Uncategorized

ರಾಜ್ಯದಲ್ಲಿ ಹೊಸ ಎಚ್.ಎಂ.ಪಿ. ವೈರಸ್ ; ಲಾಕಡೌನ್ ಆಗುತ್ತಾ..!ದಿನೇಶ್ ಗುಂಡುರಾವ್ ಹೇಳಿದ್ದೇನು??

ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಆರೋಗ್ಯ ಲಕ್ಷಣ ಹೆಚ್ಎಂಪಿವಿ ಪ್ರಕರಣವಲ್ಲ. . 2001ರಲ್ಲಿ ಪ್ರಥಮ ಬಾರಿಗೆ ಹೆಚ್ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 ತಿಂಗಳ ಮಗು ನಾರ್ಮಲ್ ಆಗಿದೆ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್ ಆಗಲಿದೆ. ಯಾವುದೇ ರೀತಿ ಭಯ ಪಡುವ ಅಗತ್ಯತೆಯಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು.

ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿದ ಬಳಿಕ ಆರೋಗ್ಯಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಹೆಚ್ಎಂಪಿ ವೈರಸ್ ಇದು ಹೊಸದೇನಲ್ಲ. ಬಹಳ ವರ್ಷಗಳಿಂದ ಹೆಚ್ಎಂಪಿ ವೈರಸ್ ವಿಶ್ವದಾದ್ಯಂತ ಇದೆ. ಹೆಚ್ಎಂಪಿ ವೈರಸ್ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ. ಚೀನಾದಲ್ಲಿ ಮ್ಯೂಟೆಟ್ ಆಗಿದೆಯೋ ಏನೋ ನನಗೆ ಗೊತ್ತಿಲ್ಲ. ಚೀನಾದಲ್ಲಿನ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ದೇಶದಲ್ಲಿ ಹೆಚ್ಎಂಪಿ ವೈರಸ್ ರೀತಿ ನೂರಾರು ವೈರಸ್ಗಳಿವೆ. 2001ರಲ್ಲಿ ಪ್ರಥಮ ಬಾರಿಗೆ ಹೆಚ್ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 ತಿಂಗಳ ಮಗು ನಾರ್ಮಲ್ ಆಗಿದೆ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್ ಆಗಲಿದೆ ಎಂದು ಹೇಳಿದ್ದಾರೆ. 

ಕರ್ನಾಟಕದಲ್ಲಿ 2 ಲಕ್ಷ 36 ಸಾವಿರ ಐಎಲ್ಐ ಕೇಸ್ಗಳಿವೆ. ಐಎಲ್ಐ ಕೇಸ್ನಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಪುದುಚೆರಿ, ಗುಜರಾತ್ನಲ್ಲಿ ಹೆಚ್ಎಂಪಿ ವೈರಸ್ ಪ್ರಕರಣವಿದೆ. ಕೇಂದ್ರ ಸರ್ಕಾರದ ಮಾಹಿತಿ ಅನ್ವಯ ಐಎಲ್ಐ ಕೇಸ್ ಹೆಚ್ಚಾಗಿಲ್ಲ. ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಆರೋಗ್ಯ ಲಕ್ಷಣ ಹೆಚ್ಎಂಪಿವಿ ಪ್ರಕರಣವಲ್ಲ. ರಾಜ್ಯ ಆರೋಗ್ಯ ಇಲಾಖೆಯಲ್ಲಿ ಹಣಕಾಸಿನ ಕೊರತೆಯಿಲ್ಲ. ವೈದ್ಯಕೀಯ ಪರಿಕರ ಖರೀದಿ ಸಹಜವಾಗಿಯೇ ನಡೆಯುತ್ತಿದೆ. ಆಯಾ ಆಸ್ಪತ್ರೆಗಳಿಂದಲೇ ವೈದ್ಯಕೀಯ ಸಾಮಗ್ರಿ ಖರೀದಿ ಮಾಡಲಾಗುವುದು ಎಂದಿದ್ದಾರೆ. 

ಕೇಂದ್ರ ಸರ್ಕಾರ ಐಸಿಎಂಆರ್ ಸರ್ವಲೆನ್ಸ್ ಮಾಡುತ್ತಿದೆ. ಐಸಿಎಂಆರ್ ಪ್ರಕಾರ ಶೇ 1ರಷ್ಟು ಹೆಚ್ಎಂಪಿವಿ ಬರುತ್ತದೆ. ಈ ವೈರಸ್ನಿಂದ ಮರಣ ಪ್ರಮಾಣ ಕಡಿಮೆ. ಬಂದ ಬಳಿಕ ಗುಣಮುಖರಾಗುತ್ತಾರೆ. ಹೆಚ್ಎಂಪಿವಿ ಬಂದ ಎರಡು ಮಕ್ಕಳು ಗುಣಮುಖರಾಗಿದ್ದಾರೆ. ಮಾಸ್ಕ್ ಹಾಕಬೇಕು, ಲಾಕ್ ಡೌನ್ ಮಾಡಬೇಕು ಅಂತಾ ಯಾವುದು ಇಲ್ಲ. ಎಚ್ಚರಿಕೆಯಿಂದ ಇರಬೇಕು ಅಷ್ಟೇ. ಈಗಾಗಲೇ ನಾವು ಕೂಡ ಮಾರ್ಗಸೂಚಿ ಹೇಳಿದ್ದೇವೆ. ಏನು ಮಾಡಬೇಕು, ಏನು ಮಾಡಬಾರದು ಅಂತಾ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button