ಬಾಗಲಕೋಟೆ
ಯುಗಾದಿಯ ದಿನದಂದೇ ಬಾಗಲಕೋಟೆಯಲ್ಲಿ ದುರಂತ…ಒಬ್ಬನ ಮೃತದೇಹ ಪತ್ತೆ…ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ

ಬಾಗಲಕೋಟೆ: ಒಬ್ಬನ ಮೃತದೇಹ ಪತ್ತೆ…ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ
ಯುಗಾದಿ ಹಬ್ಬದಂದು ನದಿಯಲ್ಲಿ ಈಜಲು ಹೋಗಿ ಮೂರು ಬಾಲಕರು ನೀರು ಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಸೀತಿಮನಿಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಸೀತಿಮನಿಯಲ್ಲಿ ಯುಗಾದಿ ಹಬ್ಬದ ದಿನವೇ ದುರಂತವೊಂದು ನಡೆದಿದೆ. ನಿನ್ನೆ ಸೀತಿಮನಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ, ಇಲಾಳದ ಮಲ್ಲಪ್ಪ (16) ಪರನಗೌಡ (17) ಮತ್ತು ಸೋಮಶೇಖರ್(15) ನೀರು ಪಾಲಾಗಿದ್ದಾರೆ. ಮೂವರಲ್ಲಿ ನಿನ್ನೆ ಬಾಲಕ ಸೋಮಶೇಖರನ ಮೃತದೇಹ ಪತ್ತೆಯಾಗಿದೆ. ಎರಡನೇ ದಿನವು ಇಬ್ಬರ ಮೃತದೇಹ ಶೋಧ ಕಾರ್ಯವನ್ನು ಅಗ್ನಿಶಾಮಕ ದಳ ಮುಂದುವರೆಸಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.