
ಕಾಗವಾಡ ತಾಲೂಕಾ ನ್ಯಾಯವಾದಿ ಸಂಘದ ವತಿಯಿಂದ ಹಮ್ಮಿಕೊಂಡ ಮುಸ್ಕರ ಮಾಜಿ D.C.M. ಲಕ್ಷö್ಮಣ ಸವದಿ ಇವರು ನೀಡಿರುವ ಭರವಸೆ ಹಿನ್ನಲೆಯಲ್ಲಿ ಹಿಂದಕ್ಕೆ ಪಡೆಯಲಾಯಿತು.
ಕಾಗವಾಡ ತಾಲೂಕಿನ ನ್ಯಾಯವಾದಿ ಸಂಘದ ವತಿಯಿಂದ ನ್ಯಾಯಲಯ ಕಟ್ಟಡ ಮಾಡಲು ಸ್ಥಳದ ಬೇಡಿಕೆಗಾಗಿ ಕಾಗವಾಡ ತಾಲೂಕಾ ನ್ಯಾಯವಾದಿ ಸಂಘದ ವತಿಯಿಂದ ದಿ. ೧೧ ರಿಂದ ದಿ. ೧೫ ವರೆಗೆ ಹಮ್ಮಿಕೊಂಡ ಮುಸ್ಕರ ಅಥಣಿ ಶಾಸಕರು ಹಾಗೂ ಮಜಿ ಡಿ.ಸಿ.ಎಮ್. ಲಕ್ಷö್ಮಣ ಸವದಿ ಇವರು ನಿಮ್ಮ ಬೇಡಿಕೆ ಇಡೇರಿಸಲು ಸಂರ್ಫೂವಾಗಿ ಸಕಲರಿಸಿ ಬರುವ ಚಳಿಗಾಲ ಅಧಿವೇಶನ ಪೂರ್ವದಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂಬ ಭರವಸೆಯಿಂದ ನ್ಯಾಯವಾದಿ ಸಂಘದ ಮುಸ್ಕರ ಹಿಂದಕೆಕ ಪಡೆಯಲಾಗುತ್ತಿಎ ಎಂದು ಸಂಘದ ಅಧ್ಯಕ್ಷ ಪ್ರಕಾಶ ಮಾನೆ ಇವರು ತಿಳಿಸಿದರು.
ಶುಕ್ರವಾರಂದು ಕಾಗವಾಡದ ನ್ಯಾಯವಾದಿ ಸಂಘದ ಮುಸ್ಕರ ಸ್ಥಳಕ್ಕೆ ಮಾಜಿ ಡಿ.ಸಿ.ಎಮ್.ಲಕ್ಷ÷್ಕಂಣ ಸವದಿ ಭೇಟಿ ನೀಡಿ ನಾನು ಸಹಕಾರ ಸಚಿವ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ ನಿಮ್ಮ ಬೇಡಿಕೆ ನನ್ನ ಗಮನಕ್ಕೆ ಇದೆ ಸ್ಥಳೀಯ ಶಾಸಕ ರಾಜು ಕಾಗೆ ಇವರನ್ನು ತೆಗೆದುಕೊಂಡ ರಾಜ್ಯ ಸರಕಾರದ ಮುಖ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಬರುವ ಚಳಿಗಾಲದ ಅಧಿವೇಶನ ಪೂರ್ವದಲ್ಲಿ ಸಿಹಿ ಸುದ್ದಿ ನೀಡುತ್ತೇನೆ ಒಂದು ವೇಳೆ ವಿಳಂಬವಾದಲ್ಲಿ ಇದೇ ಟೇಂಟಿನಲ್ಲಿ ನಿಮ್ಮೊಂದಿಗೆ ಮುಸ್ಕರಕ್ಕೆ ಕುಳಿತು ನಿಮ್ಮ ಬೇಡಿಕೆ ಇಡೆರಿಸುವರೆಗೆ ನಿಮ್ಮೊಂದಿಗೆ ಇರುತ್ತೇನೆ ಎಂಬ ಭರವಸೆ ನೀಡಿ ಮುಸ್ಕರ ಹಿಂದಕ್ಕೆ ಪಡೆಯಲು ಕೇಳಿಕೊಂಡರು.
ಮಾಜಿ ಡಿ.ಸಿ.ಎಮ್.ಲಕ್ಷö್ಮಣ ಸವದಿ ಇವರು ನೀಡಿರುವ ಭರವಸೆ ಹಿನ್ನಲೆಯಲ್ಲಿ ಸಂಘದ ಸದಸ್ಯರು ಸಭೆ ಸೇರಿ ಸದ್ಯಕ್ಕೆ ಪ್ರಾರಂಭಿಸಿದ ಮುಸ್ಕರ ಹಿಂದಕ್ಕೆ ಪಡೆದು ಅವರಿಗೆ ಸಾತ ನೀಡೋಣ ಎಂದು ನಿರ್ಣಐ ಕೈಗೊಂಡರು ಇದರಲ್ಲಿ ವಿಳಂಬವಾದಲ್ಲಿ ಮತ್ತೆ ಉಗ್ರವಾದ ಹೋರಾಟಕ್ಕೆ ನಾವೆಲ್ಲರು ಸಿದ್ದರಿದೇವೆ ಎಂದು ನಿರ್ಣಯ ಕೈಗೊಂಡರು.
ನ್ಯಾಯವಾದಿ ಸಂಘದ ಅಧ್ಯಕ್ಷ ಪ್ರಕಾಶ ಮಾನೆ, ಉಪಾಧ್ಯಕ್ಷ ಬಿ.ಎ.ಮಗದುಮ್ಮ. ಕಾರ್ಯದರ್ಶಿ ಎಮ್.ಜಿ.ವಡ್ಡರ, ಹಾಗೂ ಎಲ್ಲ ಸದಸ್ಯರು ತಹಶೀಲ್ದಾರ ರಾಜೇಶ ಬುರ್ಲಿ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.
ಕಳೆದ ಐದು ದಿನಗಳಿಂದ ನ್ಯಾಯವಾದಿಗಳು ದಿನನಿತ್ಯದ ತಮ್ಮ ಕಾರ್ಯಕಲಾಪಕ್ಕೆ ವಿರಾಮ ಹೇಳಿ ಮುಸ್ಕರದಲ್ಲಿ ಪಾಲ್ಗೊಂಡಿದ್ದರು ಮತ್ತು ಕೆಲ ಸದಸ್ಯರು ಸರಕಾರದ ವರ್ದುದ ತಮ್ಮ ಅಕ್ರೋಶ ಹೋರ ಹಾಕಿದರು ಅಥಣಿ ಮತ್ತು ಕಾಗವಾಡ ಕ್ಷೇತ್ರದ ಶಾಸಕರು ಭೇಟಿ ನೀಡಿ ಬೆಡಿಕೆಗಳು ಇಡೆರಿಸಲು ಮುಂದಾಗಿದ್ದರಿಮದ ಸದಸ್ಯರು ಸಂತಸ ವ್ಯಕ್ತ ಪಡಿಸಿದರು.