ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ, ಚಾಲಕನಿಗೆ ಗಾಯ..

ಧಾರವಾಡ ಹೊರವಯಲದ ಕೋಟುರು ಕ್ರಾಸ ಹತ್ತಿರದ ರಾ.ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ, ಚಾಲಕನಿಗೆ ಗಾಯ…. ಗಾಯಾಳು ಚಾಲಕನನ್ನು ರಕ್ಷಿಸಿದ ಸ್ಥಳೀಯರು
ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪಲ್ಟಿಯಾದ ಪರಿಣಾಮ ಚಾಕನಿಗೆ ಗಾಯವಾಗಿರುವ ಘಟನೆ ಇಂದು ಮಧ್ಯಾಹ್ನ ಧಾರವಾಡ ಹೊರವಲಯದ ಕೋಟುರು ಕ್ರಾಸ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಧಾರವಾಡದಿಂದ ಬೆಳಗಾವಿಗೆ ಕಂಟೇನರ್ ವಾಹನ ತೆರಳುತಿತ್ತು, ಈ ವೇಳೆ ಚಾಲಕನ ನಿಯಂತ್ರ ತಪ್ಪಿ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಲ್ಲ. ಇನ್ನೂ ಘಟನೆ ನಡೆಯುತ್ತಿದಂತೆ ಸ್ಥಳೀಯ ಗೂಡ್ಸ್ ವಾಹನ ಚಾಲಕರು ಮತ್ತು ಗ್ರಾಮಸ್ಥರೆಲ್ಲರು ಸೇರಿ ಕಂಟೇನರ್ ಚಾಲಕನನ್ನು ಸುರಕ್ಷೀತವಾಗಿ ಹೊರತಂದು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ಕೈಗೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.