More » -
ಧಾರವಾಡದ ನವಲೂರು ಬಳಿ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆ ಮೇಲೆ ಸರಣಿ ಅಪಘಾತ, ತಪ್ಪಿದ ಅನಾಹುತ…… ಎರಡು ಕಾರ್‌ಗಳ ಮುಂಭಾಗ ಜಖಂ.
ಧಾರವಾಡದ ನವಲೂರು ಬಳಿ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆ ಮೇಲೆ ಸರಣಿ ಅಪಘಾತ, ತಪ್ಪಿದ ಅನಾಹುತ…… ಎರಡು ಕಾರ್‌ಗಳ ಮುಂಭಾಗ ಜಖಂ. ಮುಂದೆ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿಕೊಂಡು ಹೊರಟ್ಟಿದವನ ತಪ್ಪಿಸಲು ಹೋಗಿ ಗೂಡ್ಸ್ ವಾಹನ ಚಾಲಕ ಏಕಾಎಕಿ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ನಡೆದ ಘಟನೆ ಧಾರವಾಡದ ನವಲೂರು ಬಳಿಯ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆಯ ಮೇಲೆ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದ ಹೆಚ್ ಡಿ ಬಿಆರ್‌ಟಿಎಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಗೂಡ್ಸ್ ವಾಹನ ಹಾಗೂ ಎರಡು ಕಾರಗಳು ಧಾರವಾಡದಿಂದ…
Read More » -
ಸ್ಕೂಟಿಯಲ್ಲಿ ಕೊಡೆ ಹಿಡಿದು ಹೋಗುತ್ತಿದ್ದ ವೇಳೆ ಸ್ಕೂಟಿ ಲಾರಿಗೆ ಡಿಕ್ಕಿ; ಬೈಕ ಸವಾರ ಸಾವು
ಮಳೆ ಹನಿಗಳಿಂದ ರಕ್ಷಣೆಗೆಂದು ಕೊಡೆ ಹಿಡಿದುಕೊಂಡು ಸ್ಕೂಟಿ ವಾಹನ ಚಲಾಯಿಸುತ್ತಿದ್ದಾಗ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಸಾವನಪ್ಪಿ ಮತ್ತೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನರೇಂದ್ರ ಕ್ರಾಸ್ ಸಮೀಪ ಬುಧುವಾರ ತಡ ಸಂಜೆ ನಡೆದಿದೆ. ಧಾರವಾಡ ನಗರದ ಮುರುಘಾಮಠ ಬಳಿಯ ನಿವಾಸಿ ವಿಶ್ವಾಸ ಕೇಟಿಮಠ (21) ಸಾವನ್ನಪ್ಪಿದ ಯುವಕ. ವಿನಾಯಕ ಬಡಿಗೇರ (19) ಎಂಬಾತ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನೂ ಈ ಇಬ್ಬರೂ ಯುವಕರು ವಾಪಸ್ ಧಾರವಾಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆ…
Read More »