ಬಾಗಲಕೋಟೆ
ಸರ್ವ ಧರ್ಮಗಳಲ್ಲಿರಬೇಕು ಶಾಂತಿ-ಸಹಿಷ್ಣುತೆ…ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ.

ಬಾಗಲಕೋಟೆ : ರಮಜಾನ್ ಇದು ಇಸ್ಲಾಂ ಬಾಂಧವರ ಜಪ-ತಪ ಮತ್ತು ಅನುಷ್ಠಾನವನ್ನು ಕೈಗೊಳ್ಳುವ ಹಬ್ಬವಾಗಿದೆ ಎಂದು ಕಮತಗಿ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿಗಳು ಹೇಳಿದರು.
ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತರ್ ಹಿನ್ನೆಲೆ ಸಾಮೂಹಿಕ ನಮಾಜ್ ಅದಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮೀಜಿಗಳು ಮಾತನಾಡಿದರು.
ರಮಜಾನ್ ಇಂದು ಇಸ್ಲಾಂ ಬಾಂಧವರ ಪವಿತ್ರ ಹಬ್ಬವಾಗಿದೆ. ಒಂದು ತಿಂಗಳ ಕಾಲ ಉಪವಾಸ ಕೈಗೊಂಡು, ಚಂದ್ರ ದರ್ಶನ ಬಳಿಕ ರಮಜಾನ್ ಅರ್ಥಾತ್ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ರಮಜಾನ್ ಹಬ್ಬ ಜಪ-ತಪ ಮತ್ತು ಅನುಷ್ಠಾನವನ್ನು ಕೈಗೊಳ್ಳುವ ಹಬ್ಬವಾಗಿದೆ. ಸರ್ವ ಧರ್ಮಗಳಲ್ಲಿಯೂ ಶಾಂತಿ ಸಹಿಷ್ಣುತೆ ಇರಬೇಕೆಂದರು.