ಬೆಳಗಾವಿರಾಜಕೀಯರಾಜ್ಯ

ಅಥಣಿ: ಶಿವಾನಂದ, ಭಾರತಿ ಅವಿರೋಧ ಆಯ್ಕೆ

ಥಣಿ: ತಾಲ್ಲೂಕಿನ ಹೊಸಟ್ಟಿಯ ಸಿದ್ಧೇಶ್ವರ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಶಿವಾನಂದ ನಾಯಿಕ ಮತ್ತು ಉಪಾಧ್ಯಕ್ಷೆಯಾಗಿ ಭಾರತಿ ಹಲ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ಪ್ರಸಕ್ತ ವರ್ಷ 30 ಸಹಕಾರ ಸಂಘಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಗಳಲ್ಲಿ ಎಲ್ಲ ಸಹಕಾರ ಸಂಘಗಳಲ್ಲಿ ನಮ್ಮ ಬೆಂಬಲಿಗರೇ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು .

 

ನೂತನ ಅದ್ಯಕ್ಷ ಶಿವಾನಂದ ನಾಯಿಕ ಮಾತನಾಡಿ, ‘ಶಾಸಕ ಲಕ್ಷ್ಮಣ ಸವದಿಯವರ ಮಾರ್ಗದರ್ಶನದಲ್ಲಿ ಸೊಸೈಟಿ ಮುನ್ನಡೆಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಪಾರದರ್ಶಕ ಆಡಳಿತ ನೀಡಿತ್ತೇವೆ’ ಎಂದು ಹೇಳಿದರು .

ಗ್ರಾಮದಲ್ಲಿ ಪಟಾಕಿ ಸಿಡಿಸಿ, ಗುಲಾಲ ಎರಚಿ ವಿಜಯೋತ್ಸವ ಆಚರಿಸಲಾಯಿತು. ಚುನಾವಣಾದಿಕಾರಿಯಾಗಿ ಆಶಾ ಬಿರಾದರ ಕಾರ್ಯ ನಿರ್ವಹಿಸಿದರು.

ಮುಖಂಡ ಶ್ರೀಶೈಲ ನಾಯಿಕ, ಹಣಮಂತ ನಾಯಿಕ, ಚಂದು ಪವಾರ, ಅಣ್ಣಪ್ಪಾ ನಾಯಿಕ, ರಾವಸಾಹೇಬ ನಾಯಿಕ, ರಾಜು ಹಣಮಾಪುರೆ, ನಿಂಗಪ್ಪ ಹಣಮಾಪುರೆ, ಕೃಷ್ಣಾ ಸರಗರ, ಪಾಂಡು ಹಲ್ಯಾಳ, ನೂರಾರು ಜನ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button