ರಾಜಕೀಯರಾಜ್ಯ

ಅನ್ಯಾಯವಾದ ರೈತರಿಗೆ ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರು ಪ್ರತಿಭಟನೆ

 

ಚಿಕ್ಕೋಡಿ: ಭೂಮಿ ಖರೀದಿಯ ವ್ಯಾಜ್ಯವು ನ್ಯಾಯಾಲಯದಲ್ಲಿ ಇರುವಾಗಲೇ ಚಿಕ್ಕೋಡಿ ಉಪನೋಂದನಾಧಿಕಾರಿ ಮತ್ತೊಬ್ಬರಿಗೆ ಆಸ್ತಿಗಳನ್ನು ಮಾರಾಟ ಮಾಡಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಬರುವ ಹದಿನೈದು ದಿನಗಳ ಒಳಗಾಗಿ ರೈತರಿಗೆ ನ್ಯಾಯ ಸಿಗದೇ ಹೋದರೆ ಮಿನಿವಿಧಾನಸೌಧದ ಮುಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಿಕ್ಕೋಡಿ ಹಿರಿಯ ಉಪನೋಂದನಾಧಿಕಾರಿಗಳು ಮಾಡಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ ರೈತರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಚಿಕ್ಕೋಡಿ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧದವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಸಿದ್ದಪ್ಪ ಕರೇಪ್ಪ ಬಂಬಲವಾಡೆ ಅವರ ಅಣ್ಣ-ತಮ್ಮಂದಿರ ನಡುವೆ ಹಿರಿಯರ ಆಸ್ತಿಗಳ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇದ್ದವು. ಆಸ್ತಿಗಳ ವ್ಯಾಜ್ಯಗಳು ಮುಗಿಯುತನಕ ಆಸ್ತಿಗಳನ್ನು ಮಾರಾಟ ಮಾಡಬಾರದೆಂದು ನ್ಯಾಯಾಲಯವು ಆದೇಶ ನೀಡಿದೆ. ಆದರೆ ಹಿರಿಯ ಉಪನೋಂದಣಾಧಿಕಾರಿಗಳು ಬೇರೆಯವರ ಒತ್ತಡಕ್ಕೆ ಮಣಿದು ಆಸ್ತಿಗಳನ್ನು ಮಾರಾಟ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ರೈತ ಸಿದ್ದಪ್ಪ ಬಂಬಲವಾಡೆ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಹಂಚನಾಳ ಗ್ರಾಮದ ಅವ್ವಕ್ಕಾ ಚಿಕ್ಕೋಡಿ ಅವರ ನಾಲ್ಕು ಎಕರೆ ಆಸ್ತಿಯ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಆದರೂ ನ್ಯಾಯಾಲಯ ಆದೇಶ ಉಲ್ಲಂಘಿಸಿ ಆಸ್ತಿಗಳ ಖರೀದಿ ದಸ್ತ ನೋಂದ ಮಾಡಿಸಿ ಅನ್ಯಾಯ ಮಾಡಿದ್ದಾರೆ ಎಂದು ರೈತ ಮಹಿಳೆ ಕಣ್ಣಿರು ಹಾಕಿದಳು.

ರೈತ ಮಹಿಳೆ ಅವ್ವಕ್ಕ ಚಿಕ್ಕೋಡಿ ಮಾತನಾಡಿ ನಮ್ಮ ಮನೆ ಯಜಮಾನ ನಮ್ಮ ಕುಟುಂಬಕ್ಕೆ ಮಾಹಿತಿ ನೀಡದೇ ಬೇರೆವರಿಗೆ ಜಮೀನು ಮಾರಾಟ ಮಾಡಿದ್ದರು. ಅದನ್ನು ರದ್ದು ಮಾಡಬೇಕೆಂದು ನ್ಯಾಯಾಲಯದಲ್ಲಿ ದಾವೆ ಹಾಕಿದ್ದೇವೆ.

ಆದರೆ ಹಿರಿಯ ಉಪನೋಂದಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡಿಕೊಂಡು ನ್ಯಾಯಾಲಯದ ಆದೇಶ ಉಲ್ಲಂಘೀಸಿ ಬೇರೆಯವರ ಜೊತೆ ಶಾಮಿಲಾಗಿ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಈಗ ನಮ್ಮ ಜೀವನ ಹೇಗೆ ನಡೆಯಬೇಕು. ಆಸ್ತಿ ಇದ್ದರೆ ಬೆಳೆ ಬೆಳೆದು ಜೀವನ ಸಾಗಿಸುತ್ತೇವೆ. ಈಗ ಆಸ್ತಿ ಬಿಟ್ಟುಹೋಗಿದೆ. ನಮ್ಮ ಜೀವನದ ಗತಿ ಏನು ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದಳು.

ಪ್ರತಿಭಟನೆಯಲ್ಲಿ ಸಿದ್ದಪ್ಪ ನಿಂಗಪ್ಪ ಬಂಬಲವಾಡೆ, ಅವ್ವಕ್ಕ ಚಿಕ್ಕೋಡಿ, ಶಂಕರ ವಡೇರ, ವಾಸಪ್ಪ ಬಂಬಲವಾಡೆ, ನಿಂಗಪ್ಪ ಚಿಕ್ಕೋಡಿ, ಮಹಾದೇವ ಬಾಗೇವಾಡಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button