
ಭಾನುವಾರ ರಾತ್ರಿ ಬೆಳಗಾವಿಯ ಕಾಲೇಜ್ ರೋಡ್ ಆಸ್ಪತ್ರೆ ಎದುರು ಗೋವಾದ ಇನ್ನೋವ್ಹಾ ಕಾರೊಂದು 3 ಕಾರು ಒಂದು ಬೈಕ್’ಗೆ ಗುದ್ದಿ ಅಪಘಾತಪಡಿಸಿತ್ತು. ಇಂದು ಸೋಮವಾರ ತಡರಾತ್ರಿ ಮತ್ತೊಂದು ಅಪರಿಚಿತ ಗೋವಾ ಪಾಸಿಂಗ್ ಇನ್ನೋವ್ಹಾ ಕಾರು ಅಂಗಡಿ, ಮಿನಿ ಗೂಡ್ಸ್ ರಿಕ್ಷಾ ಮತ್ತು 5 ಬೈಕಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದು ಮೂವರು ಗಾಯಗೊಂಡ ಘಟನೆ ಬೆಳಗಾವಿಯ ಸದಾಶಿವ ನಗರದಲ್ಲಿ ನಡೆದಿದೆ.
ಬೆಳಗಾವಿಯ ಸದಾಶಿವನಗರದಲ್ಲಿರುವ ಅಂಕುಶ್ ಶಾಪ್ ಎದುರಿಗೆ ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ಅತಿವೇಗದಿಂದ ಬಂದ್ ಅಪರಿಚಿತ ಇನ್ನೋವ್ಹಾ ಕಾರೊಂದು ಅಂಗಡಿ ಮುಂದೆ ನಿಲ್ಲಿಸಿದ್ದ, ಮಿನಿ ಗೂಡ್ಸ್, ರಿಕ್ಷಾ, 5 ಬೈಕಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿ ನಿಂತಿದೆ. ಇದರಿಂದಾಗಿ ವಾಹನ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಅಲ್ಲದೇ, ಇನ್ನೋವ್ಹಾ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಅತಿಯಾದ ವೇಗದ ಹಿನ್ನೆಲೆ ನಿಯಂತ್ರಣ ಕಳೆದುಕೊಂಡು ಈ ಘಟನೆ ನಡೆದಿರುವುದಾಗಿ ಹೇಳಲಾಗಿದೆ.