
ಕಾಂಗ್ರೆಸ್ 2 ವರ್ಷ ಸಾಧನಾ ಸಮಾವೇಶ ನಂತರ ಸಿಎಂ ಕುರ್ಚಿ ಗಟ್ಟಿಯಾಗಿರಲ್ಲಾ. ಕುರ್ಚಿ ಅಲ್ಲಾಡು ಸಂದರ್ಭದಲ್ಲಿ ಈ ರೀತಿ ಸಮಾವೇಶ ಮಾಡ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾಷಣ ಸುಳ್ಳುಗಳಿಂದ ಕೂಡಿತ್ತು. ಸಾಧನಾ ಸಮಾವೇಶ ಹಳೆ ರೇಡಿಯೋದಂತೆ ಅದೇ ಗಾನಾ ಬಜಾನಾ ಮಾಡಿದ್ದಾರೆ ಎಂದರು. ನಾಡಿನ ಜನರ ಸಂಕಷ್ಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡ್ತಿಲ್ಲಾ. ಏನು ಕಡಿದು ಹಾಕಿದ್ದಾರೆ ಅಂತ ಸಾಧನಾ ಸಮಾವೇಶ ಮಾಡಿದ್ದಾರೆ? ಜಾಹಿರಾತು ಮೂಲಕ ಜಾತ್ರೆ ಮಾಡಿದ್ದಾರೆ ಎಂದು ಆರೋಪಿಸಿದರು.
ಶಾಲೆ ಕೊಠಡಿ ನಿರ್ಮಾಣಕ್ಕೆ ಕೂಡಾ ಅನುಧಾನ ಕೊಡ್ತಿಲ್ಲಾ. ಬೆಂಗಳೂರು ಮುಳುಗಿ ಹೋಗ್ತಿದೆ ಬೆಂಗಳೂರಲ್ಲಿ ಜನ ಸಾಯ್ತಿದ್ದಾರೆ. ಯಾವ ಮಂತ್ರಿ ಕೂಡಾ ಅತ್ತಕಡೆ ಗಮನ ಹರಿಸುತ್ತಿಲ್ಲಾ. ವಸೂಲಿ ಮಾಡೋದರಲ್ಲಿ ಈ ಸರ್ಕಾರ ನಿಪುಣವಾಗಿದೆ. ರಾಹುಲ್ ಗಾಂಧಿ ಹೇಳಿದ್ದನ್ನು ನಾವು ಕಿವಿಯಲ್ಲಿ ಹೂವಿಟ್ಟು ಕೇಳಬೇಕಾಗಿದೆ.
ವಾಲ್ಮೀಕಿ ನಿಗಮದ ಹಗರಣದ ಹಣ ಇನ್ನು ತುಂಬಿಲ್ಲ. ಇದೀಗ ಹಗರಣ ಹಣ ಕಟ್ಟಿಸು. ನಿನಗೆ ಮತ್ತೆ ಮಂತ್ರಿ ಮಾಡ್ತೇವೆ ಅಂತ ನಾಗೇಂದ್ರಗೆ ಸಿಎಂ ಹೇಳಿದ್ದಾರಂತೆ.
ಗೃಹಲಕ್ಷ್ಮಿ ಹಣ ಸರಿಯಾದ ಸಮಯಕ್ಕೆ ಕೊಡ್ತಿಲ್ಲಾ. ಜಿಲ್ಲಾ ಪಂಚಾಯತ ಚುನಾವಣೆ ಬಂದರೆ ಹಾಕಬೇಕು ಅಂತ ಕಾಯ್ತಿದ್ದಾರೆ. ಆ ಹಣ ಬರಬೇಕಾದರೆ ಚುನಾವಣೆ ಬರೋವರಗೆ ಕಾಯಬೇಕಾಗಿದೆ.
ಪೆಹಲ್ಗಾಂವ್ ದಾಳಿಯಲ್ಲಿ ಮಹಿಳೆಯರ ಸಿಂಧೂರ ಅಳಿಸೋ ಕೆಲಸ ಮಾಡಿದ್ದರು. ಮಹಿಳೆಯರಿಂದಲೇ ಅವರಿಗೆ ಉತ್ತರ ಕೊಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಣ್ಣ ಮಕ್ಕಳ ರೀತಿ ಮಾತನಾಡ್ತಿದ್ದಾರೆ. ಅಂತಹ ದೊಡ್ಡ ವ್ಯಕ್ತಿ ಸುಳ್ಳುಗಳನ್ನು ಹೇಳಬಾರದು. ಪೆಹಲ್ಗಾಂವ್ ದಾಳಿ ಬಗ್ಗೆ ಪ್ರಧಾನಿಗೆ ಮೊದಲೇ ಗೊತ್ತಿತ್ತು ಅಂತ ಹೇಳ್ತಾರೆ ಎಂದರು.
ಗಂಗಾವತಿ ಉಪ ಚುನಾವಣೆ ವಿಚಾರ
ಶಾಸಕ ಜನಾರ್ದನ ರೆಡ್ಡಿ ಅವರು ಮತ್ತೆ ಕೋರ್ಟ್ ಗೆ ಹೋಗ್ತಾರೆ. ಸ್ಟೇ ತರ್ತಾರೆ. ಎಲ್ಲರಿಗೂ ಒಳ್ಳೆಯದಾಗಬೇಕು ನಾನು ರೆಡ್ಡಿ ಅವರಿಗೆ ಬೈದಿಲ್ಲಾ. ಅವರು ಹೇಳಿದ್ದು ತಪ್ಪು ಅಂತ ಹೇಳಿದ್ದೆ. ಜನಾರ್ದನ ರೆಡ್ಡಿ ಗೆ ಕೂಡಾ ಒಳ್ಳೆಯದಾಗಲಿ. ಸಣ್ಣ ಕೋರ್ಟ್ ಹೇಳಿದಾಕ್ಷಣ ಅವರು ಅಪರಾಧಿ ಆಗಲ್ಲಾ. ಸುಪ್ರೀಂ ಕೋರ್ಟ್ ವರಗೆ ಅವಕಾಶ ಇದೆ. ಕಾನೂನು ಹೋರಾಟ ಪ್ರಕ್ರಿಯೇ ನಡೆಯುತ್ತದೆ ಎಂದರು.