Uncategorized
-
ಕುಡಿಯುವ ನೀರಿನ ಘಟಕವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಶುಕ್ರವಾರದಂದು ಉದ್ಘಾಟಿಸಿದರು.
ಘಟಪ್ರಭಾ:ಗೋಕಾಕ ಮತಕ್ಷೇತ್ರದ ಶಾಸಕರು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಮೇಶಅಣ್ಣಾ ಜಾರಕಿಹೊಳಿರವರ ಆಪ್ತ ಸಹಾಯಕರಾದ ಶ್ರೀ ಸುರೇಶ ಸನದಿ ಅವರು ಘಟಪ್ರಭಾ ಪಟ್ಟಣಕ್ಕೆ ಆಗಮಿಸಿ ಪುರಸಭೆಯ ಮಲ್ಲಾಪೂರ ಪಿಜಿ ತರಕಾರಿ ಮಾರುಕಟ್ಟೆಯಲ್ಲಿ ನೂತನ ನಿರ್ಮಾಣ ಗೊಂಡ ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಶುಕ್ರವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಎಮ್ ಎಸ್ ಪಾಟೀಲ,ಹಿರಿಯ ಮುಖಂಡರಾದ ಡಿ ಎಮ್ ದಳವಾಯಿ,ಸುದೀರ ಜೋಡಟ್ಟಿ,ರಮೇಶ ತುಕ್ಕಾನಟ್ಟಿ,ಕಲ್ಲಪ್ಪ ಕೊಂಕಣಿ,ಕೆಂಪಣ್ಣ ಕಾಡದವರ,ಲಗಮಣ್ಣ ನಾಗನ್ನವರ,ಕೆಂಪಣ್ಣ ಚೌಕಶಿ,ಕುಮಾರ ಹುಕ್ಕೇರಿ,ಮಾಜಿ ಪ ಪಂ ಸರ್ವ ಸದಸ್ಯರು,ಪುರಸಭೆ ಸರ್ವ ಸಿಬ್ಬಂದಿ…
Read More » -
ನಗು ಮುಖದ ನಾಯಕನಾಗಿ ಜನಮನ ಗೆದ್ದ ನಾಯಕ
ನಗು ಮುಖದ ನಾಯಕನಾಗಿ ಜನಮನ ಗೆದ್ದ ನಾಯಕ ಜನರೊಂದಿಗೆ ಸದಾ ನಗುನಗುತ್ತಾ ಮಾತನಾಡುವ, ಸೌಮ್ಯ ಸ್ವಭಾವ ಹಾಗೂ ಸರಳ ಜೀವನಶೈಲಿಯಿಂದ ಗುರುತಿಸಿಕೊಂಡಿರುವ ನಗು ಮುಖದ ನಾಯಕರು ಇಂದು ಜನಮೆಚ್ಚುಗೆ ಪಡೆದಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಜನ ಸಂಪರ್ಕದ ವೇಳೆಯಲ್ಲಿ ನಗುವಿನೊಂದಿಗೆ ಮಾತನಾಡುವ ಅವರ ಶೈಲಿ ಜನರಿಗೆ ಆತ್ಮೀಯತೆಯ ಅನುಭವ ನೀಡುತ್ತಿದೆ. ಕಠಿಣ ಸಂದರ್ಭಗಳಲ್ಲಿಯೂ ಸಹ ಧೈರ್ಯ ಕಳೆದುಕೊಳ್ಳದೆ, ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸುವ ಗುಣವೇ ಅವರ ನಾಯಕತ್ವದ ಶಕ್ತಿಯಾಗಿದೆ. ಜನರ ನೋವು-ನಲಿವಿಗೆ ಸ್ಪಂದಿಸುವ ಮನೋಭಾವ, ನೇರ ಮಾತು ಹಾಗೂ ಸರಳ ವರ್ತನೆಯಿಂದ ಅವರು ಎಲ್ಲ…
Read More » -
ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲಿಸುವೆ: ಶಾಸಕ ಜನಾರ್ದನ ರೆಡ್ಡಿ
ಬಳ್ಳಾರಿ: ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲಿಸುವೆ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದ್ದಾರೆ. ಈಗಾಗಲೇ ಬ್ರೂಸ್‌ಪೇಟೆ ಠಾಣೆಯಲ್ಲಿ ಶಾಸಕ ಭರತ್ ರೆಡ್ಡಿ, ಅವರ ಅಪ್ತ ಸತೀಶ್ ರೆಡ್ಡಿ, ಎಎಸ್ಪಿ ಕೆ.ಪಿ.ರವಿಕುಮಾರ್, ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ವಿರುದ್ಧ ದೂರು ನೀಡಿದ್ದು ಈವರೆಗೂ ಪ್ರಕರಣ ದಾಖಲಿಸಿಲ್ಲ. ಜಿಲ್ಲೆಗೆ ಹೊಸದಾಗಿ ಐಜಿಪಿ, ಎಸ್ಪಿ ಖಡಕ್ ಅಧಿಕಾರಿಗಳು ನೇಮಕಗೊಂಡಿದ್ದು ಯಾವ ರೀತಿಯಲ್ಲಿ ತನಿಖೆ ಮಾಡಲಿದ್ದಾರೆ ಎಂಬುದಾಗಿ ಕಾದು ನೋಡುವೆ ಎಂದು ಶಾಸಕ ರೆಡ್ಡಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಪಿ ಸರ್ಕಲ್‌ನಲ್ಲಿ ಶಾಸಕ ಭರತ ರೆಡ್ಡಿಯನ್ನು…
Read More » -
ಯೊಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು ನೀಡದಂತೆ ಸಿಬಿಐ ವಾದ
ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರು ಈ ಹಿಂದೆ ಜಾಮೀನು ಪಡೆಯುವ ವೇಳೆ, ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳಿಗೆ ಬದ್ದವಾಗಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟು, ಬಳಿಕ ಉಲ್ಲಂಘಿಸಿದ್ದಾರೆ. ಹೀಗಾಗಿ ಮತ್ತೆ ಜಾಮೀನು ನೀಡಬಾರದು ಎಂದು ಕೇಂದ್ರ ತನಿಖಾ ದಳ (ಸಿಬಿಐ) ಹೈಕೋರ್ಟ್ಗೆ ಕೋರಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುನೀಲ್ ದತ್ ಯಾದವ್ ಪೀಠ: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಜಾಮೀನು ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್…
Read More » -
ಬಂಜಾರಾ ಸಮಾಜದಿಂದ ಬೆಳಗಾವಿ ಮಹಾಪೌರರಿಗೆ ಮನವಿ
ಬಂಜಾರಾ ಸಮಾಜದಿಂದ ಬೆಳಗಾವಿ ಮಹಾಪೌರರಿಗೆ ಮನವಿ ಬೆಳಗಾವಿ ನಗರದ ಸಂಗಮೇಶ್ವರ ನಗರದಲ್ಲಿರುವ ಮಹಾನಗರ ಪಾಲಿಕೆಯ 14 ಗುಂಟೆ ಜಾಗವನ್ನು ಬಂಜಾರಾ ಸಮುದಾಯದ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕೆಂದು ಸಮಾಜದ ಮುಖಂಡರು ಬೆಳಗಾವಿ ಮಹಾಪೌರ ಮಂಗೇಶ್ ಪವಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬೆಳಗಾವಿ ಉತ್ತರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 25 ರಿಂದ 30 ಸಾವಿರದಷ್ಟು ಬಂಜಾರಾ ಸಮುದಾಯದ ಜನಸಂಖ್ಯೆ ಇದ್ದು, ಕಳೆದ ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಇದೇ ಜಾಗದಲ್ಲಿ ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ 3 ಕೋಟಿ ರೂ. ಅನುದಾನದಲ್ಲಿ…
Read More » -
ಕೃಷ್ಣಾ ನದಿ ಬತ್ತಿ ಹೋಗುವ ಭೀತಿ, ರೈತರಲ್ಲಿ ಆತಂಕ • ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ಆತಂಕ
ಹಿಪ್ಪರಗಿ ಬ್ಯಾರೇಜ್ ಮೂಲಕ ಹರಿದು ಹೋದ ಕೃಷ್ಣೆಯ 10 ಅಡಿ ನೀರು!!! ಕೃಷ್ಣಾ ನದಿ ಬತ್ತಿ ಹೋಗುವ ಭೀತಿ, ರೈತರಲ್ಲಿ ಆತಂಕ • ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ಆತಂಕ • ಸಮುದ್ರ ಪಾಲಾದ 10 ಅಡಿ ಕೃಷ್ಣಾ ನೀರು • ಬತ್ತಿ ಹೋಗುವ ಭೀತಿಯಲ್ಲಿ ಕೃಷ್ಣಾ ನದಿ • ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು, ಮೀನುಗಾರರ ಆಕ್ರೋಶ ಕಾಗವಾಡ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ಕಳೆದ ಜನವರಿ 6ರಂದು ಮುರಿದು ಬಿದ್ದ ಪರಿಣಾಮ, ಕೇವಲ 48 ಗಂಟೆಗಳಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ…
Read More » -
ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ; ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು;
ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ; ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು; ಎಸ್ಪಿ ರಾಮರಾಜನ್ ಕೆ. ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ ಮೃತರ ಸಂಖ್ಯೆ 7ಕ್ಕೆ ಏರಿಕೆ ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು ಎಸ್ಪಿ ರಾಮರಾಜನ್ ಕೆ. ಮಾಧ್ಯಮಗೋಷ್ಟಿ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭೀಕರ ಅವಘಡದಲ್ಲಿ ಬಲಿಯಾದ ಕಾರ್ಮಿಕರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಬುಧವಾರ ಮಧ್ಯಾಹ್ನ ಸಂಭವಿಸಿದ ಈ ಘಟನೆಯಲ್ಲಿ ನಿನ್ನೆ ಮೂವರು ಸಾವನ್ನಪ್ಪಿದ್ದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮತ್ತೆ…
Read More » -
ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಳವಳ
ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಳವಳ ಮಕ್ಕಳ ಆನ್ ಲೈನ್ ಸುರಕ್ಷತೆ ಕುರಿತು ಅಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿದ ಸಚಿವರು ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಗ್ಗೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಸೂಕ್ತವಾಗಿ ಅರಿವು ಮೂಡಿಸಬೇಕು. ಆಗಷ್ಟೇ ಮಕ್ಕಳಿಗೆ ಆನ್‌ಲೈನ್ ಸುರಕ್ಷತೆ ಸೂಕ್ತವಾಗಿ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಚೈಲ್ಡ್ ಫಂಡ್…
Read More » -
ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪಿಲ್ಲ ಎಂದು ಚಾಕು ಇರಿದು ಕೊ*ಂದ ಆರೋಪಿ ಆತ್ಮಹತ್ಯೆ
ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪಿಲ್ಲ ಎಂದು ಚಾಕು ಇರಿದು ಕೊ*ಂದ ಆರೋಪಿ ಆತ್ಮಹತ್ಯೆ ವಿಚ್ಛೇದಿತ ಹಿಂದೂ ಮಹಿಳೆಯ ಹಿಂದೆ ಬಿದ್ದು ಮದುವೆಯಾಗುವಂತೆ ಪೀಡಿಸುತ್ತಿದ್ದ ಮುಸ್ಲಿಂ ಯುವಕ ಆಕೆ ಮದುವೆಗೆ ಒಪ್ಪಿಲ್ಲ ಎಂದು ಚಾಕು ಇರಿದು ಕೊಲೆಗೈದು ಪರಾರಿಯಾಗಿದ್ದ. ಈಗ ಆರೋಪಿ ಯುವಕ ಆತ್ಮ*ಹ*ತ್ಯೆಗೆ ಶರಣಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಯಲ್ಲಾಪುರ ನಿವಾಸಿ ರಂಜಿತಾ (30) ಕೊ*ಲೆಯಾದ ಮಹಿಳೆ. ಮುಸ್ಲಿಂ ಯುವಕ ರಫೀಕ್ ಮಹಿಳೆ ಮದುವೆಗೆ ಒಪ್ಪಿಲ ಎಂದು ಚಾಕುವಿನಿಂದ ಇರಿದು ನಡುರಸ್ತೆಯಲ್ಲಿಯೇ ನಿನ್ನೆ ಕೊಲೆ*ಗೈದು ಪರಾರಿಯಾಗಿದ್ದ. ಕೊಲೆ ಬಳಿಕ…
Read More » -
ಮುಸ್ಲಿಂ ಯುವಕನಿಂದ ಮಹಿಳೆ ಮರ್ಡರ್: ಮಹಿಳೆ ಕುಟುಂಬಕ್ಕೆ ಪರಿಹಾರ ಘೋಷಿಸಿದ ವಿಜಯೇಂದ್ರ
ಮುಸ್ಲಿಂ ಯುವಕನಿಂದ ಮಹಿಳೆ ಮರ್ಡರ್: ಮಹಿಳೆ ಕುಟುಂಬಕ್ಕೆ ಪರಿಹಾರ ಘೋಷಿಸಿದ ವಿಜಯೇಂದ್ರ ವಿಚ್ಛೇದಿತ ಮಹಿಳೆಯನ್ನು ಟಾರ್ಚರ್ ನೀಡಿ, ಮದುವೆಗೆ ಒಪ್ಪದ್ದಕ್ಕೆ ಚಾಕು ಇರಿದು ಅನ್ಯ ಕೋಮಿನ ಯುವಕ ಮರ್ಡರ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆಯಾದ ಮಹಿಳೆಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದಾರೆ. ರಫೀಕ್ ಎಂಬಾತನಿಂದ ಬರ್ಬರವಾಗಿ ಹತ್ಯೆಗೀಡಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಳಮ್ಮನಗರದಲ್ಲಿರುವ ರಂಜಿತಾ ಅವರ ನಿವಾಸಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತ ರಂಜಿತಾ ಅವರ ಕುಟುಂಬಕ್ಕೆ ಬಿಜೆಪಿಯಿಂದ 5 ಲಕ್ಷ…
Read More »